ಆರೋಗ್ಯ

ನೀವು ಬ್ರೇಕ್‌ಫಾಸ್ಟ್ ತಪ್ಪಿಸಿದರೆ ಈ ಗಂಭೀರ ಆರೋಗ್ಯ ಸಮಸ್ಯ ನಿಮಗೆ ಗ್ಯಾರೆಂಟಿ..!ತಿಳಿಯಲು ಈ ಲೇಖನ ಓದಿ..

By admin

January 19, 2018

ಬೆಳಗಿನ ತಿಂಡಿಯನ್ನು ತಿನ್ನಲೂ ಹೆಚ್ಚಿನವರಿಗೆ ಪುರಸೊತ್ತು ಇರುವುದಿಲ್ಲ. ಹೆಚ್ಚಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೂ ಇದಕ್ಕೆ ಹೊರತಲ್ಲ. ಬ್ರೇಕ್‌ಫಾಸ್ಟ್ ತಪ್ಪಿಸುವುದರಿಂದ ಆರೋಗ್ಯ ಸಮಸ್ಯೆಗಳಿಗೆ ಮುಕ್ತ ಆಹ್ವಾನ ನೀಡಿದಂತಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.

ಆರೋಗ್ಯ ಸಮಸ್ಯೆಗಳು..

ಹೃದಯದ ಮೇಲೆ ಪರಿಣಾಮ :-

ಬೆಳಿಗ್ಗೆ ಆರೋಗ್ಯಕರ ಆಹಾರ ಸೇವನೆಯಿಂದ ದಿನವನ್ನು ಆರಂಭಿಸುವವರಿಗೆ ಹೋಲಿಸಿದರೆ ಬ್ರೇಕ್‌ಫಾಸ್ಟ್ ತಪ್ಪಿಸಿಕೊಳ್ಳುವವರು ಹೃದಯ ಕಾಯಿಲೆಗಳಿಗೆ ಗುರಿಯಾಗುವ ಅಪಾಯ ಹೆಚ್ಚು ಎನ್ನುವುದನ್ನು ಅಧ್ಯಯನವೊಂದು ಸಾಬೀತುಗೊಳಿಸಿದೆ.

ಬ್ರೇಕ್‌ಫಾಸ್ಟ್ ತಪ್ಪಿಸುವುದರಿಂದ ರಕ್ತದೊತ್ತಡ ಮತ್ತು ಮಾನಸಿಕ ಒತ್ತಡ ಹೆಚ್ಚುತ್ತವೆ.

ಗ್ಯಾಸ್ಟ್ರಿಕ್ ತೊಂದರೆಗಳು:-

ಬ್ರೇಕ್‌ಫಾಸ್ಟ್ ತಪ್ಪಿಸುವುದರಿಂದ ಊಟದ ವೇಳೆ ಹೆಚ್ಚಿನ ಆಹಾರ ಹೊಟ್ಟೆಯನ್ನು ಸೇರುತ್ತದೆ. ಪರಿಣಾಮವಾಗಿ ಆಹಾರವನ್ನು ಜೀರ್ಣಿಸುವ ಕರುಳುಗಳ ಮೇಲೆ ಅಧಿಕ ಹೊರೆ ಬೀಳುತ್ತದೆ ಮತ್ತು ಇದು ಅಲ್ಸರ್,ಗ್ಯಾಸ್ಟ್ರಿಕ್ಸ್, ಅಜೀರ್ಣ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಮಧುಮೇಹದ ಹೆಚ್ಚಿನ ಅಪಾಯ:-

ಬ್ರೇಕ್‌ಫಾಸ್ಟ್ ತಪ್ಪಿಸುವವರಿಗೆ ಹೋಲಿಸಿದರೆ ಬೆಳಿಗ್ಗೆ ಆರೋಗ್ಯಕರ ತಿಂಡಿ ತಿನ್ನುವವವರು ಟೈಪ್-2 ಮಧುಮೇಹಕ್ಕೆ ತುತ್ತಾಗುವ ಅಪಾಯವು ಕಡಿಮೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಮಹಿಳೆಯರು ತಮ್ಮ ಕೆಲಸದ ಭರಾಟೆಯಲ್ಲಿ ಹೆಚ್ಚಿನ ಸಲ ಬೆಳಗಿನ ತಿಂಡಿಯನ್ನು ಕಡೆಗಣಿಸುವುದರಿಂದ ಮಧುಮೇಹಕ್ಕೆ ತುತ್ತಾಗುವುದು ಹೆಚ್ಚು.

ರಾತ್ರಿ ಮಲಗಿದ ಬಳಿಕ ಬೆಳಿಗ್ಗೆ ಏಳುವವರೆಗೆ ಉಪವಾಸವಿರುವುದರಿಂದ ಬ್ರೇಕ್‌ಫಾಸ್ಟ್ ತಪ್ಪಿಸುವುದು ಈ ಉಪವಾಸದ ಅವಧಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ಇದು ರಕ್ತದಲ್ಲಿ ಸಕ್ಕರೆಯ ಮಟ್ಟ ಮತ್ತು ಇನ್ಸುಲಿನ್ ಉತ್ಪಾದನೆಯಲ್ಲಿ ಅಸಮತೋಲನಕ್ಕೆ ಕಾರಣವಾಗಬಹುದು.

ತಲೆಗೂದಲು ನಷ್ಟವಾಗಬಹುದು:-

ಸುಂದರ ತಲೆಗೂದಲನ್ನು ಹೊಂದಿರಲು ಪೌಷ್ಟಿಕ ಬ್ರೇಕ್‌ಫಾಸ್ಟ್ ಅಗತ್ಯವಾಗಿದೆ. ಪ್ರೋಟಿನ್‌ಭರಿತ ಬ್ರೇಕ್‌ಫಾಸ್ಟ್ ಕೆರಾಟಿನ್ ಉತ್ಪತ್ತಿಗೆ ನೆರವಾಗುತ್ತದೆ ಮತ್ತು ಕೆರಾಟಿನ್ ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಬೊಜ್ಜು ಹೆಚ್ಚುತ್ತದೆ:-

ಇದನ್ನು ಓದಿದರೆ ಅಚ್ಚರಿಯೆನ್ನಿಸಬಹುದು. ನೀವು ದೇಹತೂಕ ಇಳಿಸಲು ಬಯಸಿದ್ದೀರಾದರೆ ಕಡಿಮೆ ತಿನ್ನುವುದರಿಂದ ತೂಕ ಕಡಿಮೆಯಾಗುತ್ತದೆ ಎಂದು ಭಾವಿಸಿರಬಹುದು. ಆದರೆ ಇದು ಬ್ರೇಕ್‌ಫಾಸ್ಟ್ ತಪ್ಪಿಸಿಕೊಳ್ಳುವುದಕ್ಕೆ ಅನ್ವಯಿಸುವುದಿಲ್ಲ. ಅಲ್ಲದೆ ಊಟದ ವೇಳೆ ಹಸಿವು ತೀವ್ರವಾಗಿರುತ್ತದೆ.

ಪರಿಣಾಮವಾಗಿ ಹೆಚ್ಚಿನ ಊಟ ಮಾಡುವಂತಾಗುತ್ತದೆ ಮತ್ತು ದಿನದ ಅತ್ಯಂತ ಹೆಚ್ಚು ಜಡತೆಯ ಸಮಯದಲ್ಲಿ ಹೆಚ್ಚಿನ ಕ್ಯಾಲರಿಗಳು ಶರೀರದಲ್ಲಿ ಸೇರಿಕೊಂಡು ಅಂತಿಮವಾಗಿ ತೂಕ ಹೆಚ್ಚುತ್ತದೆ.

ಜೈವಿಕ ಯಂತ್ರ ನಿಧಾನಗೊಳ್ಳುತ್ತದೆ:-

ಬ್ರೇಕ್‌ಫಾಸ್ಟ್ 12 ಗಂಟೆಗಳ ಸುದೀರ್ಘ ಉಪವಾಸದ ಬಳಿಕ ನಾವು ಸೇವಿಸುವ ಮೊದಲ ಆಹಾರವಾಗಿದೆ ಮತ್ತು ಇದನ್ನು ತಪ್ಪಿಸಿದರೆ ನಮ್ಮ ಶರೀರಕ್ಕೆ ಉತ್ತಮ ಆರಂಭ ದೊರೆಯುವುದಿಲ್ಲ. ನಮ್ಮ ಜೈವಿಕ ಯಂತ್ರ ನಿಧಾನಗೊಳ್ಳುತ್ತದೆ ಮತ್ತು ಇದರಿಂದ ಇಡೀ ದಿನ ಆಲಸ್ಯ ಕಾಡುತ್ತದೆ.