ದಟ್ಟವಾದ ರೇಷಿಮೆಯಂತಹ ಕೂದಲು ನೋಡಿದರೆ ಕಣ್ಮನ ಸೆಳೆಯುತ್ತದೆ. ಸುಂದರ ಕೇಶ ಯಾವ ಮೇಕಪ್ ಮತ್ತು ಆಭರಣಗಳು ನೀಡದಂತಹ ಮೆರುಗನ್ನು ನೀಡುತ್ತದೆ. ನಿದಾನವಾಗಿ ತಲೆಬಾಚಲು ಸಹ ಸಮಯ ಸಿಗದ ಇಂದಿನ ದಿನಗಳಲ್ಲಿ ಕೇಶಕ್ಕಾಗಿ ಆರೈಕೆ ತುಸು ಕಷ್ಟವೇ.
ಆದರೆ ಸುಮ್ಮನೆ ಬಿಟ್ಟಲ್ಲಿ ನಮ್ಮ ಅಂದವನ್ನು ಹೆಚ್ಚಿಸುವ ಕೂದಲು ಹಾಳಾಗಿ ಬಿಡುತ್ತದೆ. ಸೀಳು ಕೂದಲು, ತಲೆಹೊಟ್ಟು, ಕೂದಲು ಉದುರುವಿಕೆ, ಒಣಕೂದಲು, ಜಿಡ್ಡು ಹೀಗೆ ಹಲವಾರು ಸಮಸ್ಯೆಗಳು ಕಾಡುತ್ತದವೆ.
ಕೂದಲು ಉದುರುವಿಕೆ ಬಹುತೇಕರಲ್ಲಿ ಕಾಣುವ ಸಮಸ್ಯೆ. ದಿನನಿತ್ಯ ಸ್ವಲ್ಪ ಕೂದಲು ಉದುರಿದರೆ ಅದು ಸಾಮಾನ್ಯ. ಅವುಗಳ ಜಾಗದಲ್ಲಿ ಹೊಸ ಕೂದಲು ಸೃಷ್ಟಿಯಾಗುತ್ತದೆ. ಆದರೆ ಹೆಚ್ಚು ಉದುರುತ್ತಿದ್ದರೆ ಕೂದಲಿನ ಅಂದ ಮತ್ತು ಆರೋಗ್ಯಕ್ಕಾಗಿ ಆರೈಕೆ ಅನಿವಾರ್ಯ.
ಸುಂದರ ಕೇಶಕ್ಕಾಗಿ ಹೀಗೆ ಮಾಡಿ:-
- ಪೌಷ್ಟಿಕ ಅಹಾರ ಅವಶ್ಯಕ. ಮಿಟಮಿನ್, ಕ್ಯಾಲ್ಸಿಯಂ ಆಹಾರ ಸೇವಿಸಿ.
- ತಲೆ ಸ್ನಾನಕ್ಕೆ ಉಗರು ಬೆಚ್ಚಗಿನ ನೀರು ಸಾಕು.
- ತಲೆ ಸ್ನಾನದ ನಂತರ ಒಣಗಿಸಲು ಹೇರ್ ಡ್ರೈಯರ್ ಬಳಸಬೇಡಿ. ಅತಿಯಾದ ಬಿಸಿಲು ಒಳ್ಳೆಯದಲ್ಲ.
- ಸಾಧ್ಯವಾದಷ್ಟು ಬಾರಿ ಕೊಬ್ಬರಿ ಎಣ್ಣೆ ಹಚ್ಚಿ ಮಸಾಜ್ ಮಾಡಿ. ವಾರಕ್ಕೊಮ್ಮೆಯಾದರೂ ರಾತ್ರಿ ಎಣ್ಣೆ ಹಚ್ಚಿ ಬೆಳಿಗ್ಗೆ ಸ್ನಾನ ಮಾಡಿ.
- ಕೊಬ್ಬರಿ ಎಣ್ಣೆಯಲ್ಲಿ ನೆಲ್ಲಿಕಾಯಿ ಪುಡಿ, ಮೆಂತ್ಯೆ ಪುಡಿ, ದಾಸವಾಳ ಹೂ, ಕರಿಬೇವು ಇವುಗಳಲ್ಲಿ ಯಾವುದಾದರು ಒಂದನ್ನು ಹಾಕಿ, ಬಿಸಿ ಮಾಡಿ ಸೋಸಿ ಆಗಾಗ್ಗೆ ಕೂದಲಿಗೆ ಹಚ್ಚಿ.
- ಮೋಟ್ಟೆಯ ಬಿಳಿಯ ಭಾಗವನ್ನು ಕೊಬ್ಬರಿ ಎಣ್ಣೆಯಲ್ಲಿ ಕಲಸಿ ತಲೆಗೆ ಹಚ್ಚಿ ಒಂದು ಗಂಟೆ ಬಿಟ್ಟು ತೊಳೆಯಿರಿ. ಕೂದಲು ಹೊಳೆಯುತ್ತದೆ.
- ಸೀಳಿದ ಕೂದಲ ತುದಿ ಕತ್ತರಿಸಿ ಬಿಸಿ ಎಣ್ಣೆ ಹಚ್ಚಿ.
- ಮೆಹಂದಿ: ಹಲವು ಸಮಸ್ಯೆಗೆ ಮೆಹಂದಿ ಪರಿಹಾರ.15 ದಿನ, ತಿಂಗಳಿಗೆ ಒಮ್ಮೆಯಾದರೂ ಇದರ ಬಳಕೆ ಒಳ್ಳೆಯದು. ಮೆಹಂದಿಯಲ್ಲಿ ಕಾಫಿ/ಚಹಾದ ಡಿಕಾಕ್ಷನ್, ಲವಂಗ, ನೆಲ್ಲಿಕಾಯಿ ಪುಡಿ, ಮೆಂತ್ಯೆ ಪುಡಿ ಹಾಕಿ ರಾತ್ರಿಯಿಡೀ ನೆನೆಸಿ. ತಲೆಗೆ ಹಚ್ಚುವ ಮುನ್ನ ಮೊಟ್ಟೆಯ ಬಿಳಿ ಲೋಳೆ ಹಾಕಿ ಕಲಸಿ ಕೂದಲಿನ ಬುಡದಿಂದ ಕೊನೆಯವರಿಗೂ ಹಚ್ಚಿ. 3 ಗಂಟೆ ನಂತರ ಶ್ಯಾಂಪು ಬಳಸದೆ ತೊಳೆಯಿರಿ. ಕೂದಲು ಒಣಗಿದ ಮೇಲೆ ಎಣ್ಣೆ ಹಚ್ಚಿ.
- ನೈಸರ್ಗಿಕವಾಗಿ ಸಿಗುವ ಮೆಹಂದಿ ಎಲೆಗಳನ್ನು ರುಬ್ಬಿ ಪೇಸ್ಟ್ ಮಾಡಿ ಹಚ್ಚಿ. ಇದು ಕೂಡ ಪರಿಣಾಮಕಾರಿ.
- ಸಾಧ್ಯವಾದಷ್ಟು ಶ್ಯಾಂಪುವಿನ ಬಳಕೆ ಕಡಿಮೆ ಮಾಡಿ. ಮಾಡಲೇಬೇಕಿದ್ದರೆ ಬಾಟಲ್ ಗಿಂತ ಶ್ಯಾಸೆಗಳನ್ನು ಬಳಸಿ.
- ಹೊರಗೆ ಹೋದಾಗೆಲ್ಲ ತಲೆಗೆ ಸ್ಕ್ರಾರ್ಫ್ ಬಳಸಿ. ದೂಳಿನಿಂದ ಇದು ಕೂದಲ ರಕ್ಷಣೆ ಮಾಡುತ್ತದೆ.