ನಮ್ಮ ದೇಹದ ಎಲ್ಲಾ ಭಾಗಗಳ ಚರ್ಮ ಬಿಳಿಯಾಗಿದ್ದರೂ ಮೊಣಕಾಲು ಮತ್ತು ಮೊಣಕೈಯ ಭಾಗಗಳು ಕಪ್ಪಾಗಿರುತ್ತವೆ ಹಾಗೂ ಒರಟಾಗಿರುತ್ತವೆ. ನೋಡಲು ಅಷ್ಟೇನು ಅಂದವಾಗಿರುವುದಿಲ್ಲ. ಡೆಡ್‌ಸ್ಕಿನ್‌ನ ಕಾರಣದಿಂದಾಗಿ ಆ ಭಾಗದ ಚರ್ಮ ಕಪ್ಪಾಗುತ್ತದೆ.
ಪ್ರತಿದಿನ ನಾವು ಬಳಕೆ ಮಾಡುವ ಸೋಪ್‌ನಿಂದ ಈ ಚರ್ಮದ ಬಣ್ಣವನ್ನ ಬದಲಾವಣೆ ಮಾಡಲು ಸಾಧ್ಯವಿಲ್ಲ. ಇದರ ಬದಲಾಗಿ ಇನ್ನೂ ಕೆಲವೊಂದು ಟಿಪ್ಸ್‌ಗಳನ್ನು ಬಳಕೆ ಮಾಡಿಕೊಂಡು ನೀವು ಚರ್ಮದ ಬಣ್ಣವನ್ನ ಬದಲಾವಣೆ ಮಾಡಬಹುದು.
ಆದರೆ ನೀವು ಕೆಳಗಿನ ಈ ಕ್ರಮವನ್ನು ಒಂದು ಬಾರಿ ಬಳಸಿ ನೋಡಬಹುದು…
ಟೂಥ್‌ಪೇಸ್ಟ್ ಮತ್ತು ಬೇಕಿಂಗ್ ಸೋಡಾ
- ಟೂಥ್‌ಪೇಸ್ಟ್ ಮತ್ತು ಬೇಕಿಂಗ್ ಸೋಡಾವನ್ನು ಮಿಕ್ಸ್ ಮಾಡಿ ನಿಮ್ಮ ಮೊಣಕೈ ಮತ್ತು ಮೊಣಕಾಲಿಗೆ ಹಾಕಿ. ಈಗ ಅದನ್ನು ಟೂಥ್ಬ್ರಶ್ ಸಹಾಯದಿಂದ 2 ನಿಮಿಷಗಳ ಕಾಲ ಚೆನ್ನಾಗಿ ತಿಕ್ಕಿ.
- ನಂತರ ಐದು ನಿಮಿಷ ಬಿಟ್ಟು ಅದನ್ನು ಉಗುರು ಬಿಸಿ ನೀರಿನಿಂದ ತೊಳೆಯಿರಿ. ಇದಾದ ಬಳಿಕ ರೆಗ್ಯುಲರ್ ಮಾಯಿಶ್ಚರೈಸರ್ ಹಚ್ಚಿ. ಇದನ್ನು ಎರಡು ವಾರದಲ್ಲಿ ಒಂದು ಬಾರಿ ಮಾಡುತ್ತ ಬಂದರೆ ಮೊಣಕೈನ ಹಾಗೂ ಮೊಣಕಾಲಿನ ಭಾಗ ಬಿಳಿ ಬಣ್ಣಕ್ಕೆ ತಿರುಗುತ್ತದೆ.
ನಿಂಬೆಹಣ್ಣು
- ಸ್ವಲ್ಪ ನಿಂಬೆ ರಸವನ್ನು ತೆಗೆದುಕೊಂಡು ಕಪ್ಪಾದ ಪ್ರದೇಶದಲ್ಲಿ ಹಚ್ಚಿ. ಆ ಬಳಿಕ
- 15 ರಿಂದ 20 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ. ಹೀಗೆ ಮಾಡಿದರೆ ಚರ್ಮ ಸಹಜ ಸಿದ್ಧವಾದ ಹೊಳಪನ್ನು ಪಡೆಯುತ್ತದೆ.
ಸೌತೇಕಾಯಿ
- ಸೌತೇಕಾಯಿ ಹೋಳುಗಳ ಜೊತೆಗೆ ಸ್ವಲ್ಪ ನಿಂಬೆರಸ, ಅರಿಶಿಣ ಬೆರೆಸಿ ಮಿಕ್ಸಿಯಲ್ಲಿ ಹಾಕಿ ಮಿಕ್ಸ್ ಮಾಡಿ.
- ಈ ಮಿಶ್ರಣವನ್ನು ಕಪ್ಪಾದ ಭಾಗಗಳಿಗೆ ಹಚ್ಚಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
ಕಡ್ಲೆಹಿಟ್ಟು
- ಕಡ್ಲೆಹಿಟ್ಟಿನಲ್ಲಿ ಅರಿಶಿನ ಮಿಕ್ಸ್ ಮಾಡಿ ಮೊಣಕಾಲಿಗೆ ಹಚ್ಚಿ.
- ಸ್ವಲ್ಪ ಸಮಯ ಒಣಗಿದ ಮೇಲೆ ತೊಳೆಯಿರಿ ಉತ್ತಮ ಫಲಿತಾಂಶ ಸಿಗುತ್ತದೆ.
ಆಲೂಗಡ್ಡೆ
- ಆಲೂಗಡ್ಡೆಯನ್ನು ಪೇಸ್ಟ್ ಮಾಡಿ ಅದಕ್ಕೆ ಜೇನು ಮತ್ತು ಹಸಿ ಹಾಲು ಹಾಕಿ ಮಿಕ್ಸ್ ಮಾಡಿ ಮೊಣಕೈಗೆ ಹಚ್ಚಿ.
- ಕೆಲವು ದಿನ ಹೀಗೆ ಮಾಡಿದ್ರೆ ಮೊಣಕೈ ಮೊಣಕಾಲು ಬೆಳ್ಳಗಾಗುತ್ತದೆ.
ಹಾಲು
ಹಾಲು, ಅದರ ಉತ್ಪನ್ನಗಳು ಚರ್ಮವನ್ನು ಸಂರಕ್ಷಿಸುವ ಗುಣಗಳು ಅಧಿಕವಾಗಿ ಇದ್ದರೂ. ಸ್ವಲ್ಪ ಹಾಲು, ಮೊಸರನ್ನು ತೆಗೆದುಕೊಂಡು ಮಿಶ್ರಣವನ್ನು ಬೆರೆಸಿ ಚರ್ಮಕ್ಕೆ ಹಚ್ಚಬೇಕು. ಇದರಿಂದ ನಿರೀಕ್ಷಿತ ಫಲಿತಾಂಶ ಸಿಗುವುದು.