Woman with multiple cigarettes in mouth, man holding match

ಜೀವನಶೈಲಿ

ಪುರುಷರಿಗಿಂತ ಮಹಿಳೆಯರಿಗೆ ಧೂಮಪಾನ ಬಿಡೋದು ಕಷ್ಟ..!ಏಕೆ ಗೊತ್ತಾ..?

By admin

February 10, 2018

ಸಿಗರೇಟ್ ಸೇದುವದನ್ತೂ ಈಗ ಪ್ಯಾಶನ್ ಆಗಿಬಿಟ್ಟಿದೆ.ಈಗಂತೂ ಪುರುಷರಿಗಿಂತ ಮಹಿಳೆಯರೇ ಧೂಮಪಾನ ಮಾಡೋದ್ರಲ್ಲಿ ಮುಂದಿರುತ್ತಾರೆ.

ಆದ್ರೆ ಶಾಕಿಂಗ್ ನ್ಯೂಸ್ ಏನಂದ್ರೆ,ಮಹಿಳೆಯರು  ಒಂದು ಬಾರಿ ಸಿಗರೇಟ್ ಸೇದುವ ಚಟಕ್ಕೆ ಬಿದ್ರೆ, ಬಿಡುವುದು ತುಂಬಾ ಕಷ್ಟವಂತೆ.ಹೌದು, ಅಧ್ಯಯನ ವರದಿಯೊಂದರ ಪ್ರಕಾರ, ಪುರುಷರಿಗಿಂತ ಮಹಿಳೆಯರಿಗೆ ಧೂಮಪಾನ ತ್ಯಜಿಸುವುದು ಸವಾಲಿನ ಸಂಗತಿಯಂತೆ.

ಯಾವುದೇ ವ್ಯಕ್ತಿ ಧೂಮಪಾನ ಮಾಡಿದರೆ ತಂಬಾಕು ಹಾಗೂ ನಿಕೋಟಿನ್ ನೇರವಾಗಿ ಶ್ವಾಸಕೋಶಕ್ಕೆ ಸೇರುತ್ತದೆ. ಆದರೆ ಸ್ಕಿನ್ ಪ್ಯಾಚಸ್ ನಿಂದಾಗಿ ಹಾಗೂ ತಂಬಾಕು ಜಗಿಯುವುದರಿಂದ ನಿಕೋಟಿನ್ ಚರ್ಮ ಹಾಗೂ ಜೀರ್ಣವ್ಯವಸ್ಥೆಯೊಳಗೂ ಸೇರುತ್ತದೆ. ತಂಬಾಕು, ನಿಕೋಟಿನ್ ನ್ನು ಇಲಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ಗಂಡು ಹಾಗೂ ಹೆಣ್ಣು ಇಲಿಗಳ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರಿದೆ.

ಏಕೆ ಹೀಗೆ..

ನರಮಂಡಲಕ್ಕೆ ಸಂಬಂಧಿಸಿರುವ ಕಾಂಪೌಂಡ್ ಗಳ ಪ್ರಮಾಣ, ಬ್ಯಾಕ್ಟೀರಿಯಾ ಜೀನ್ಗಳು ಗಂಡು ಹಾಗೂ ಹೆಣ್ಣು ಇಲಿಗಳಲ್ಲಿ ಭಿನ್ನವಾಗಿದ್ದು, ಹೆಣ್ಣಿನಲ್ಲಿ ಧೂಮಪಾನ ವ್ಯಸನಕ್ಕೀಡಾಗುವ ಅಂಷಗಳು ಹೆಚ್ಚು ಕಂಡುಬಂದಿದ್ದು, ಗಂಡಿನಲ್ಲಿ ಕಡಿಮೆ ಪ್ರಮಾಣ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಧೂಮಪಾನ ತ್ಯಜಿಸುವುದು ಪುರುಷರಿಗಿಂತ, ಮಹಿಳೆಯರಿಗೆ ಕಷ್ಟ ಎಂದು ಸಂಶೋಧಕರು ವಿಶ್ಲೇಷಿಸುತ್ತಿದ್ದಾರೆ.