ಆರೋಗ್ಯ

ಪುದೀನಾ ಎಲೆಗಳಲ್ಲಿ ಇರುವ ಆರೋಗ್ಯಕಾರಿ ಲಾಭಗಳ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ..

By admin

December 26, 2017

ಪುದೀನಾ ಎಲೆಗಳು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸಿ ಕೆಟ್ಟ ಉಸಿರನ್ನು ತಡೆಯುವುದು. ಪುದೀನಾವನ್ನು ಏಶ್ಯಾ, ಯುರೋಪ್ ಮತ್ತು ಮಧ್ಯಪೂರ್ವ ದೇಶಗಳಲ್ಲಿ ಬೆಳೆಸಲಾಗುತ್ತದೆ. ಇದನ್ನು ತಾಜಾ, ಒಣಗಿಸಿ ಹಾಗೂ ಸಾರಭೂತ ತೈಲವಾಗಿ ಬಳಸಿಕೊಳ್ಳಲಾಗುವುದು. ಯಾವುದೇ ರೂಪದಲ್ಲಿ ಬಳಸಿದರೂ ಪುದೀನಾವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆರೋಗ್ಯ ಗುಣಗಳನ್ನು ಹೊರತುಪಡಿಸಿ ಪುದೀನಾ ಎಲೆಗಳು ಸೊಳ್ಳೆ ಮತ್ತು ಕೀಟಗಳನ್ನು ಓಡಿಸುವಲ್ಲಿ ಪರಿಣಾಮಕಾರಿ.

ಇದರಲ್ಲಿ ಕೀಟಾಣು ವಿರೋಧಿ ಗುಣಗಳಿವೆ. ಇಷ್ಟು ಮಾತ್ರವಲ್ಲದೆ ಪುದೀನಾ ಎಲೆಗಳು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸಿ ಕೆಟ್ಟ ಉಸಿರನ್ನು ತಡೆಯುವುದು. ಪುದೀನಾವನ್ನು ಏಶ್ಯಾ, ಯುರೋಪ್ ಮತ್ತು ಮಧ್ಯಪೂರ್ವ ದೇಶಗಳಲ್ಲಿ ಬೆಳೆಸಲಾಗುತ್ತದೆ. ಇದನ್ನು ತಾಜಾ, ಒಣಗಿಸಿ ಹಾಗೂ ಸಾರಭೂತ ತೈಲವಾಗಿ ಬಳಸಿಕೊಳ್ಳಲಾಗುವುದು.

ಒಂದು ಲೋಟ ‘ಪುದೀನಾ ಜ್ಯೂಸ್‌’ನಲ್ಲಿದೆ ಔಷಧೀಯ ಶಕ್ತಿ! ಯಾವುದೇ ರೂಪದಲ್ಲಿ ಬಳಸಿದರೂ ಪುದೀನಾವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆರೋಗ್ಯ ಗುಣಗಳನ್ನು ಹೊರತುಪಡಿಸಿ ಪುದೀನಾ ಎಲೆಗಳು ಸೊಳ್ಳೆ ಮತ್ತು ಕೀಟಗಳನ್ನು ಓಡಿಸುವಲ್ಲಿ ಪರಿಣಾಮಕಾರಿ. ಪುದೀನಾ ಎಲೆಗಳಿಂದ ಆಗುವಂತಹ ಲಾಭಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ ವಿಟಮಿನ್ ಸಿ ಹೆಚ್ಚಿಸುವುದು:-

ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಪುದೀನಾ ಎಲೆಗಳು ಪ್ರತಿರೊಧಕ ಶಕ್ತಿ ಹೆಚ್ಚಿಸುವುದು. ನೀವು ಸೇವಿಸುವ ಆಹಾರದಲ್ಲಿ ಪುದೀನಾದ ಕೆಲವು ಎಲೆಗಳನ್ನು ಹಾಕಿದರೆ ಒಳ್ಳೆಯ ಫಲಿತಾಂಶ ಸಿಗುವುದು.

ಬಾಯಿಯ ಕೆಟ್ಟ ವಾಸನೆ ತಡೆಯುವುದು :-

ಪುದೀನಾದಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಪುದೀನಾದ ಪ್ರಮುಖ ಆರೋಗ್ಯ ಗುಣಗಳಲ್ಲಿ ಒಂದಾಗಿದೆ.

ಕೆಲವು ಪುದೀನಾ ಎಲೆಗಳನ್ನು ತೆಗೆದುಕೊಂಡು ಜಗಿಯಿರಿ. ಇದು ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾದ ನಿವಾರಣೆ ಮಾಡುವುದು.

ಅಜೀರ್ಣ ನಿವಾರಣೆ :-

ನೀವು ಅಜೀರ್ಣದಿಂದ ಬಳಲುತ್ತಾ ಇದ್ದರೆ ಪುದೀನಾ ಎಲೆಗಳು ನಿಮ್ಮ ನೆರವಿಗೆ ಬರಲಿದೆ. ಪುದೀನಾ ಎಲೆಗಳು ಜೊಲ್ಲುರಸದ ಗ್ರಂಥಿಗಳನ್ನು ಕ್ರಿಯಾತ್ಮಕಗೊಳಿಸುವುದು ಮತ್ತು ಕಿಣ್ವಗಳನ್ನು ಪ್ರೇರೇಪಿಸುವ ಮೂಲಕ ಜೀರ್ಣಕ್ರಿಯೆಗೆ ಶಕ್ತಿ ನೀಡುವುದು.

ಕೆಲವು ತಾಜಾ ಪುದೀನಾ ಎಲೆಗಳನ್ನು ತೆಗೆದುಕೊಂಡು ಅದನ್ನು ಒಂದು ಲೋಟ ನೀರಿಗೆ ಹಾಕಿ ಮತ್ತು ಐದು ನಿಮಿಷ ಕಾಲ ಹಾಗೆ ಬಿಡಿ. ಬಳಿಕ ನೀರನ್ನು ಕುಡಿಯಿರಿ.

ಶ್ವಾಸಕೋಶದ ರೋಗ ತಡೆಯುವುದು :-

ನಿಮಗೆ ಕೆಲವೊಮ್ಮೆ ಉಸಿರಾಡಲು ತುಂಬಾ ಕಷ್ಟವಾಗುತ್ತಿದೆ ಎಂದಾದರೆ ನೀವು ಕೆಲವು ಪುದೀನಾ ಎಲೆಗಳನ್ನು ತೆಗೆದುಕೊಳ್ಳಿ. ಪುದೀನಾ ಎಲೆಗಳಲ್ಲಿ ರೊಸ್ಮರಿನಿಕ್ ಆಮ್ಲವಿದೆ. ಇದು ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿದೆ.

ಇದು ಫ್ರೀ ರ್ಯಾಡಿಕಲ್ ಅನ್ನು ತಟಸ್ಥಗೊಳಿಸುವುದು ಮತ್ತು ಉರಿಯೂತದ ರಾಸಾಯನಿಕವನ್ನು ನಿರ್ಬಂಧಿಸುವುದು. ಇದರಿಂದ ಉಸಿರಾಟದ ವ್ಯವಸ್ಥೆಗೆ ಪರಿಣಾಮವಾಗುವುದು. ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಪುದೀನಾವನ್ನು ಬಳಸಿಕೊಂಡರೆ ಉಸಿರಾಟದ ಸಮಸ್ಯೆ ನಿವಾರಣೆಯಾಗುವುದು.

ತಲೆನೋವು ಮತ್ತು ವಾಕರಿಕೆ ನಿವಾರಣೆ :-

ಪುದೀನಾ ಎಲೆಗಳಲ್ಲಿ ಉರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಇವೆ. ಪುದೀನಾ ಎಣ್ಣೆ ತೆಗೆದುಕೊಂಡು ಅದನ್ನು ಹಣೆಗೆ ಹಚ್ಚಿಕೊಳ್ಳಿ ಇದರಿಂದ ತಲೆನೋವು ಮತ್ತು ವಾಕರಿಕೆ ನಿವಾರಣೆಯಾಗುವುದು. ತೂಕ ಕಳೆದುಕೊಳ್ಳಲು:-

ಪುದೀನಾ ತುಂಬಾ ಕಡಿಮೆ ಕ್ಯಾಲರಿಗಳನ್ನು ಒಳಗೊಂಡಿರುವಂತಹ ಗಿಡಮೂಲಿಕೆ ಮತ್ತು ಇದರಲ್ಲಿ ನಾರಿನಾಂಶವು ಅಧಿಕವಾಗಿದೆ. ಪುದೀನಾ ಎಲೆಗಳು ಜೀರ್ಣಕ್ರಿಯೆ ಕಿಣ್ವಗಳನ್ನು ಉತ್ತೇಜಿಸುವುದು.

ಇದರಿಂದ ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುವುದು. ಕೊಬ್ಬು ದಹಿಸುವ ಮೂಲಕ ಶಕ್ತಿ ಬಿಡುಗಡೆಯಾಗುವುದು. ನಿಮಗೆ ತೂಕ ಕಳೆದುಕೊಳ್ಳಬೇಕೆಂದು ಮನಸ್ಸಿದ್ದರೆ ಪುದೀನಾವನ್ನು ದೈನಂದಿನ ಆಹಾರದಲ್ಲಿ ಬಳಸಿ.