ಸುದ್ದಿ

ನೀವು ಬ್ರೆಜಿಲ್ ಪ್ರವಾಸಕ್ಕೆ ಹೋಗ್ತೀರಾ?; ವೀಸಾ ಚಿಂತೆ ಬಿಟ್ಟು ಇಲ್ಲಿ ಓದಿ…!

By admin

October 25, 2019

ನೀವು ಬ್ರೆಜಿಲ್​ಗೆ ಪ್ರವಾಸ ಹೋಗುವ ಪ್ಲಾನ್​ ಹಾಕಿಕೊಂಡಿದ್ದೀರಾ? ಹಾಗಿದ್ದರೆ ನಿಮಗೆ ವೀಸಾದ ಅವಶ್ಯಕತೆ ಇಲ್ಲ. ಹೀಗೊಂದು ಹೊಸ ಘೋಷಣೆಯನ್ನು ಬ್ರೇಜಿಲ್​ ಸರ್ಕಾರ ಮಾಡಿದೆ.

ಬ್ರೆಜಿಲ್​ ಅಧ್ಯಕ್ಷ  ಜೈರ್ ಬೋಲ್ಸನಾರೊ ವೀಸಾ ನಿಯಮದಲ್ಲಿ ಬದಲಾವಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬ್ರೆಜಿಲ್​ಗೆ ಪ್ರವಾಸ ಹಾಗೂ ಉದ್ಯಮ ದೃಷ್ಟಿಯಿಂದ ಭೇಟಿ ನೀಡುವ ಭಾರತ ಹಾಗೂ ಚೀನಾ ನಾಗರಿಕರಿಗೆ ವೀಸಾದ ಅವಶ್ಯಕತೆ ಇಲ್ಲ ಎಂದು ಜೈರ್​ ಹೇಳಿದ್ದಾರೆ. ಇದರಿಂದ ಭಾರತ-ಬ್ರೆಜಿಲ್ ​ ಸಂಬಂಧ ಮತ್ತಷ್ಟು ವೃದ್ಧಿಯಾಗುವ ಸಾಧ್ಯತೆ ಇದೆ.

ಜೈರ್​ ಚೀನಾ ಪ್ರವಾಸದ ವೇಳೆ ಈ ಘೋಷಣೆ ಮಾಡಿದ್ದಾರೆ. ಈ ಮೊದಲು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ವೀಸಾ ಅವಶ್ಯಕತೆ ಇಲ್ಲ ಎಂದು ಬ್ರೆಜಿಲ್​ ಹೇಳಿತ್ತು.

ಅಮೆರಿಕ, ಕೆನಡಾ, ಜಪಾನ್ ಮತ್ತು ಆಸ್ಟ್ರೇಲಿಯಾ ನಾಗರಿಕರಿಗೆ ಬ್ರೆಜಿಲ್​ ಪ್ರವೇಶಿಸಲು ವೀಸಾ ಅವಶ್ಯಕತೆ ಇಲ್ಲ. ಆಗಾಗಿ ಬ್ರೆಜಿಲ್ ಪ್ರವಾಸಕ್ಕೆ ಹೋಗಬೇಕು ಎಂದುಕೊಂಡವರು ನಿಷ್ಚಿಂತೆಯಿಂದ ಖುಷಿಯಾಗಿ ಪ್ರಯಾಣ ಬೆಳೆಸಬಹುದು.