ಕೊರೊನಾ ಈ ದೇಶಕ್ಕೆ ಕಾಲಿಟ್ಟಾಗ ಹಳ್ಳಿಗಳು ಕೊರೊನಾ ವೈರಸ್ ನಿಂದ ಬಹುದೂರದಲ್ಲಿದ್ದವು. ಪೇಟೆಗಳಲ್ಲಿ ಮಾತ್ರ ಜನ ಕೊರೊನಾಕ್ಕೆ ಬಲಿ ಆಗ್ತಾ ಇದ್ರು. ಆದ್ರೆ ಕೊರೊನಾ ಎರಡನೇ ಅಲೆ ಹಳ್ಳಿಗರನ್ನು ತೀವ್ರವಾಗಿ ಬಾಧಿಸುತ್ತಿದೆ. ಇದಕ್ಕೆ ಹಳ್ಳಿಗರ ಸ್ವಯಂಕೃತ ಅಪರಾಧವೇ ಕಾರಣವಾಗಿದೆ.
ಆಶ್ಚರ್ಯ ಅಂದ್ರೆ ಸಿಟಿಗಳಿಗಿಂತಲೂ ವೇಗವಾಗಿ ಹಳ್ಳಿಗಳಲ್ಲಿ ಖಾಯಿಲೆ ಹರಡುತ್ತಿದೆ. ಇದಕ್ಕೆ ಕಾರಣಗಳನ್ನ ಪಟ್ಟಿ ಮಾಡ್ತಾ ಹೋದ್ರೆ ಹಳ್ಳಿ ಜನರ ಬೇಜವಾಬ್ದಾರಿತನ, ಅನಕ್ಷರತೆ, ಮೂಢನಂಬಿಕೆ, ಭಕ್ತಿ, ಭಯ, ಮಾನವೀಯತೆ ಮುಗ್ಧತೆಯಂತ ಹಲವು ಕಾರಣಗಳು ಸಿಕ್ಕುತ್ತವೆ.
ಯಾವೆಲ್ಲಾ ಕಾರಣಗಳಿಂದಾಗಿ ಜನರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಅನ್ನೋದನ್ನ ಒಂದು ಪಟ್ಟಿಯಲ್ಲಿ ನೋಡೋದಾದ್ರೆ..
1) ಹಳ್ಳಿಗಳಲ್ಲಿ ಜನ ಮಾಸ್ಕ್ ಹಾಕೋದೇ ಇಲ್ಲ
2) ಮಾಸ್ಕ್ ಹಾಕಿದ್ರೂ ತಿಂಗಳುಗಟ್ಟಲೇ ತೊಳೆಯಲ್ಲ
3) ಪೊಲೀಸರಿಗೆ ಹೆದರಿ ತೋರಿಕೆಗೆ ಮಾಸ್ಕ್ ಹಾಕ್ತಾರೆ
4) ಮಾಸ್ಕ್ ಸರಿಯಾಗಿ ಹಾಕಲ್ಲ
5) ಸ್ಯಾನಿಟೈಜರ್ ಉಪಯೋಗಿಸುವುದೇ ಇಲ್ಲ
6) ಪದೇ ಪದೇ ಕೈ ತೊಳೆಯುವ ಪದ್ದತಿಯೇ ಇಲ್ಲ
7) ಸ್ನಾನವೂ ಸೇರಿದಂತೆ ಸ್ವಚ್ಛತೆಯ ಬಗ್ಗೆ ಗಮನ ನೀಡದೇ ಇರುವುದು
8) ಸೋಷಿಯಲ್ ಡಿಸ್ಟನ್ಸ್ ಗೆ ಅರ್ಥವೇ ಗೊತ್ತಿಲ್ಲ
9) ಟಂ ಟಂ ವಾಹನ ಗೂಡ್ಸ್ ವಾಹನ, ಟ್ರ್ಯಾಕ್ಟರ್ ಗಳಲ್ಲಿ ಗುಂಪಾಗಿ ಪ್ರಯಾಣ
10) ಹಳ್ಳಿಗಳ ಚಹಾ ಅಂಗಡಿಗಳಲ್ಲಿ ಗುಂಪು ಸೇರೋದು
11) ದೇವಸ್ಥಾನ ಅರಳಿಕಟ್ಟೆಗಳಲ್ಲಿ ಗುಂಪಾಗಿ ಸೇರುವದು
12) ಚಹಾದ ಅಂಗಡಿಗಳಲ್ಲಿ ಗುಂಪು ಸೇರುವದು
13) ಮದುವೆಗೆ 40 ಜನಕ್ಕೆ ಪರವಾನಿಗೆ ತೆಗೆದುಕೊಂಡು ಕದ್ದು ಮುಚ್ಚಿ ನೂರಾರು ಜನ ಸೇರುವುದು
14) ಒಬ್ಬರ ಮನೆಯಲ್ಲಿ ಯಾರಿಗಾದ್ರೂ ಹುಷಾರ್ ಇಲ್ಲಾಂದ್ರೆ ಎಲ್ಲರೂ ಖಾಯಿಲೆ ಬಿದ್ದವರನ್ನು ಮಾತನಾಡಿಸಲು ಹೋಗುವುದು
15) ಕದ್ದು ಮುಚ್ಚಿ ರಾತ್ರೋ ರಾತ್ರಿ ಜಾತ್ರೆ ಪೂಜೆ ಹೋಮ ಹವನ ಮಾಡುವುದು
16) ಕೊರೊನಾ ಹಳ್ಳಿ ಜನಕ್ಕೆ ಬರಲ್ಲ ಅನ್ನೋ ಭ್ರಮೆ
17) ಕೊರೊನಾ ಸಿಟಿಗೆ ಸೀಮಿತವಾದ ಖಾಯಿಲೆ ಅನ್ನೋ ಭ್ರಮೆ
18) ನಾವು ಚೆನ್ನಾಗಿ ದುಡಿತೀವಿ ತಿಂತೀವಿ ನಮಗೆ ಬರಲ್ಲ ಅನ್ನೋ ನಂಬಿಕೆ
19) ಮದ್ಯಪಾನ ಮಾಡಿದ್ರೆ ಕೊರೊನಾ ಬರಲ್ಲ ಅನ್ನೋ ಭ್ರಮೆ
20) ಕೊರೊನಾ ಕೇವಲ ಸರಕಾರ ಹಾಗೂ ಮಾಧ್ಯಮಗಳ ಸೃಷ್ಠಿ ಎಂದುಕೊಂಡಿರುವುದು
21) ದುಡ್ಡು ಹೊಡೆಯಲು ಸರಕಾರ ಇದನ್ನೆಲ್ಲಾ ಮಾಡುತ್ತಿದೆ ಎಂಬ ಸುಳ್ಳು ನಂಬಿಕೆ
22) ವ್ಯಾಕ್ಸಿನ್ ಬಗ್ಗೆ ಇಲ್ಲಸಲ್ಲದ ತಪ್ಪು ತಿಳುವಳಿಕೆಗಳು
23) ವ್ಯಾಕ್ಸಿನ್ ಹಾಕಿಸಿಕೊಂಡ್ರೆ ಜ್ವರ ಬರುತ್ತೆ ಮುಂದೆ ಸಾಯ್ತಾರೆ ಅನ್ನೋದು
24) ಕೊರೊನಾದಿಂದ ಶೀತ ಕೆಮ್ಮು ಬಂದ್ರೂ ವೈದ್ಯರ ಬಳಿಗೆ ಹೋಗಲ್ಲ
25) ಕೆಮ್ಮು ಶೀತ ಜ್ವರ ಸಾಮಾನ್ಯ ಖಾಯಿಲೆಗಳು ಎಂಬ ನಂಬಿಕೆ
26) ಗ್ರಾಮದಲ್ಲೇ ಲಭ್ಯ ಇರುವ ನಕಲಿ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳುವುದು
27) ಕೊರೊನಾ ಟೆಸ್ಟ್ ನಿಂದ ದೂರ ಇರೋದು
28) ಸರಕಾರಿ ಆಸ್ಪತ್ರೆಗೆ ಹೋದ್ರೆ ಕೊರೊನಾ ಟೆಸ್ಟ್ ಮಾಡ್ತಾರೆ
29) ಸರಕಾರಿ ಆಸ್ಪತ್ರೆ, ದೊಡ್ಡ, ಆಸ್ಪತ್ರೆಯಿಂದ ದೂರ ಇರ್ತಾರೆ
30) ಕೆಮ್ಮು ಶೀತಕ್ಕೆಲ್ಲ ಹೆದರಬೇಡ ಎಂಬ ಹಳ್ಳಿಗರ ಮಾತಿಗೆ ಮಣಿಯೋದು
31) ಜ್ವರ ಕೆಮ್ಮು ಉಲ್ಬಣಿಸಿದ್ರೆ ಯಂತ್ರ ಮಂತ್ರ ಬೂದಿ ಪ್ರಯೋಗ
32) ಸೋಷಿಯಲ್ ಮೀಡಿಯಾದ ನಕಲಿ ಹಾಗೂ ಸುಳ್ಳು ವಿಡಿಯೋಗಳ ಮೇಲೆ ಭರವಸೆ ಇಟ್ಟುಕೊಳ್ಳುವದು
33) ದೊಡ್ಡಾಸ್ಪತ್ರೆಗಳಲ್ಲಿ ಕಿಡ್ನಿ ಕಣ್ಣು ಮಿದುಳು ಸೇರಿದಂತೆ ಹಲವು ಅಂಗಾಂಗಗಳನ್ನು ಕದಿಯಲು ವೈದ್ಯರು, ಸರ್ಕಾರ ನಡೆಸಿದ ಹುನ್ನಾರ ಎಂಬ ನಂಬಿಕೆ
34) ಮೃತ ಶರೀರ ಪ್ಯಾಕ್ ಮಾಡಿಕೊಡುವ ಉದ್ದೇಶ ಹಾಗೂ ಯಾರೂ ಮುಟ್ಟದಂತೆ ನೋಡಿಕೊಳ್ಳಲು ಕಾರಣ ಅಂಗಾಂಗಗಳನ್ನ ಕದ್ದಿರ್ತಾರೆ ಎಂದು ಕೊಂಡಿರುವ ಜನ
35) ಆಸ್ಪತ್ರೆಗಳಲ್ಲಿ ಅಡ್ಮಿಟ್ ಮಾಡಿಕೊಂಡ್ರೆ ನೋಡೋಕೂ ಬಿಡಲ್ಲ, ಒಳಗೆ ಏನ್ ಮಾಡ್ತಾರೆ ಗೊತ್ತೇ ಆಗಲ್ಲ ಎಂದು ವೈದ್ಯರನ್ನೂ ನಂಬದ ಜನ
36) ಕೊರೊನಾ ಪೀಡಿತ ಅಂತ ಗೊತ್ತಿದ್ದರೂ ಮನೆಯಲ್ಲಿ ಪ್ರತ್ಯೇಕವಾಗಿ ಉಳಿಯದೇ ಇರೋದು
37) ಖಾಯಿಲೆ ಪೀಡಿತನಿಗೆ ಅಸ್ಪಶ್ಯತಾ ಭಾವನೆ ಬರದೇ ಇರಲಿ ಅನ್ನೋ ಕಾರಣಕ್ಕೆ ಅವನನ್ನು ತಮ್ಮ ಬಳಿ ಸೇರಿಸಿಕೊಳ್ಳುವದು
ಇವು ಸಾಮಾನ್ಯವಾಗಿ ಎಲ್ಲಾ ಹಳ್ಳಿಗಳಲ್ಲಿ ಕೊರೊನಾ ಉಲ್ಬಣಗೊಳ್ಳಲು ಪ್ರಮುಖ ಕಾರಣಗಳು ಇನ್ನು ಆಯಾ ಪ್ರದೇಶ ಆಯಾ ಸಂಸ್ಕೃತಿಗಳ ಮೇಲೆ ಕಾರಣಗಳು ಬದಲಾಗ್ತಾ ಹೋಗುತ್ತವೆ.