ಪೆಟ್ರೋಲ್ ಬೆಲೆ 2014ರ ನಂತರ ಭಾರೀ ಏರಿಕೆಯಾಗಿದೆ. ಜುಲೈ ತಿಂಗಳಿನಿಂದ ದೇಶದಾದ್ಯಂತ ಜಾರಿಗೆ ಬಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡೀಸೆಲ್‌ಗಳನ್ನು ತಂದರೆ ಇವುಗಳ ಬೆಲೆ ಅರ್ಧದಷ್ಟು ಅಗ್ಗವಾಗಲಿದೆ ಎಂದು ದತ್ತಾಂಶಗಳನ್ನು ವಿಶ್ಲೇಷಿಸುವ ಫ್ಯಾಕ್ಟಲಿಡಾಟ್‌ಇನ್ (Factly.in) ಅಂತರ್ಜಾಲ ತಾಣವು ಅಭಿಪ್ರಾಯಪಟ್ಟಿದೆ.
2014ರ ನವೆಂಬರ್‌ನಿಂದ 2016ರ ಜನವರಿವರೆಗೆ ಕೇಂದ್ರ ಸರ್ಕಾರವು ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಒಂಬತ್ತು ಬಾರಿ ಏರಿಕೆ ಮಾಡಿತ್ತು.
ಜಿಎಸ್‌ಟಿಯ ವಿವಿಧ ತೆರಿಗೆ ಹಂತಗಳನ್ನು ಅನ್ವಯಿಸಿದರೆ ಅದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಬೆಂಗಳೂರಿನಲ್ಲಿ ಎಷ್ಟು ಅಗ್ಗವಾಗಲಿದೆ ಎನ್ನುವ ವಿವರಗಳನ್ನು ಇಲ್ಲಿ ಪ್ರತ್ಯೇಕವಾಗಿ ನೀಡಲಾಗಿದೆ.
ಹೌದು, Factly.in ವೆಬ್‍ಸೈಟ್ ಈ ವರದಿ ಪ್ರಕಟಿಸಿದ್ದು ಒಂದು ವೇಳೆ ಪೆಟ್ರೋಲ್‍ಗೆ ಶೇ.18 ರಷ್ಟು ತೆರಿಗೆ ವಿಧಿಸಿದರೆ ಬೆಲೆ 40 ರೂ. ಆಗುತ್ತದೆ ಎಂದು ಹೇಳಿದೆ. ಪ್ರಸ್ತುತ ಭಾರತದಲ್ಲಿ ವಸ್ತುಗಳ ಮೇಲೆ ಶೇ.5, ಶೇ.12, ಶೇ.18, ಶೇ.28 ಜಿಎಸ್‍ಟಿ ತೆರಿಗೆ ವಿಧಿಸಲಾಗುತ್ತದೆ. ಹೀಗಾಗಿ ಈ ಪೆಟ್ರೋಲ್ ಗೆ ಎಷ್ಟು ಜಿಎಸ್‍ಟಿ ಹಾಕಿದ್ರೆ ಎಷ್ಟು ರೂ. ಆಗಬಹುದು ಎನ್ನುವ ವಿವರಣೆಯಲ್ಲಿ ಈ ವೆಬ್‍ಸೈಟ್ ಪ್ರಕಟಿಸಿದೆ.
2014ರ ನವೆಂಬರ್‌ನಿಂದ 2016ರ ಜನವರಿವರೆಗೆ ಕೇಂದ್ರ ಸರ್ಕಾರವು ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಒಂಬತ್ತು ಬಾರಿ ಏರಿಕೆ ಮಾಡಿತ್ತು.
ಜಿಎಸ್‌ಟಿಯ ವಿವಿಧ ತೆರಿಗೆ ಹಂತಗಳನ್ನು ಅನ್ವಯಿಸಿದರೆ ಅದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಬೆಂಗಳೂರಿನಲ್ಲಿ ಎಷ್ಟು ಅಗ್ಗವಾಗಲಿದೆ ಎನ್ನುವ ವಿವರಗಳನ್ನು ಇಲ್ಲಿ ಪ್ರತ್ಯೇಕವಾಗಿ ನೀಡಲಾಗಿದೆ.
ಜಿಎಸ್‍ಟಿಯಲ್ಲಿ ಎಷ್ಟು ತೆರಿಗೆ ವಿಧಿಸಿದ್ರೆ, ಎಷ್ಟು ಬೆಲೆ ಆಗುತ್ತಾ ಗೊತ್ತಾ ಪೆಟ್ರೋಲ್? ಈಗ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 71.17 ರೂ. ಇದೆ.
ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್ ಬಂದ್ರೆ..
ಶೇ.12% ತೆರಿಗೆ-38.01 ರೂ.,
ಶೇ.18% ತೆರಿಗೆ – 40.05 ರೂ.,
ಶೇ.28% ತೆರಿಗೆ – 43.44 ರೂ. ಆಗಬಹುದು.
ಶೇ. 28ಕ್ಕಿಂತ ಹೆಚ್ಚು ತೆರಿಗೆ ವಿದಿಸಿದ್ರೆ 50.91 ಆಗಬಹುದು.
ಮೂಲ:-Factly.in
ಹಾಗಾದ್ರೆ ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್ ಬರುತ್ತಾ? ಕೇಂದ್ರ ಹಣಕಾಸು ಸಚಿವರು, ರಾಜ್ಯಗಳ ಹಣಕಾಸು ಸಚಿವರು ಇರುವ ಜಿಎಸ್‍ಟಿ ಮಂಡಳಿಯಲ್ಲಿ ಒಪ್ಪಿಗೆ ಸಿಕ್ಕಿದರೆ ಪೆಟ್ರೋಲ್ ಬೆಲೆ ಕಡಿಮೆಯಾಗಬಹುದು. ಈಗಾಗಲೇ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದರೆ ದೇಶಾದ್ಯಂತ ಏಕರೂಪದ ದರ ವಿಧಿಸಬಹುದು ಎಂದು ಹೇಳಿದ್ದಾರೆ. ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿರುವ ಕಾರಣ ಎಲ್ಲ ರಾಜ್ಯಗಳು ಒಪ್ಪಿಗೆ ನೀಡಿದರೆ ಬೆಲೆ ಕಡಿಮೆಯಾಗಬಹುದು.