ತಂತ್ರಜ್ಞಾನ

ನೆಲದ ಮೇಲೆ ಹಾಗೊ ಆಕಾಶದಲ್ಲಿ ಹಾರುವ ಕಾರು..!ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ …

By admin

December 19, 2017

ಒಂದೆಡೆ ಹಲವಾರು  ರೋಗಗಳಿಗೆ ಹೊಸ ಹೊಸ ಮದ್ದುಗಳನ್ನು ಕಂಡುಹಿಡಿಯಲಾಗುತ್ತಿದ್ದರೆ ಮತ್ತೊಂದೆಡೆ ನೆಲದಲ್ಲಿ ಎದುರಾಗಲಿರುವ ಜಾಗದ ಕೊರತೆಯನ್ನು ನೀಗಿಸಲು  ಬಾನಂಚಿನಲ್ಲಿ ಬೇರೆ ನೆಲೆಗಳನ್ನು ಹುಡುಕುವಂತ ಕೆಲಸಗಳು ನಡೆಯುತ್ತಿವೆ.

ನೀವು ಈ ಮುಂಚೆ ಕೇಳಿರಬಹುದು. ರೋಡಿನಲ್ಲೂ ಚಲಿಸುವ, ಗಾಳಿಯಲ್ಲೂ ಹಾರುವ ವಾಹನ ಅನ್ವೇಷಣೆಯ ಹಂತದಲ್ಲಿದೆ ಎಂದು. ಹೌದು ಈಗ ಆ ಹಾರುವ ಕಾರಿನ ಅಭಿವೃದ್ಧಿ ಕಾರ್ಯ ಮುಗಿದಿದ್ದು, 2018 ರಲ್ಲಿ ಹಾರುವ ಕಾರು ರೋಡಿಗಿಳಿಯಲಿದೆ. ಅಲ್ಲಾ, ಗಾಳಿಯಲ್ಲಿ ಹಾರಲಿದೆ.

ಹಾರುವ ಕಾರು:-

ತಂತಾನೇ ಓಡಬಲ್ಲ ಕಾರಿದ್ದರೆ ಅಪಗಾತಗಳನ್ನು ತಡೆಗಟ್ಟಬಹುದು ಆದರೆ ರಸ್ತೆಯ ದಟ್ಟಣೆಗೆ ಏನು ಮಾಡುವುದು ? ಹಾರುವ ಕಾರು ಇಂತದೊಂದು ಕೇಳ್ವಿಗೆ ಉತ್ತರವಾಗಬಲ್ಲದು. ರಸ್ತೆಯಲ್ಲಿ ಓಡುವ ಕಾರು ಮತ್ತು ಬಾನಲ್ಲಿ ಹಾರುವ ವಿಮಾನದ ನಡುವಿನ ನಡೆ ಇದು.

ಕಾರು ಮೇಲೆ ಹಾರಬೇಕೆಂದರೆ ಅದು ನೆಲಸೆಳೆತವನ್ನು (earth’s gravity) ಮೀರಬೇಕು ಅಂದರೆ ಅದಕ್ಕೆ ಇದಿರು-ನೆಲಸೆಳೆತ (anti-gravity) ಒದಗಿಸುವಂತ ಚಳಕಗಳು ಎಟುಕಬೇಕು, ಅದೂ ಕಡಿಮೆ ಬೆಲೆಯಲ್ಲಿ.

ಸ್ಯಾಮ್ ಸನ್ ಎಂಬ ಕಂಪನಿ ಅಭಿವೃದ್ಧಿ ಪಡಿಸಿರುವ ಹಾರುವ ಕಾರಿನ ಹೆಸರು ‘ಸ್ಯಾಮ್ ಸನ್ ಸ್ವಿಚ್ ಬ್ಲೇಡ್’ ಇದಕ್ಕೆ ಮೂರು ಚಕ್ರಗಳಿದ್ದು, ಎರಡು ಆಸನಗಳನ್ನು ಜೋಡಿಸಲಾಗಿದೆ. ರಸ್ತೆಯಲ್ಲೂ ಹಾಗೂ ಗಾಳಿಯಲ್ಲೂ ಹಾರುವ ಜಗತ್ತಿನ ಮೊದಲ ವಿಶಿಷ್ಟ ಕಾರು ಇದಾಗಿದೆ.

ಸ್ವಿಚ್ ಬ್ಲೇಡ್ ಕಾರನ್ನು ಎಲ್ಲೆಂದರಲ್ಲಿ ಹಾರಿಸುವಂತಿಲ್ಲ. ಬದಲಾಗಿ ಮೊದಲು ವಿಮಾನ ಹಾರುವಂತಹ ರನ್ ವೇ ಸ್ಥಳಕ್ಕೆ ಕಾರನ್ನು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗಿ ಅಲ್ಲಿಂದ ಹಾರಿಸಬೇಕು. ಕಾರನ್ನು ಗಾಳಿಯಿಂದ ಕೆಳಗಿಳಿಸುವಾಗಲು ರನ್ ವೇ ಇರುವಂತಹ ಸ್ಥಳದಲ್ಲೆ ಇಳಿಸಬೇಕು. ಬಳಿಕ ತಲುಪಬೇಕಾದ ಜಾಗಕ್ಕೆ ಸಾಮಾನ್ಯ ಕಾರಿನಂತೆ ಚಲಾಯಿಸಿಕೊಂಡು ಹೋಗಬಹುದು.

ಗಂಟೆಗೆ 305 ಕಿ.ಮೀ ಓಡುವ,13,000 ಅಡಿ ಮೇಲಕ್ಕೆ ಹಾರುವ ಸಾಮರ್ಥ್ಯ ಈ ಕಾರಿಗಿದೆ. 6.3 ಅಡಿ ಉದ್ದದ,8.2 ಅಡಿ ಅಗಲದ ರೆಕ್ಕೆಗಳನ್ನು ಬೇಕೆಂದಾಗ ಮಡಿಚುವ, ಬಿಚ್ಚುವ ವ್ಯವಸ್ಥೆ ಮಾಡಲಾಗಿದೆ. ಇದರ ಬೆಲೆ 77 ಲಕ್ಷ ರೂಪಾಯಿಯಾಗಿದ್ದು, ಅದರ ಬಿಡಿಭಾಗಗಳನ್ನು ಜೋಡಿಸಲು ಮತ್ತೆ 13 ಲಕ್ಷಕೊಡಬೇಕಾಗಿದೆ. 2018ರ ವರ್ಷದಲ್ಲಿ ಸ್ವಿಚ್ ಬ್ಲೇಡ್ ಕಾರ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ.