ಹಲ್ಲು ನೋವು ಅಂತ ಕೇಳಿದ ಕೂಡಲೇ ನಮಗೆ ಅದು ಭಯ ಬೀಳಿಸುತ್ತದೆ.ಹಲ್ಲು ನೋವು ಬಂದಾಗ ಜನರು ಅವುಗಳನ್ನು ಪರಿಹರಿಸಿಕೊಳ್ಳಲು ಹಲವಾರು ಮಾರ್ಗಗಳನ್ನು ಹುಡುಕುತ್ತಾರೆ. ಇದರಿಂದ ಅವರ ನೋವು ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಾಗುತ್ತದೆ.
ಹಲ್ಲು ಹಾಗೂ ವಸಡುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸದಿದ್ದರೆ ನಾನಾ ಸಮಸ್ಯೆಗಳನ್ನು ಎದುರಿಸಲೇಬೇಕಾಗುತ್ತೆ. ಸಾಮಾನ್ಯವಾಗಿ ಕಾಡುವ ಹಲ್ಲು ನೋವು ಹಾಗೂ ವಸಡುಗಳ ರಕ್ತಸ್ರಾವದ ಕೆಲವು ಸಮಸ್ಯೆಗಳು ಕಾಣಿಸಿಕೊಂಡಾಗ ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಹಲವಾರು ಮದ್ದುಗಳಿಂದ ನಿಮ್ಮ ಹಲ್ಲು ನೋವಿಗೆ ಅಗತ್ಯವಾದ ಪರಿಹಾರವನ್ನು ಕಂಡುಕೊಳ್ಳಬಹುದು.
ಹಸಿಶುಂಠಿ
ಹಲ್ಲು ನೋವು ಬಂದಾಗ ಹಲ್ಲುಗಳ ಮಧ್ಯ ಹಸಿಶುಂಠಿಯ ತುಂಡನ್ನು ಇಟ್ಟುಕೊಂಡಿದ್ದರೆ ಹಲ್ಲು ನೋವು ಶಮನವಾಗುವುದು.
ಬೆಳ್ಳುಳ್ಳಿಯ ರಸ
ಬೆಳ್ಳುಳ್ಳಿಯನ್ನು ಜಜ್ಜಿ ರಸವನ್ನು ತೆಗೆದು, ಆ ರಸವನ್ನು ಹಲ್ಲಿನ ನೋವು ಇರುವ ಭಾಗಕ್ಕೆ ಹಚ್ಚಿಕೊಳ್ಳಿ. ಇದು ನಿಮ್ಮ ಹಲ್ಲು ನೋವನ್ನು ನಿವಾರಿಸಲು ಪರಿಣಾಮಕಾರಿಯಾಗಿ ನೆರವಾಗುತ್ತದೆ.ಹಾಗೆ ಬೆಳ್ಳುಳ್ಳಿ ಮತ್ತು ಸೈಂಧವ ಉಪ್ಪನ್ನು ಬೆರೆಸಿ ನೋವಿರುವ ಹಲ್ಲಿನ ಮೇಲೆ ಇಟ್ಟುಕೊಂಡರೆ ಹಲ್ಲು ನೋವು ಕಡಿಮೆಯಾಗುತ್ತದೆ.
*ಪಪ್ಪಾಯದ ಎಲೆ ಹಾಗೂ ತೊಗಟೆ ಕಷಾಯವನ್ನು ಉಪಯೋಗಿಸಿದರೆ ಹಲ್ಲು ನೋವು ಕಡಿಮೆಯಾಗುತ್ತದೆ.
ಲವಂಗದ ಎಣ್ಣೆ
ಸ್ವಲ್ಪ ಪ್ರಮಾಣದ ಲವಂಗದ ಎಣ್ಣೆಯನ್ನು ತೆಗೆದುಕೊಳ್ಳಿ. ಅದರಿಂದ ಮೃದುವಾಗಿ ಬ್ರಷ್ ಮಾಡಿ. ಇದನ್ನು ನೋವಿರುವ ಭಾಗಕ್ಕೆ ಬಳಸುವಾಗ ಸ್ವಲ್ಪ ಜಾಗರೂಕರಾಗಿರಿ. ಹೆಚ್ಚು ಒತ್ತಡವನ್ನು ನೀಡದೆ ಬ್ರಷ್ ಮಾಡಿ. ಇಲ್ಲವಾದಲ್ಲಿ ನಿಮ್ಮ ನೋವು ಮತ್ತಷ್ಟು ಹೆಚ್ಚಾಗಬಹುದು. ಲವಂಗದ ಎಣ್ಣೆಯನ್ನು ದವಡೆಗಳ ಮೇಲೆ ಹಾಕಿ ಮೃದುವಾಗಿ ಮಸಾಜ ಮಾಡಿ.
ಮೆಣಸು
ಮೆಣಸು ಮತ್ತು ಉಪ್ಪನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಂಡು ನೀರಿನ ಹನಿ ಹಾಕಿ ಪೇಸ್ಟ್ ಮಾಡಿ. ಈ ಮಿಶ್ರಣವನ್ನು ನೋವಿರುವ ಹಲ್ಲಿಗೆ ಹಚ್ಚಿ ಕೆಲವು ನಿಮಿಷಗಳ ಕಾಲ ಬಿಡಿ. ನಂತರ ತೊಳೆಯಿರಿ.ಹೀಗೆ ಆದಷ್ಟೂ ಪ್ರತೀ ದಿವಸ ಮಾಡಿ.ನಿಮ್ಮ ಹಲ್ಲು ನೋವು ಕಡಿಮೆಯಾಗುವುದಲ್ಲದೆ, ನಿಮ್ಮ ವಸದುಗ್ಲು ಗಟ್ಟಿಯಾಗುವವು..
ತೆಂಗಿನೆಣ್ಣೆ
ಒಂದು ಚಮಚ ತೆಂಗಿನೆಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಳ್ಳಿ. 30 ನಿಮಿಷಗಳ ಕಾಲ ಬಾಯಿಯಲ್ಲಿ ಇದನ್ನು ಹಾಕಿಕೊಂಡು ಆಗಾಗ ಮುಕ್ಕುಳಿಸುತ್ತ ಇರಿ. ನಂತರ ಇದನ್ನು ಉಗಿದು ಬಾಯಿಯನ್ನು ಚೆನ್ನಾಗಿ ತೊಳೆಯಿರಿ. ಇದರಿಂದ ನಿಮ್ಮ ಹಲ್ಲು ನೋವು ಕಡಿಮೆಯಾಗುತ್ತದೆ.
ಉಪ್ಪು
ಹಲ್ಲು ನೋವಿಗೆ ಉಪ್ಪು ತಕ್ಷಣದ ನೋವು ನಿವಾರಕವಾಗಿ ಕೆಲಸಕ್ಕೆ ಬರುವ ಅಂಶವಾಗಿದೆ. ಬೆಚ್ಚನೆಯ ನೀರಿಗೆ ಸ್ವಲ್ಪ ಉಪ್ಪುನ್ನು ಬೆರೆಸಿ ಅದರಿಂದ ಬಾಯಿಯನ್ನು ಮುಕ್ಕುಳಿಸಿ. ಇದನ್ನು ಕೆಲವು ಬಾರಿ ರಿಪೀಟ್ ಮಾಡಿದಾಗ ನಿಮ್ಮ ಹಲ್ಲು ನೋವು ಕಡಿಮೆಯಾಗುವುದು.