*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*
ದೇಹಕ್ಕೆ ಬರುವ ನೋವುಗಳಲ್ಲಿ ಕಿವಿ ನೋವು ಕೂಡ ಒಂದು. ದೊಡ್ಡವರು ಮತ್ತು ಮಕ್ಕಳು ಎಂಬ ತಾರತಮ್ಯವಿಲ್ಲದೆ ಎಲ್ಲರನ್ನೂ ಒಂದಲ್ಲ ಒಂದು ದಿನ ಇದು ಕಾಡುತ್ತದೆ. ಕಿವಿನೋವು ಬರಲು ಹಲವು ಕಾರಣಗಳಿದ್ದು, ಇದರಲ್ಲಿ ದೀರ್ಘ ಮತ್ತು ಅಲ್ಪ ಕಾಲದ ಕಿವಿ ಸೋಂಕು, ದವಡೆಯ ಸಂಧಿವಾತ, ಕಿವಿಯ ಮೇಣ, ಕಿವಿಯಲ್ಲಿ ಏನಾದರೂ ಸಿಕ್ಕಿಹಾಕಿಕೊಂಡಿರುವುದು, ಕಿವಿಯಲ್ಲಿ ಗಾಯ, ಕಿವಿಯ ತಮಟೆಯಲ್ಲಿ ತೂತು, ನೋಯುತ್ತಿರುವ ಗಂಟಲು ಮತ್ತು ಸೈನಸ್ ಸೋಂಕು ಕಾರಣವಾಗಿರುತ್ತದೆ.
ಕಿವಿ ನೋವಿಗೆ ಇಲ್ಲಿದೆ ಮನೆ ಮದ್ದು
ತುಳಸಿ ಎಲೆ:-
ತುಳಸಿ ಎಲೆಗಳು ಬೀಟಾ ಕ್ಯಾರೊಟಿನ್ ಅನ್ನು ಒಳಗೊಂಡಿದ್ದು ವಿಟಮಿನ್ ಸಿ ಇದರಲ್ಲಿದೆ. ಇಯುಜೊನಲ್, ಬೋರ್ನಲ್ ಅಂಶಗಳನ್ನು ಇದು ಪಡೆದಿದೆ. ಇದೊಂದು ಅದ್ಭುತ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಸೆಪ್ಟಿಕ್ ಅಂಶಗಳನ್ನು ಒಳಗೊಂಡಿದ್ದು ಕಿವಿ ನೋವಿಗೆ ಉತ್ತಮ ಪರಿಹಾರವನ್ನು ಒದಗಿಸುತ್ತದೆ. ತುಳಸಿಯ ಎಲೆಯಿಂದ ರಸವನ್ನು ಪಡೆದು 2 ಹನಿಗಳಷ್ಟು ನೋವಿರುವ ಕಿವಿಗೆ ಬಿಡಿ.
ಬೆಳ್ಳುಳ್ಳಿ:-
ಉತ್ಕರ್ಷಣ ನಿರೋಧಿ ಅಂಶಗಳನ್ನು ಬೆಳ್ಳುಳ್ಳಿಯು ಒಳಗೊಂಡಿದ್ದು ಕಿವಿ ನೋವಿಗೆ ಉತ್ತಮ ಪರಿಹಾರವನ್ನು ಇದು ಒದಗಿಸುತ್ತದೆ. ಬೇಯಿಸಿದ ಬೆಳ್ಳುಳ್ಳಿಯನ್ನು (3-4) ಚೆನ್ನಾಗಿ ಜಜ್ಜಿಕೊಂಡು ಸ್ವಲ್ಪ ನೀರಿಗೆ ಹಾಕಿ ಮತ್ತು ಚಿಟಿಕೆ ಉಪ್ಪನ್ನು ನೀರಿಗೆ ಸೇರಿಸಿಕೊಳ್ಳಿ. ನಂತರ ಇದನ್ನು ಹತ್ತಿಯ ಬಟ್ಟೆಯಲ್ಲಿ ಕಟ್ಟಿ ನೋಯುತ್ತಿರುವ ಕಿವಿಯ ಮೇಲಿಡಿ.
ಸಾಸಿವೆ ಎಣ್ಣೆ:-
ಆ್ಯಂಟಿಬ್ಯಾಕ್ಟೀರಿಯಲ್ ಅಂಶಗಳನ್ನು ಸಾಸಿವೆ ಎಣ್ಣೆ ಒಳಗೊಂಡಿದ್ದು ಕಿವಿ ನೋವಿಗೆ ಇದು ಉತ್ತಮ ಪರಿಹಾರವನ್ನು ಒದಗಿಸುತ್ತದೆ. ತುಸು ಬೆಚ್ಚಗಿನ ಸಾಸಿವೆ ಎಣ್ಣೆಯನ್ನು (2-3 ಹನಿಗಳು) ನೋವಿರುವ ಕಿವಿಗೆ ಹಾಕಿ ಮತ್ತು ಹಾಗೆಯೇ ಸ್ವಲ್ಪ ಹೊತ್ತು ಬಿಡಿ.
ಈರುಳ್ಳಿ ರಸ:-
ಈರುಳ್ಳಿ ಹಿಂಡಿ ಅದರ ರಸವನ್ನು ಹತ್ತಿಯಲ್ಲಿ ಮುಳುಗಿಸಿ ಕಿವಿಯ ಮೇಲೆ ಒತ್ತಿ ಇಡಿ. ಇದು ನೋವನ್ನು ಕಡಿಮೆ ಮಾಡುತ್ತದೆ ಮತ್ತು ನೋವನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ, ಅಂತೆಯೇ ಕೆಂಪಗಾದ ಕಿವಿ ಹಾಗೂ ತುರಿಕೆಯನ್ನು ದೂರಮಾಡುತ್ತದೆ.