ಜೀವನಶೈಲಿ

ನೀವು ಮಧ್ಯಾಹ್ನ ನಿದ್ದೆ ಮಾಡ್ತೀರಾ..!ಹಾಗಾದ್ರೆ ನಿಮ್ಗೆ ಇಲ್ಲಿದೆ ನೋಡಿ ಸಖತ್ ಸುದ್ದಿ…

By admin

January 29, 2018

ಮಧ್ಯಾಹ್ನ ನಿದ್ದೆ ಮಾಡುವವರನ್ನು ಸಾಮಾನ್ಯವಾಗಿ ಸೋಮಾರಿಗಳು ಎಂದು ಹೇಳುತ್ತೇವೆ.ಸಾಮಾನ್ಯವಾಗಿ  ಮಧ್ಯಾಹ್ನ ಊಟ ಮಾಡಿದ ಕೂಡಲೇ ಏನು ಕೆಲಸ ಮಾಡದೇ ಕುಳಿತರೆ ನಿದ್ದೆ ಬರುಹುದು ಸಹಜ.ಆದರೆ ಮುಂದುವರೆಯುತ್ತಿರುವ  ಈ ಪ್ರಪಂಚದಲ್ಲಿ ನಮ್ಮ ಜನಕ್ಕೆ ಮಧ್ಯಾಹ್ನ ಅಲ್ಲ ರಾತ್ರಿ ಕೂಡ ನಿದ್ದೆ ಮಾಡಲು ಸಮಯ ಸಿಗುತ್ತಿಲ್ಲ.ನಿದ್ದೆ ಮಾಡಿದರೆ ನಮ್ಮ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ  ಹಾಗು ನಿದ್ದೆ ಆಯಾಸವನ್ನು ನೀಗುಸುತ್ತದೆ.ಮತ್ತು ಚೆನ್ನಾಗಿ ನಿದ್ದೆ ಮಾಡಿದರೆ ನಮ್ಮ ದೇಹ ತುಂಬಾ ಆಕ್ಟಿವ್ ಆಗಿರುತ್ತದೆ.

ಮಧಾಹ್ನ ನಿದ್ದೆ ಮಾಡುವುದರಿಂದ…

ನಿದ್ದೆ ಮಾಡುವುದರಿಂದ ಶೇಕಡಾ 33% ಹೃಧಯಾಘಾತ ವಾಗುವ ಪ್ರಮಾಣ  ಕಡಿಮೆ ಆಗುತ್ತದೆ.60 ವರ್ಷ ಮೇಲ್ಪಟ್ಟ ಜನರು ಮಧಾಹ್ನ ನಿದ್ದೆ ಮಾಡುವುದರಿಂದ  ಬೇರೆಯವರಿಗಿಂತ ತುಂಬಾ ಆಕ್ಟಿವ್ ಆಗಿರುತ್ತಾರೆ.ಹಾಗೂ ಅವರ ಬುದ್ಧಿವಂತಿಕೆಯ ಪ್ರಮಾಣ ಹೆಚ್ಚಳವಾಗುತ್ತದೆ.

ಹೃದಯಾಘಾತ ತಡೆಗಟ್ಟಬಹುದು…

ಕೆಲಸ ಮಾಡುವವರು ಹಾಗು ವ್ಯಾಪಾರ ಮಾಡುವವರು ಮಧ್ಯಾಹ್ನ  ಅರ್ಧ ಗಂಟೆಯಾದ್ರೂ  ನಿದ್ದೆ ಮಾಡಿದರೆ ಅವರ ಚೈತನ್ಯದ  ಜೊತೆಗೆ  ಶೇ .60%  ಹೃದಯಾಘಾತವಾಗುವುದನ್ನು ತಡೆಗಟ್ಟಬಹುದು ಎಂದು ಅಮೇರಿಕಾದ ಹಾವಾರ್ಡ್  ಸ್ಕೂಲ್ ಆಫ್  ಪಬ್ಲಿಕ್ ಹೆಲ್ತ್ ನವರು ಮಾಡಿದ ಸಂಶೋದೆನೆಯಲ್ಲಿ ದೃಢಪಡಿಸಿದ್ದಾರೆ.ದಿನನಿತ್ಯ ಮಧ್ಯಾಹ್ನ ನಿದ್ದೆ ಮಾಡಲು ಆಗದಿದ್ದಲ್ಲಿ ವಾರಕ್ಕೆ ಮೂರು ಬಾರಿಯಾದರೂ ಮಧ್ಯಾಹ್ನ ನಿದ್ದೆ ಮಾಡಿದರೆ ಹೃದಯಕ್ಕೆ ಸಂಬಂದಿಸಿದ ಕಾಯಿಲೆಗಳನ್ನು ತಡೆಗಟ್ಟಬಹುದು.

ಸೋಮಾರಿಗಳಾಗಬೇಡಿ…

ಎಡಗಡೆ ಕೈಯಲ್ಲಿ ತಲೆಯನ್ನು ಇಟ್ಟು ಮಲಗುವುದರಿಂದ ನಮ್ಮಲ್ಲಿರುವ ಸೂರ್ಯನಾಡಿ ಆಕ್ಟಿವ್  ಆಗುತ್ತದೆ.ಯಾವುದೇ ರೀತಿಯ ಕಾಯಿಲೆ ಬರುವುದಿಲ್ಲ ಮತ್ತು ಇಡೀ ದಿನ ಫ್ರೆಶ್ಯಾಗಿ ಇರಲು ಸಹಕರಿಸುತ್ತದೆ. ಮಧಾಹ್ನ ಅರ್ಧ ಗಂಟೆಯಾದರೂ  ನಿದ್ದೆ ಮಾಡಿದರೆ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು  ಆಗಂತ ಯಾವುದೇ ಕೆಲಸ ಮಾಡದೇ ಇಡೀ ದಿನ ನಿದ್ದೆ ಮಾಡಿ ಸೋಮಾರಿಗಳಾಗಬೇಡಿ.