ಸುದ್ದಿ

ಪಾಕಿಸ್ತಾನಕ್ಕೆ ಟೊಮೆಟೊ ಬ್ಯಾನ್ ಮಾಡಿದ್ದಕ್ಕೆ, ಭಾರತದ ಮೇಲೆ ಅಣು ಬಾಂಬ್ ಹಾಕ್ತೀವಿ ಎಂದ ಪಾಪಿ ಪಾಕ್ ನಿರೂಪಕ ಹೇಳಿದ್ದೇನು ಗೊತ್ತಾ?

By admin

February 25, 2019

ಜಮ್ಮುಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ದಾಳಿ ಇತಿಹಾಸದಲ್ಲೇ ಅತ್ಯಂತ ಭೀಕರವಾದ ದಾಳಿ. ಇದ್ರಿಂದಾಗಿ ಪ್ರತಿಯೊಬ್ಬ ಭಾರತೀಯನ ಎದೆಯಲ್ಲೂ ಪಾಕ್‍ ಮೇಲೆ ಪ್ರತೀಕಾರದ ಕಿಚ್ಚು ಹೆಚ್ಚಿದೆ. ಈ ದಾಳಿಯ ನಂತರ ಪಾಕಿಸ್ತಾನವನ್ನು ಹೊಸಕಿ ಹಾಕಲು ಭಾರತ ಇನ್ನಿಲ್ಲದ ಕ್ರಮ ಕೈಗೊಳ್ಳುತ್ತಿದೆ. ಅದ್ರಲ್ಲಿ ಪ್ರಮುಖವಾಗಿ ಆಮದು ಸುಂಕ ಏರಿಕೆ, ಟೊಮೆಟೊ ರಫ್ತು ಸ್ಥಗಿತ, ಇವೆಲ್ಲದರ ಪರಿಣಾಮ ಪಾಕ್‍ ನಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ.

ಈ ಬಗ್ಗೆ ಅಲ್ಲಿನ ಮಾಧ್ಯಮಗಳು ಕಿಡಿಕಾರಿವೆ. ಟೊಮೆಟೊ ರಫ್ತು ಬಂದ್‍ ಮಾಡಿದ್ದಕ್ಕೆ ಪ್ರತಿಯಾಗಿ ಅಣುಬಾಂಬ್‍ ದಾಳಿ ಮಾಡುತ್ತೇವೆ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‍ ಆಗಿದೆ.

ಕರ್ನಾಟಕದ ಕೋಲಾರ ಜಿಲ್ಲೆಯ ಎಪಿಎಂಸಿ ಮಾರುಕಟ್ಟೆ ಏಷ್ಯಾದಲ್ಲೇ 2ನೇ ಅತಿದೊಡ್ಡ ಟೊಮೆಟೊ ವಹಿವಾಟು ನಡೆಸುವ ಕೇಂದ್ರ. ಪಾಪಿ ಪಾಕ್‍ಗೆ ಬುದ್ದಿ ಕಲಿಸಲು ರೈತರು ಮತ್ತು ಎಪಿಎಂಸಿ ಒಗ್ಗೂಡಿ ಪಾಕಿಸ್ತಾನಕ್ಕೆ ಟೊಮೆಟೊ ರಫ್ತು ಮಾಡದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಪಾಕ್‍ ನಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಮಾಧ್ಯಮವೊಂದರ ನಿರೂಪಕನೊಬ್ಬ ಲೈವ್‍ ನಲ್ಲೇ ಭಾರತದ ವಿರುದ್ಧ ಅಣುಬಾಂಬ್‍ ದಾಳಿ ಮಾಡುವುದಾಗಿ ಹೇಳಿದ್ದಾನೆ.

“ ಭಾರತ ಕೊಳಕು ತುಂಬಿದ ರಾಷ್ಟ್ರ. ಟೊಮೆಟೋವನ್ನ ರಾಹುಲ್‍ ಅಥವಾ ಮೋದಿ ಮುಖಕ್ಕೆ ಎಸೆಯುತ್ತೇವೆ. ಅಲ್ಲದೆ ಟೊಮೆಟೊಗೆ ಪ್ರತಿಯಾಗಿ ಅಣುಬಾಂಬ್‍ ಮೂಲಕ ಉತ್ತರ ಕೊಡುವ ಸಮಯ ಬಂದಿದೆ” ಎಂದು ಮಾಧ್ಯಮದಲ್ಲಿ ಘಂಟಾಘೋವಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ ಸಮಯ ಬಂದರೆ ಯಾವುದೇ ಕಾರಣಕ್ಕೂ ಅಣುಬಾಂಬ್‍ ದಾಳಿ ಮಾಡಲು ಹಿಂಜರಿಯಲ್ಲ ಅಂತಾ ಭಾರತಕ್ಕೆ ಎಚ್ಚರಿಕೆ ನೀಡಿದ್ದಾನೆ ಈ ಭೂಪ…!