ನಮ್ಮ ಭಾರತೀಯ ಹಿಂದೂ ಸಂಪ್ರದಾಯದಲ್ಲಿ ದೇವರ ಪೂಜೆಗೆ, ವಿಶೇಷ ಸ್ಥಾನವಿದೆ. ಎಲ್ಲರೂ ಅವರವರ ಭಕ್ತಿಗೆ ತಕ್ಕಂತೆ ಪ್ರತಿದಿನ ಪೂಜೆ ಮಾಡುತ್ತಾರೆ. ಏಕೆಂದರೆ ಪ್ರತಿದಿನ ದೇವರ ಪೂಜೆ ಮಾಡೋದು ಶುಭ. ಅನೇಕರ ದಿನ ಆರಂಭವಾಗುವುದು ದೇವರ ಪೂಜೆ ಮೂಲಕ.
ಆದ್ರೆ ದೇವರ ಪೂಜೆಯನ್ನು ಹೇಗಂದರೆ ಹಾಗೆ ಮಾಡುವಂತಿಲ್ಲ. ದೇವರ ಪೂಜೆಗೆ ಅದರದ್ದೇ ಆದ ನಿಯಮ ವಿದೆ ಎಂಬುದು ಅನೇಕರಿಗೆ ತಿಳಿಯದ ವಿಷಯ. ಏನೋ ನಾನು ಪೂಜೆ ಮಾಡ್ದೆ ಎಂದು ಎದ್ದು ಹೋಗ್ತಾರೆ. ಇದ್ರಿಂದ ಪೂಜೆಗೆ ಸಿಗುವ ಫಲವೂ ಸರಿಯಾಗಿ ನಮಗೆ ದಕ್ಕುವುದಿಲ್ಲ.
ಹಾಗಾಗಿ ಪೂಜೆ ಮಾಡಲು ಕೆಲವೊಂದು ನಿಯಮಗಳನ್ನು ಹೇಳಲಾಗಿದೆ. ಈ ನಿಯಮ ಪಾಲನೆ ಮಾಡಿದ್ರೆ ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದೆ.
- ಯಾವಾಗ್ಲೂ ಪೂಜೆ ಮಾಡಬೇಕೆಂದರೆ ಅರ್ಧ ಸುತ್ತು ಶಿವನನ್ನು, ಮೂರೂ ಸುತ್ತು ಗಣೇಶನನ್ನು, ನಾಲ್ಕು ಸುತ್ತು ನಾರಾಯಣನನ್ನು ಹಾಗೂ ಸೂರ್ಯನ ಏಳು ಸುತ್ತು ಪರಿಕ್ರಮವನ್ನು ಮಾಡಬೇಕು.
- ದೀಪವನ್ನು ಹಚ್ಚಲು ಎಂದೂ ಬಿಳಿಯ ಹತ್ತಿಯನ್ನೇ ಬಳಸಬೇಕು.
- ದೀಪವನ್ನು ಭಗವಂತನ ಮೂರ್ತಿ ಮುಂದೆಯೇ ಹಚ್ಚಬೇಕು.
- ಪೂಜಾ ಸ್ಥಳದಲ್ಲಿ ಹಳೆ ಹೂ ಹಾಗೂ ಎಲೆಗಳನ್ನು ಇಡಬಾರದು.
- ಶಿವನಿಗೆ ಎಂದೂ ಶಂಖದ ನೀರನ್ನು ಅರ್ಪಣೆ ಮಾಡಬೇಡಿ. ಹಾಗೆ ಅರಿಶಿನವನ್ನು ಹಚ್ಚಬೇಡಿ.