ಭವಿಷ್ಯ

ಪಿಯುಸಿ ನಂತರ ಹೆಚ್ಚಾಗಿ ಆರ್ಟ್ಸ್‌ ಆಯ್ಕೆ ಮಾಡುಕೊಳ್ಳುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಗೂಡ್ ನ್ಯೂಸ್..!ತಿಳಿಯಲು ಈ ಲೇಖನ ಓದಿ…

By admin

January 16, 2018

ಬಹಳಷ್ಟು ವಿದ್ಯಾರ್ಥಿಗಳು ಪಿಯುಸಿ ನಂತರ ಹೆಚ್ಚಾಗಿ ಆರ್ಟ್ಸ್‌ ಆಯ್ಕೆ ಮಾಡುಕೊಳ್ಳುತ್ತಾರೆ. ಆದರೆ ಹೆಚ್ಚಿನವರ ನಂಬಿಕೆ ಏನೆಂದರೆ ಸಯನ್ಸ್‌ ಮತ್ತು ಕಾಮರ್ಸ್‌ನಲ್ಲಿ ಇರೋವಷ್ಟು ಕರಿಯರ್‌ ಆಪ್ಷನ್‌ ಆರ್ಟ್ಸ್‌ನಲ್ಲಿ ಇಲ್ಲ ಎಂದು ಹೇಳಲಾಗುತ್ತದೆ. ಆದರೆ ಅದು ಸುಳ್ಳು ಆರ್ಟ್ಸ್‌‌ನಲ್ಲಿ ಬಹಳಷ್ಟು ಕರಿಯರ್‌ ಅವಕಾಶಗಳು ಇವೆ. ಅದಕ್ಕಾಗಿ ನೀವು ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಸ್ವಲ್ಪ ಮಾಹಿತಿ ಇಲ್ಲಿ ತಿಳಿದುಕೊಳ್ಳಬೇಕು.

ಎಕನಾಮಿಕ್ಸ್‌ನಲ್ಲಿ ಬಿಎ : –

ಬ್ಯಾಂಕಿಂಗ್‌ ಅಥವಾ ಫಿನಾನ್ಸ್‌ನಲ್ಲಿ ಕರಿಯರ್‌ ಮುಂದುವರಿಸಿಕೊಂಡು ಹೋಗಲು ನೀವು ಮೂರು ವರ್ಷಗಳ ಇಕನಾಮಿಕ್ಸ್‌ನಲ್ಲಿ ಬಿಎ ಪದವಿ ಪಡೆಯಬೇಕು. ಇದರಿಂದ ನಿಮಗೆ ಹಲವಾರು ಕ್ಷೇತ್ರಗಳಲ್ಲಿ ಹುದ್ದೆಗಳ ಅವಕಾಶಗಳು ಸಿಗುತ್ತವೆ.

ಬಿಎ ಇನ್‌ ಸೈಕಾಲಜಿ :  

ಹೆಚ್ಚಿನವರು ವೈದ್ಯರಾಗಬೇಕಾದರೆ ಸಯನ್ಸ್‌ ಓದಬೇಕು ಎಂದು ಅದನ್ನೆ ಆಯ್ಕೆ ಮಾಡುತ್ತಾರೆ. ಆದರೆ ಸೈಕಾಲಜಿಯನ್ನು ಓದುವ ಮೂಲಕ ನೀವು ಮನುಷ್ಯನ ಮನಸ್ಸು ಮತ್ತು ದೇಹವನ್ನು ಅರ್ಥ ಮಾಡಿಕೊಳ್ಳಬಹುದು. ಇದಕ್ಕಾಗಿ ಸಯನ್ಸ್‌ ಓದಬೇಕೆಂದೇನೂ ಇಲ್ಲ.

ಬಿಎಯಲ್ಲಿ ಸೈಕಾಲಜಿ ಓದಿದರೆ ಸಾಕು. ಈ ಡಿಗ್ರಿ ಪಡೆದರೆ ಮುಂದೆ ನೀವು ಮಕ್ಕಳ ಸೈಕಾಲಜಿಸ್ಟ್‌,ಪರಿಸರ ಮನಶ್ಶಾಸ್ತ್ರಜ್ಞ, ಕ್ರಿಮಿನಲ್ ಮನಶ್ಶಾಸ್ತ್ರಜ್ಞರು ಕೂಡ ಆಗಬಹುದು.

ಬಿಎ ಇಂಗ್ಲಿಷ್‌ ಲಿಟ್ರೇಚರ್‌ :  

ಇಂಗ್ಲಿಷ್‌ ಎಂಬುದು ಸುಂದರವಾದ ಭಾಷೆಯಾಗಿದೆ. ಇದು ಪ್ರತಿಯೊಬ್ಬರಿಗೂ ಒಂದು ಚಾಲೆಂಜ್‌ ನೀಡುತ್ತದೆ. ಇಂಗ್ಲಿಷ್‌ ಲಿಟ್ರೇಚರ್‌ನಲ್ಲಿ ನೀವು ಬಿಎ ಮಾಡಿದ್ದರೆ ಮುಂದೆ ನೀವು ಕಂಟೆಂಟ್‌ ರೈಟಿಂಗ್‌, ಟೀಚಿಂಗ್‌, ರಾಜಕೀಯ ಮೊದಲಾದ ವಿಷಯಗಳಲ್ಲಿ ಕರಿಯರ್‌ ರೂಪಿಸಬಹುದು.

ಅಷ್ಟೇ ಅಲ್ಲ ನೀವು ಜರ್ನಲಿಸ್ಟ್‌ ಆಗಿ ನಿಮ್ಮ ಕರಿಯರ್‌ ರೂಪಿಸಬಹುದು. ಇದೆಲ್ಲಾ ಬೇಡ ಎಂದಾದರೆ ಫಿಲಂ ಇಂಡಸ್ಟ್ರಿಯಲ್ಲೂ ಸಹ ನೀವು ಕರಿಯರ್‌ ರೂಪಿಸಿಕೊಳ್ಳಬಹುದು.

ಬಿಎ ಇತಿಹಾಸ :-

 ಇದು ಬೋರಿಂಗ್‌ ಸಬ್ಜೆಕ್ಟ್‌ ಇರಬಹುದು. ಆದರೆ ಅದನ್ನು ಓದುತ ಓದಂತೆ ನಿಮಗೆ ಅದೊಂದು ಇಂಟರೆಸ್ಟಿಂಗ್‌ ಸಬ್ಜೆಕ್ಟ್‌‌ ಆಗಿ ಬದಲಾಗುತ್ತದೆ.

ಈ ವಿಷಯ ಆಯ್ಕೆ ಮಾಡಿಕೊಂಡರೆ ನೀವು ಇತಿಹಾಸದ ಆಳಕ್ಕೆ ಹೋಗಬೇಕಾಗುತ್ತದೆ. ಇದನ್ನು ಆಯ್ಕೆ ಮಾಡಿಕೊಮಡರೆ ನೀವು ಆರ್ಕಿಯೋಲಾಜಿಸ್ಟ್‌ ವಿಭಾಗದಲ್ಲಿ ಕರಿಯರ್‌ ಆಯ್ಕೆ ಮಾಡಿಕೊಳ್ಳಬಹುದು.

ಫಾರಿನ್‌ ಲಾಂಗ್ವೇಜ್‌ :-

ಇತ್ತೀಚಿನ ದಿನಗಳಲ್ಲಿ ಫಾರಿನ್‌ ಲಾಂಗ್ವೇಜ್‌ನಲ್ಲಿ ಬಿಎ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಫಾರಿನ್‌ ಲಾಂಗ್ವೆಜ್‌ಗಳಲ್ಲಿ ಅಧ್ಯಯನ ಮಾಡುವವರಿಗೆ ಬೇರೆ ಬೇರೆ ವಿಷಯಗಳ ಬಗ್ಗೆ ಅಧ್ಯಯನ ಮಾಡಲು ಸುಲಭವಾಗುತ್ತದೆ. ಜೊತೆಗೆ ಹೊಸ ಹೊಸ ವಿಷಯಗಳನ್ನು ಕಲಿಯಲು ಸಹಾಯವಾಗುತ್ತದೆ.