ಸುದ್ದಿ

ಪೆಟ್ರೋಲ್ ಬೇಕು ಅಂದ್ರೆ ಈ ನಿಯಮವನ್ನು ಪಾಲಿಸಲೇಬೇಕು …!

By admin

July 29, 2019

ಬೆಂಗಳೂರು:  ಜನರಿಗೆ ಅನುಕೂಲ ಆಗಲಿ ಅಂತ ಸರ್ಕಾರ ಮತ್ತು ಪೊಲೀಸರು ಅನೇಕ ಕಾನೂನುಗಳನ್ನು ಜಾರಿಗೆ ತರ್ತಾರೆ.. ಆದರೆ ಅದನ್ನ ಪಾಲಿಸೋದು ಮಾತ್ರ ಕಡಿಮೆ. ಇದೀಗ ಸಂಚಾರಿ ಪೊಲೀಸರು ಮತ್ತೊಂದು ಕಾನೂನು ಜಾರಿಗೆ ಕೈ ಹಾಕ್ತಿದ್ದಾರೆ.

ಬೈಕ್ ಸವಾರರ ಸೇಫ್ಟಿಗಾಗಿ ಪೊಲೀಸರ ಹೊಸ ಪ್ರಯೋಗ ..!

ದಿನದಿಂದ ದಿನಕ್ಕೆ ಬೆಳೀತಿರೋ ಸಿಲಿಕಾನ್ ಸಿಟಿ ಬೆಂಗಳೂರು ವಿಶ್ವದಲ್ಲೇ ಅತೀ ಹೆಚ್ಚು ಬೈಕ್‌ಗಳನ್ನು ಹೊಂದಿರೋ ನಗರ. ಹೀಗಾಗಿ ಬೆಂಗಳೂರಿನಲ್ಲಿ ಆ್ಯಕ್ಸಿಡೆಂಟ್ ಕೂಡ ಹೆಚ್ಚಾಗ್ತಿದೆ. ಅಪಘಾತ ತಪ್ಪಿಸಲು ಎಷ್ಟೇ ಕಾನೂನು ಜಾರಿಗೆ ತಂದರು ಅನುಷ್ಠಾನ ಮಾತ್ರ ಆಗ್ತಿಲ್ಲ, ಹೀಗಾಗಿ ಉತ್ತರ ಭಾರತದಲ್ಲಿ ಜಾರಿಗೆ ಬಂದಿರೋ ಕಾನೂನನ್ನು ಬೆಂಗಳೂರಲ್ಲೂ ಜಾರಿಗೆ ತರಲು ಪೊಲೀಸರು ಮುಂದಾಗಿದ್ದಾರೆ.

ಹೆಲ್ಮೆಟ್ ಇದ್ದರೆ ಮಾತ್ರ ಬಂಕ್ ಗಳಲ್ಲಿ ಪೆಟ್ರೊಲ್ ..!

ಉತ್ತರ ಭಾರತದ ಹಲವೆಡೆ ಹೆಲ್ಮೆಟ್ ಇಲ್ಲದಿದ್ರೆ ಬಂಕ್‌ಗಳಲ್ಲಿ ಪೆಟ್ರೋಲ್ ಹಾಕೋದಿಲ್ಲ, ಬೆಂಗಳೂರಲ್ಲೂ ಸದ್ಯದಲ್ಲೇ ಈ ನಿಯಮ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ.

ಪೆಟ್ರೋಲ್ ಬಂಕ್ ಮಾಲೀಕರ ಜೊತೆ ಚರ್ಚಿಸಿ ಮೊದಲಿಗೆ ಬೆಂಗಳೂರಲ್ಲಿ ಬಳಿಕ ರಾಜ್ಯಾದ್ಯಂತ ಜಾರಿಗೆ ತರೋದಾಗಿ ನಗರ ಹೆಚ್ಚುವರಿ ಸಂಚಾರಿ ಪೊಲೀಸ್ ಆಯುಕ್ತ ಹರಿಶೇಖರನ್ ತಿಳಿಸಿದ್ದಾರೆ.