ಆರೋಗ್ಯ

ನೀವು ರೆಡ್ ವೈನ್ ಕುಡಿದ್ರೆ ಏನೆಲ್ಲಾ ಲಾಭಗಳಿವೆ ಎಂದು ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

By admin

February 19, 2018

ರೆಡ್ ವೈನ್ ಎಂಬುದು ಗಾಢ ಬಣ್ಣದ (ಕಪ್ಪು) ದ್ರಾಕ್ಷಿಗಳಿಂದ ತಯಾರಿಸಿದ ಒಂದು ಪಾನಿಯವಾಗಿದೆ ಮತ್ತು ದ್ರಾಕ್ಷಿಗಳು ಅನೇಕ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಕಾರಣ ಇದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು ಬಹಳಷ್ಟಿವೆ. ಅಷ್ಟೇ ಅಲ್ಲ ಆರೋಗ್ಯಕರ ಮತ್ತು ಸುಂದರ ತ್ವಚೆಯನ್ನು ಸಹ ಪಡೆಯಬಹುದು.

ಸಾಮಾನ್ಯವಾಗಿ ಕೆಂಪು ವೈನ್ ಎಂದರೆ ‘ಮಹಿಳೆಯರು ಕುಡಿಯುವ ಮದ್ಯ’ ಎಂದೇ ಹೆಚ್ಚಿನವರು ಕುಹಕವಾಡುತ್ತಾರೆ. ಮಹಿಳೆಯರು ಮದ್ಯಕ್ಕೆ ವ್ಯಸನರಾಗುವ ಬದಲು ಕೆಂಪು ವೈನ್ ಅನ್ನೇ ಹೆಚ್ಚಾಗಿ ಬಯಸುವುದು ಈ ಕುಹಕಕ್ಕೆ ಕಾರಣವಾಗಿದೆ. ಕೆಂಪು ವೈನ್ ಗೆ ನೂರಾರು ವರ್ಷಗಳ ರೋಚಕ ಇತಿಹಾಸವಿದೆ. ಕೆಂಪು ವೈನ್ ಅನ್ನು ವಿವಿಧ ತಳಿಯ ಕಪ್ಪು ದ್ರಾಕ್ಷಿಯಿಂದ ತಯಾರಿಸಲಾಗುತ್ತದೆ. ಈ ದ್ರಾಕ್ಷಿಗಳು ಗಾಢ ಕೆಂಪು ಬಣ್ಣದಿಂದ ಹಿಡಿದು ನೇರಳೆ ಅಥವಾ ಇಟ್ಟಿಗೆಯ ಕೆಂಪು ಅಥವಾ ಗಾಢ ಕಂದು ಬಣ್ಣದವೂ ಆಗಿರಬಹುದು.

ದಿನನಿತ್ಯ ಒಂದು ಗ್ಲಾಸ್ ರೆಡ್ ವೈನ್ ಕುಡಿದರೆ ಹೃದಯದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಉಪಯುಕ್ತವಾಗುತ್ತದೆ ಮತ್ತು ಹಾರ್ಟ್ ಅಟ್ಯಾಕ್ ಸಾಧ್ಯತೆಗಳನ್ನು ಹೋಗಲಾಡಿಸಿ ಕಾರ್ಡಿಯೋವ್ಯಾಸ್ಕುಲರ್ ನಂತಹ ಖಾಯಿಲೆಗಳಿಂದ ದೂರವಿರಿಸುತ್ತದೆ.

ರೆಡ್ ವೈನ್ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು :-

ಅತಿಯಾದರೆ ಇದು ಆರೋಗ್ಯಕ್ಕೆ ಮಾರಕವಾಗಬಲ್ಲುದು. ಮಿತಪ್ರಮಾಣದಲ್ಲಿ ನಿಯಮಿತವಾಗಿ ಸೇವಿಸುತ್ತಾ ಬಂದರೆ ಯಕೃತ್ ನ ತೊಂದರೆ, ಪ್ರಾಸ್ಟೇಟ್ ಕ್ಯಾನ್ಸರ್ ಹಾಗೂ ಮರೆಗುಳಿತನದ ವಿರುದ್ಧ ರಕ್ಷಣೆ ಪಡೆಯಬಹುದು. ಕೆಂಪು ವೈನ್ ನಲ್ಲಿ 12 ರಿಂದ 15ಶೇಖಡಾ ಆಲ್ಕೋಹಾಲ್ ಇದೆ.

ಒಂದು ಪ್ರಮಾಣದ ಕೆಂಪು ವೈನ್ ನಲ್ಲಿ ಸುಮಾರು 125 ಕ್ಯಾಲೋರಿಗಳಿವೆ ಹಾಗೂ 3.8 ಗ್ರಾಂ ಕಾರ್ಬೋಹೈಡ್ರೇಟುಗಳಿವೆ. ಹಾಗೂ ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ.

ಕೆಂಪು ವೈನ್ ನಲ್ಲಿ ಕ್ಯಾನ್ಸರ್ ನಿರೋಧಕ ಗುಣವಿದೆ :-

ಕೆಂಪು ವೈನ್ ನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ನಿರೋಧಕ ಗುಣಗಳನ್ನೂ ಹೊಂದಿವೆ ಹಾಗೂ ವಿಶೇಷವಾಗಿ ಹೃದಯವನ್ನು ರಕ್ಷಿಸಿ ಆರೋಗ್ಯವನ್ನು ವೃದ್ದಿಸುತ್ತದೆ.

ಕೆಂಪು ದ್ರಾಕ್ಷಿಯ ಸಿಪ್ಪೆಯಲ್ಲಿ ಈ ಆಂಟಿ ಆಕ್ಸಿಡೆಂಟುಗಳು ಹೇರಳವಾಗಿರುತ್ತವೆ. ಹಾಗೂ ಈ ದ್ರಾಕ್ಷಿಗಳಿಂದ ತಯಾರಿಸಿದ ವೈನ್ ಸೇವನೆಯಿಂದ ಬಹುತೇಕ ಎಲ್ಲಾ ವಿಧದ ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ.

ಕೆಂಪು ವೈನ್ ಒತ್ತಡವನ್ನು ಕಡಿಮೆಗೊಳಿಸುತ್ತದೆ:-

ಕೆಂಪು ವೈನ್ ನಲ್ಲಿರುವ ರೆಸ್ವರೆಟ್ರಾಲ್ ಎಂಬ ಪೋಷಕಾಂಶಕ್ಕೆ ಘಾಸಿಗೊಂಡ ಡಿ ಎನ್ ಎ ಗಳನ್ನು ಸರಿಪಡಿಸುವುದು, ಗಡ್ಡೆಯಾಗುವ ಅನುವಂಶಿಕ ಧಾತುಗಳ ಬೆಳವಣಿಗೆ ಪ್ರತಿಬಂಧಿಸುವುದು ಹಾಗೂ ಆಯಸ್ಸನ್ನು ವೃದ್ದಿಸುವುದು ಮೊದಲಾದ ಗುಣಗಳಿವೆ.

ರೆಡ್ ವೈನ್‌ನ ಕೆಲವೊಂದು ಆರೋಗ್ಯಕಾರಿ ಲಾಭಗಳು: –

* ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ

* ಪಾರ್ಶ್ವವಾಯುವನ್ನು ತಡೆಯುತ್ತದೆ

* ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ

* ಶ್ವಾಸಕೋಶ ಕ್ಯಾನ್ಸರ್ ತಡೆಯುತ್ತದೆ

* ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

* ಮಧುಮೇಹವನ್ನು ಕಡಿಮೆ ಮಾಡುತ್ತದೆ

* ಬೊಜ್ಜು ಕಡಿಮೆ ಮಾಡುತ್ತದೆ

* ಅಧಿಕ ರಕ್ತದೊತ್ತಡವನ್ನು ತಡೆಯುತ್ತದೆ

* ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ

* ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ

* ಹಲ್ಲು ಕೊಳೆತವನ್ನು ತಡೆಗಟ್ಟುತ್ತದೆ

* ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

* ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ

* ಕೂದಲ ಆರೋಗ್ಯವನ್ನು ಸುಧಾರಿಸುತ್ತದೆ