ಅಂದಿನ ವೈಸ್ ರಾಯ್ ಹೌಸ್ ಅಂದ್ರೆ ಇಂದಿನ ರಾಷ್ಟ್ರಪತಿ ಭವನ, ಐತಿಹಾಸಿಕ ಹೌಸ್ ಮುಂದೆ 1946 ರಲ್ಲಿ ನಗು ಮುಖದಿಂದ ನಿಂತಿರುವ ‘ರಾಷ್ಟ್ರಪಿತ’- ‘ಮಹಾತ್ಮಾ’ಗಾಂಧೀಜಿ ಮತ್ತು ಬ್ರಿಟಿಷ್ Political Leader (ಬ್ರಿಟನ್ ಪ್ರಜೆ ಆಗಿದ್ದರೂ ಸಹಿತ, ಗಾಂಧಿ ಅವರ ಅಪ್ಪಟ ಅಭಿಮಾನಿ.
ಬಾಪೂ ಪ್ರಭಾವಕ್ಕೆ ಒಳಗಾಗಿ ಸ್ತ್ರೀ ಸಮಾನತೆಗಾಗಿ ಹೋರಾಡಿದ ನಾಯಕ ) Lord ಫ್ರೆಡ್ರಿಕ್ ಲಾರೆನ್ಸ್..ಅವರು ಅಕ್ಕ-ಪಕ್ಕ ನಿಂತಿರುವ ಚಿತ್ರವನ್ನು Photo Journalist ಒಬ್ರು ತೆಗೆದದ್ದು.
ನೋಟಿನ ಮೇಲೆ ಚಿತ್ರ ಮುದ್ರಿಸಿದ್ದು ಹೇಗೆ…
ಇದೆ ಭಾವಚಿತ್ರವನ್ನು Edit ಮಾಡಿ Mirror Image ನ್ನು ಬಳಸಿಕೊಂಡು ಮೊದಲ ಬಾರಿಗೆ 1987 ರಲ್ಲಿ 500 ರೂಪಾಯಿ ಮೌಲ್ಯದ ನೋಟುಗಳ ಮೇಲೆ ಮುದ್ರಿಸಲು ಆರಂಭಿಸಲಾಯಿತು..
1996 ರ ನಂತ್ರ 10 ರೂಪಾಯಿ ಮೌಲ್ಯದ ನೋಟಿನಿಂದ ಹಿಡಿದು ಇವತ್ತಿನ 2000ರೂಪಾಯಿ ಮೌಲ್ಯದ ನೋಟುಗಳ ಮೇಲೆ ನಗು ಮುಖದ’ ಮಹಾತ್ಮ’ನ ಇದೇ ಭಾವಚಿತ್ರ ಅಚ್ಚಾಗುತ್ತಿದೆ.. ಈ ಮುಖಾಂತರ ಜಗತ್ತಿನ ಸರ್ವ ಶ್ರೇಷ್ಠ ನಾಯಕ’ನಿಗೆ ಗೌರವ ಸಲ್ಲಿಸಲಾಗುತ್ತಿದೆ..