ವಾಸ್ತುದೋಷದಿಂದ ಸುಖ-ಸಮೃದ್ಧಿ ನಾಶವಾಗುತ್ತದೆ. ಕುಟುಂಬದಲ್ಲಿ ಸಮಸ್ಯೆ ಕಾಡುತ್ತದೆ. ಮನೆಯಲ್ಲಿ ವಾಸ್ತುದೋಷವಿದೆ ಎನ್ನುವ ಕಾರಣಕ್ಕೆ ಜನರು ಮನೆ ಒಡೆಯಲೂ ಮುಂದಾಗ್ತಾರೆ. ಆದ್ರೆ ಮನೆ ಒಡೆಯಬೇಕಾಗಿಲ್ಲ…
ಕೆಲ ಸರಳ ಉಪಾಯಗಳನ್ನು ಅನುಸರಿಸಿ ವಾಸ್ತು ದೋಷವನ್ನು ಕಡಿಮೆ ಮಾಡಬಹುದು…
*ದೇವರ ಪೂಜೆ ಮಾಡಿದ ಹೂವನ್ನು ದೇವರ ಮನೆಯಲ್ಲಿಡಬೇಡಿ.
*ಈಶಾನ್ಯ ಮೂಲೆಯಲ್ಲಿ ಅಧಿಕ ತೂಕದ ವಸ್ತುಗಳನ್ನು ಇಡಬೇಡಿ.
*ಮನೆಯ ಉತ್ತರ ದಿಕ್ಕಿನಲ್ಲಿ ತುಳಸಿ ಗಿಡವನ್ನಿಡಿ.
*ಮನೆಯ ಗೋಡೆ ಮೇಲೆ ಹಸಿರು, ಸುಂದರ ಫೋಟೋಗಳನ್ನು ಹಾಕಿ.
*ನೀರಿಗೆ ಅರಿಶಿನವನ್ನು ಬೆರೆಸಿ ವೀಳ್ಯದೆಲೆ ಸಹಾಯದಿಂದ ಮನೆಗೆಲ್ಲ ಸಿಂಪಡಿಸಿ.
*ಪ್ರತಿ ದಿನ ದೇವರ ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಿ.
*ಮನೆಯ ಈಶಾನ್ಯ ದಿಕ್ಕನ್ನು ಸ್ವಚ್ಛಗೊಳಿಸಿ ಸುಂದರವಾಗಿಡಿ. ಇದು ಮನೆಯಲ್ಲಿ ಶುಭ ಕೆಲಸ ನಡೆಯಲು ಕಾರಣವಾಗುತ್ತದೆ.