ವಿಸ್ಮಯ ಜಗತ್ತು

ನೀವೂ ನಂಬಲೇಬೇಕು..ಇಲ್ಲಿ ಜನ ಪ್ರತೀದಿನ ಸ್ನಾನ ಮಾಡೋದು ಗೋವಿನ ಮೂತ್ರದಲ್ಲಿ!

By admin

December 19, 2018

ನಮ್ಮ ದೇಶದಲ್ಲಿ ಆಕಳ ಸಗಣಿ ಹಾಗೂ ಗೋಮೂತ್ರವನ್ನು ಹಬ್ಬಗಳಲ್ಲಿ ಬಳಕೆ ಮಾಡ್ತೇವೆ. ಮನೆಯನ್ನು ಗೋಮೂತ್ರ ಹಾಗೂ ಸಗಣಿಯಿಂದ ಶುದ್ಧಮಾಡುವ ಪದ್ಧತಿ ಇದೆ. ಆದ್ರೆ ಆ ಬುಡಕಟ್ಟು ಜನಾಂಗದವರು  ಗೋಮೂತ್ರದಿಂದ ಸ್ನಾನ ಮಾಡ್ತಾರೆ. ಅಷ್ಟೇ ಅಲ್ಲ ರೋಗದಿಂದ ರಕ್ಷಣೆ ಪಡೆಯಲು ಸಗಣಿಯನ್ನು ದೇಹಕ್ಕೆ ಹಚ್ಚಿಕೊಳ್ತಾರೆ.

ನಾವು ಈಗ ಹೇಳ್ತಾ ಇರೋದು ಆಫ್ರಿಕಾದ ದಕ್ಷಿಣ ಸುಡಾನ್ ನ ಮುಂದರಿ ಬಡುಕಟ್ಟು ಜನಾಂಗದ ಸಂಸ್ಕೃತಿಯ ಬಗ್ಗೆ. ಈ ಜನರು ಬೆಳಿಗ್ಗೆ ಎದ್ದ ತಕ್ಷಣ ಗೋಮೂತ್ರದಲ್ಲಿ ಸ್ನಾನ ಮಾಡ್ತಾರೆ. ಇವರ ಜೀವನ ಶೈಲಿ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಇವರ ಜೀವನ ಸಂಪೂರ್ಣ ಜಾನುವಾರುಗಳ ಮೇಲೆ ನಿಂತಿದೆ ಎಂದ್ರೆ ತಪ್ಪಾಗಲಾರದು.

ಸೆಕೆಯಿಂದ ತಪ್ಪಿಸಿಕೊಳ್ಳಲು ಇಲ್ಲಿನ ಜನರು ಗೋಮೂತ್ರದಿಂದ ಸ್ನಾನ ಮಾಡ್ತಾರೆ. ಸೊಳ್ಳೆಗಳಿಂದ ರಕ್ಷಣೆ ಪಡೆಯಲು ದೇಹಕ್ಕೆ ಸಗಣಿಯನ್ನು ಹಚ್ಚಿಕೊಳ್ತಾರೆ. ದನದಿಂದ ಸಿಗುವ ಯಾವುದೇ ವಸ್ತುವನ್ನು ಅವರು ಹಾಳು ಮಾಡುವುದಿಲ್ಲ.

ಮದುವೆ ಸಮಾರಂಭಗಳಲ್ಲಿ ಕೂಡ ಜಾನುವಾರುಗಳು ಮಹತ್ವದ ಪಾತ್ರ ವಹಿಸುತ್ತದೆ. ವರದಕ್ಷಿಣೆ ರೂಪದಲ್ಲಿ ದನವನ್ನು ಕೊಡ್ತಾರೆ. ರಾತ್ರಿ ದನದ ಜೊತೆ ಮಲಗುವ ಮಂದಿ, ಬಂದೂಕಿನ ಸಹಾಯದಿಂದ ದನಗಳ ರಕ್ಷಣೆ ಮಾಡ್ತಾರೆ.