ಮದುವೆಯ ಪರ್‌ಫೆಕ್ಟ್ ವಯಸ್ಸು ಯಾವುದು ಎಂಬುದರ ಬಗ್ಗೆ ಯಾವಾಗಲೂ ಪ್ರಶ್ನೆ ಮೂಡುತ್ತದೆ? ಅದಕ್ಕೆ ಸರಿಯಾದ ಉತ್ತರ ಇಲ್ಲಿವರೆಗೆ ಸಿಕ್ಕಿಲ್ಲ. ಕೆಲವೊಂದು ಸರ್ವೆಗಳು ಮದುವೆಯಾಗಲು ಸರಿಯಾದ ವಯಸ್ಸು 29 ಎನ್ನುತ್ತಾರೆ. ಆದರೆ ಒಬ್ಬೊಬ್ಬರ ಮದುವೆ ಒಂದೊಂದು ವಯಸ್ಸಿನಲ್ಲಿ ಆಗುತ್ತದೆ.
ಕೆಲವರು 20 ರಿಂದ 30 ವರ್ಷದೊಳಗೆ ಮದುವೆಯಾದರೆ, ಇನ್ನೂ ಕೆಲವರು 30 ರಿಂದ 40 ವರ್ಷದೊಳಗೆ ಮದುವೆಯಾಗುತ್ತಾರೆ. ಇನ್ನೂ ಕೆಲವರು 40ರ ಹರೆಯದ ನಂತರ ಮದುವೆಯಾಗುತ್ತಾರೆ. ಮದುವೆಯಾಗಲು ಸರಿಯಾದ ವಯಸ್ಸು ಯಾವುದು? ಯಾವ ವಯಸ್ಸಿನಲ್ಲಿ ಮದುವೆಯಾದರೆ ಏನು ಲಾಭ.
20 ರಿಂದ 30 ವರ್ಷದಲ್ಲಿ ಮದುವೆ :-
ಒಂದು ವೇಳೆ ಯಾವುದೆ ವ್ಯಕ್ತಿಯ ಮದುವೆ 20 ರಿಂದ 30 ವರ್ಷದೊಳಗೆ ಆದರೆ ಆ ಸಂದರ್ಭದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ.
ಅಂದರೆ ನಿಮ್ಮ ನಡುವೆ ಹೊಂದಾಣಿಕೆ ಬರಲು ಸಮಯ ಸಿಗುತ್ತದೆ. ಈ ಸಮಯದಲ್ಲಿ ಇಬ್ಬರೂ ಸಹ ಎನರ್ಜಿಟಿಕ್ ಆಗಿರುತ್ತೀರಿ. ಇಬ್ಬರಿಗೂ ತಮ್ಮ ಕರಿಯರ್‌ಗೆ ಸಂಬಂಧಿಸಿದಂತೆ ಹೆಚ್ಚು ಕನಸು ಇರುತ್ತದೆ. ಅಷ್ಟೇ ಅಲ್ಲ ನಿಮ್ಮ ಮಕ್ಕಳ ಜೊತೆ ಸಮಯ ಕಳೆಯಲು, ಮೋಜು ಮಸ್ತಿ ಮಾಡಲು ಸಹ ಸಾಧ್ಯವಾಗುತ್ತದೆ. ಯಾಕೆಂದರೆ ಮಕ್ಕಳ ಮದುವೆಯಾಗುತ್ತಿದ್ದಂತೆ ನಿಮ್ಮ ವಯಸ್ಸು 50 ವರ್ಷ ಆಗುತ್ತದೆ.
30 ರಿಂದ 40 ವರ್ಷದಲ್ಲಿ ಮದುವೆ :-
ನಿಮ್ಮ ಮದುವೆ 30 ರಿಂದ 40 ವರ್ಷದ ನಡುವೆ ಆದರೆ ನೀವು ಜೀವನ, ಸಂಬಂಧ ಮತ್ತು ಪ್ರಪಂಚದ ಬಗ್ಗೆ ಹೆಚ್ಚು ತಿಳಿದುಕೊಂಡಿರುತ್ತೀರಿ. ನಿಮಗೆ ನಿಮ್ಮ ಹೃದಯದ ಮಾತಿನ ಮೇಲೆ ಯಾವುದೆ ಕನ್‌ಫ್ಯೂಶನ್ ಇರೋದಿಲ್ಲ. ಒಬ್ಬರಿಗೊಬ್ಬರು ಕಾಂಪ್ಲಿಮೆಂಟ್ ಕೊಡಲು ಸಹಾಯವಾಗುತ್ತದೆ.
ಒಂದು ಸರ್ವೇಯ ಅನುಸಾರ ಈ ವಯಸ್ಸಿನಲ್ಲಿ ಮದುವೆಯಾದರೆ ಡಿವೋರ್ಸ್ ಆಗುವ ಚಾನ್ಸಸ್ ಕಡಿಮೆ ಇರುತ್ತದೆ. ಆದರೆ ಈ ವಯಸ್ಸಿನಲ್ಲಿ ಮದುವೆಯಾದರೆ ಪ್ರೆಗ್ನೆನ್ಸಿಯಲ್ಲಿ ತುಂಬಾ ಸಮಸ್ಯೆ ಉಂಟಾಗುತ್ತದೆ.
40 ನೆ ವಯಸ್ಸಿನ ನಂತರ :-
40 ವರ್ಷದ ನಂತರ ಮದುವೆಯಾಗುವುದರ ಒಂದು ಲಾಭ ಎಂದರೆ ನೀವು ಆರ್ಥಿಕವಾಗಿ ಇಬ್ಬರು ಸಹ ತುಂಬಾನೆ ಸದೃಢರಾಗಿರುತ್ತೀರಿ.
ಜೊತೆಗೆ ಸೆಲ್ಫ್ ಕಾಂನ್ಫಿಡೆನ್ಸ್ ಹೆಚ್ಚಿರುತ್ತದೆ. ಆದರೆ ರಿಸರ್ಚ್ ಅನುಸಾರ 40 ವಯಸ್ಸಿನ ನಂತರ ಗರ್ಭಾಧಾರಣೆ ಮಾಡುವ ಚಾನ್ಸಸ್ ಕೇವಲ 33 ಶೇಕಡಾದಷ್ಟು ಮಾತ್ರ ಇದೆ.