ನೀವು ಹಣಬೆಯನ್ನು(ಮುಶ್ರೂಮ್ಸ್) ತಿನ್ನೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯಲು ಮುಂದೆ ಓದಿ…
ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ:-
ಅಣಬೆಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದು ನಿಮ್ಮ ದೇಹಕ್ಕೆ ವೈರಸ್ ನಿರೋಧಕ ರಕ್ಷೆಯನ್ನು ನೀಡುತ್ತದೆ ಮತ್ತು ಇದರ ಸೇವನೆಯಿಂದ ನಿಮ್ಮ ದೇಹಕ್ಕೆ ಹಲವಾರು ಪ್ರೋಟಿನ್‌ಗಳು ದೊರೆಯುತ್ತವೆ. ಜೊತೆಗೆ ದೇಹದ ಕೋಶಗಳಲ್ಲಿನ ರಿಪೇರಿಗಳನ್ನು ಸಹ ದೇಹವೇ ಮಾಡಿಕೊಳ್ಳುವಂತಃ ಆರೋಗ್ಯವನ್ನು ಅಣಬೆಗಳು ನಮಗೆ ನೀಡುತ್ತವೆ.
ವಿಟಮಿನ್ ಡಿ :-
ಅಣಬೆಗಳಲ್ಲಿ ವಿಟಮಿನ್ ಡಿ ಅಧಿಕ ಪ್ರಮಾಣದಲ್ಲಿರುತ್ತದೆ. ಅಣಬೆಯು ಸೂರ್ಯನ ಬೆಳಕಿಗೆ ತನ್ನನ್ನು ತಾನು ಒಡ್ಡಿಕೊಳ್ಳುವುದರಿಂದ ಈ ವಿಟಮಿನ್ ಅನ್ನು ತನ್ನೊ ಳಗೆ ಹೊಂದುತ್ತದೆ. ಇದನ್ನು ಸೇವಿಸುವುದರಿಂದಾಗಿ, ನಿಮಗೆ ಪ್ರತಿ ದಿನಕ್ಕೆ ಬೇಕಾದ ವಿಟಮಿನ್ ಡಿ ದೊರೆಯುತ್ತದೆ.
ಆಂಟಿ ಆಕ್ಸಿಡೆಂಟ್ಗಳು:-
ಅಣಬೆಗಳಲ್ಲಿ ಯಥೇಚ್ಛವಾದ ಪ್ರಮಾಣದ ಆಂಟಿಆಕ್ಸಿಡೆಂಟ್ ಗಳು ಇರುತ್ತವೆ. ಅವು ಫ್ರೀ ರ್ಯಾಡಿಕಲ್ಗಳಿಂದ ನಿಮ್ಮ ದೇಹವು ಹಾಳಾಗುವಿಕೆಯನ್ನು ತಡೆಯುತ್ತದೆ. ಈ ಆಂಟಿ ಆಕ್ಸಿಡೆಂಟ್ಗಳು ಹೃದ್ರೋಗ, ಕ್ಯಾನ್ಸರ್, ಅಲ್ಜೀಮರ್ ಮುಂತಾದ ಗಂಭೀರ ಕಾಯಿಲೆಗಳ ಬೆಳವಣಿಗೆಯನ್ನು ತಡೆಯುತ್ತವೆ.
ಕಬ್ಬಿಣಾಂಶದ ಆಗರ:-
ಅಣಬೆಗಳು ಕಬ್ಬಿಣಾಂಶದ ಪ್ರಮುಖ ಆಗರವಾಗಿರುತ್ತವೆ. ಇವುಗಳ ಸೇವನೆಯಿಂದ ಹಿಮೋಗ್ಲೋಬಿನ್ ಉತ್ಪಾದನೆ ಹೆಚ್ಚಾಗುತ್ತದೆ ಮತ್ತು ಕೆಂಪು ರಕ್ತ ಕಣಗಳ ಆಕ್ಸಿಜೆನೆಶನ್ ಆಗುತ್ತದೆ. ಜೊತೆಗೆ ಆಮ್ಲ ಜನಕವು ದೇಹದ ಎಲ್ಲಾ ಭಾಗ ಗಳಿಗೂ ಪಸರಿಸಲು ಇದು ಕಾರಣವಾಗುತ್ತದೆ.
ಚಯಾಪಚಯ ವ್ಯವಸ್ಥೆಯನ್ನು ಸುಧಾರಿಸುತ್ತದೆ:-
ವಿಟಮಿನ್ ’ಬಿ’ ಯು ಅಣಬೆಗಳಲ್ಲಿ ಅಧಿಕ ಪ್ರಮಾಣದಲ್ಲಿರುತ್ತವೆ. ಇದು ನಿಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವ ಕೆಲಸ ಮಾಡು ತ್ತದೆ. ಇದರಲ್ಲಿರುವ ವಿಟಮಿನ್ಗಳು ನಮ್ಮ ದೇಹಕ್ಕೆ ತೀರಾ ಅಗತ್ಯವಾಗಿರುತ್ತವೆ. ಇನ್ನು ನಮ್ಮ ದೇಹ ಸುಗಮವಾಗಿ ಕೆಲಸ ಮಾಡಲು ಬೇಕಾದ ಚಯಾಪಚಯ ವ್ಯವಸ್ಥೆಯನ್ನು ಸುಧಾರಿಸಲು ಅಣಬೆಗಳು ಅಗತ್ಯ ಶಕ್ತಿಯನ್ನು ನೀಡುತ್ತವೆ. ಹಾಗಾಗಿ ಅಣಬೆ ಗಳನ್ನು ತಪ್ಪದೆ ಸೇವಿಸಿ, ದೇಹ ವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಿ.