ಗ್ಯಾಜೆಟ್

ನೀವು ನಿಮ್ಮ ಐಫೋನ್ ‘ನನ್ನು ಕಳೆದುಕೊಂಡಿದ್ದಿರಾ ಹಾಗದ್ರೆ ಹುಡುಕುವುದು ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

By admin

January 20, 2018

ಇತ್ತೀಚಿನ ನಮ್ಮ ಜೀವನ ಶೈಲಿಯಲ್ಲಿ ವ್ಯಕ್ತಿಗಳಿಗಿಂತ ವಸ್ತುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ, ಮೊಬೈಲ್, ಲ್ಯಾಪ್ಟಾಪ್, ಐಪಾಡ್, ಐಫೋನ್ ಇವುಗಳಿಗೆ ಪ್ರಾಮುಖ್ಯತೆ ಹೆಚ್ಚುತ್ತಿದೆ. ನಮಗೆ ಗೊತ್ತಿಲದೇ ಐಫೋನ್ ಕಳೆದರೆ ಚಿಂತೆ ಬೇಡ. ಕಳೆದುಹೋದ ಇಪ್ಪಹೋಣೆ ಹುಡುಕುವುದು ಹೇಗೆ ಎಂಬುದುಗೊತ್ತಾ..?

ಕಳುವಾದ ಐಫೋನ್ ಅನ್ನು ಹುಡುಕುವ ಸುಲುವಾಗಿಯೇ ಫೈಂಡ್ ಮೈ ಐಪೋನ್ ಎನ್ನುವ ಆಯ್ಕೆಯನ್ನು ನೀಡಲಾಗಿದೆ. ಇದರ ಮೂಲಕ ನೀವು ನಿಮ್ಮ ಐಫೋನ್ ಅಥಾವ ಐಪ್ಯಾಡ್ ಎಲ್ಲಿಟ್ಟಿದ್ದೀರಾ ಎನ್ನುವುದನ್ನು ಕಂಡುಹಿಡಿಯಬಹುದಾಗಿದೆ. ಇದನ್ನು ಬಳಸುವುದು ಹೇಗೆ ಎಂಬುದು ಇಲ್ಲಿದೆ ನೋಡಿ.

ನಿಮ್ಮ ಆಪಲ್ ಡಿವೈಸ್ ಹುಡುಕುವ ಸಲಯವಾಗಿ ಇನ್ನೊಂದು  iOS  ಡಿವೈಸ್ ನಲ್ಲಿ ಫೈಂಡ್ ಮೈ ಐಫೋನ್ ಆಪ್ ಒಪನ್ ಮಾಡಿ. ನಂತರದಲ್ಲಿ ಆಪ್ ನಲ್ಲಿ ನಿಮ್ಮ ಆಪಲ್ ಐಡಿ ಮತ್ತು ಪಾಸ್ ವರ್ಡ್ ಅನ್ನು ಹಾಕಿರಿ. ನಂತರ ಅದರಲ್ಲಿ ನಿಮ್ಮ ಐಫೋನ್ ಲೋಕೆಷನ್ ಡಿಸ್ ಪ್ಲೇಯಲ್ಲಿ ಕಾಣಿಸಿಕೊಳ್ಳಲಿದ್ದು, ಅಲ್ಲಿಂದಲೇ ನಿಮ್ಮ ಐಫೋನ್ ಅನ್ನು ನೀವು ಟ್ರಾಕ್ ಮಾಡಬಹುದಾಗಿದೆ.

ಈ ಪ್ರೋಸೆಸ್ ನಲ್ಲಿ ಇದು ನಿಮ್ಮ ಫೋನಿನ ಲೋಕೆಷನ್ ಅನ್ನು ತೋರಿಸಲಿದ್ದು, ನಿಮ್ಮ ಫೋನ್ ಎಲ್ಲಿದೇ ಎಂಬುದನ್ನು ನಿಖರವಾಗಿ ತಿಳಿಸಲಿದೆ. ಈ ಫೈಡ್ ಮೈ ಐಫೋನ್ ಆಯ್ಕೆಯಲ್ಲಿ ನಿಮ್ಮ ಕಳೆದು ಹೋದ ಫೋನಿನಲ್ಲಿರುವ ಮಾಹಿತಿಗಳನ್ನು ಅಳಿಸಿ ಹಾಕಬಹುದಾಗಿದೆ. ಇದರಿಂದ ನಿಮ್ಮ ಮಾಹಿತಿಗಳು ಬೇರೆಯವರ ಕೈಗೆ ಸಿಗದಂತೆ ಕೂಡ ಮಾಡಬಹುದು.