ಉಪಯುಕ್ತ ಮಾಹಿತಿ

ನಿಮ್ಮ ಮಕ್ಕಳಿಗೆ ಯಾವ ಯಾವ ತಿಂಗಳಲ್ಲಿ, ಎಷ್ಟು ವರ್ಷದವರೆಗೆ ಲಸಿಕೆ ಹಾಕಿಸಬೇಕು.?ಇಲ್ಲಿದೆ ಸಂಪೂರ್ಣ ಮಾಹಿತಿ..ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

By admin

April 07, 2018

ಕಾಲವೊಂದಿತ್ತು, ಆಗ ಯಾವುದೇ ಉತ್ತಮ ಆಸ್ಪತ್ರೆಗಳು ಇರಲಿಲ್ಲ.ಹುಟ್ಟುವ ಮಕ್ಕಳಿಗೆ ಆಗ ಯಾವುದೇ ಲಸಿಕೆಗಳನ್ನು ಹಾಕುತ್ತಿರಲಿಲ್ಲ.ಯಾಕಂದ್ರೆ ಆಗಿನ ಆಹಾರ ಪದ್ಧತಿ ಆಗಿತ್ತು.ಯಾವುದೇ ಲಸಿಕೆಗಳು ಆಗ ಅಗತ್ಯವಿರಲಿಲ್ಲ.

ಆದ್ರೆ ಈಗ ಆಗಿಲ್ಲ, ಹುಟ್ಟುತ್ತಲೇ ಮಕ್ಕಳಿಗೆ ಸಮಯಕ್ಕೆ ತಕ್ಕಂತೆ ಅಗತ್ಯವಾದ ಲಸಿಕೆಗಳನ್ನು ಹಾಕಿಸಬೇಕಾಗುತ್ತೆ.ಇಲ್ಲವಾದ್ರೆ ನಾನಾ ಖಾಯಿಲೆಗಳು ಬರುವುದು ಗ್ಯಾರಂಟಿ. ಹಾಗಾಗಿ ಮಕ್ಕಳಿಗೆ ಸಮಯಕ್ಕೆ ತಕ್ಕಂತೆ ಲಸಿಕೆ ಹಾಕಿಸುವುದು ಬಹು ಮುಖ್ಯ.

ಹಾಗಾದ್ರೆ ಯಾವ ಯಾವ ಲಸಿಕೆಗಳನ್ನು ಯಾವ ಸಮಯಕ್ಕೆ ಹಾಕಿಸಬೇಕೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ಮಗು ಹುಟ್ಟಿದ ತಕ್ಷಣ ಯಾವ ಲಸಿಕೆಗಳನ್ನು ಹಾಕಿಸಬೇಕು..?

ಮಗು ಹುಟ್ಟಿದ ದಿನದಂದೇ 3 ಲಸಿಕೆಗಳನ್ನು ಹಾಕಿಸಬೇಕಾಗುತ್ತದೆ… ಹೆಪಟೈಟಿಸ್ ಬಿ ಓ ಪಿ ವಿ – 0 ಬಿ ಸಿ ಜಿ

ಮಗುವಿಗೆ 6 ವಾರಗಳು ಪುರ್ತಿಯಾದಮೇಲೆ…

ಮಗುವಿಗೆ 6 ವಾರಗಳಾಗುತ್ತಿದಂತೆ ಒಟ್ಟು 3 ಲಸಿಕೆಗಳನ್ನು ಹಾಕಿಸಬೇಕಾಗುತ್ತದೆ… ಓ ಪಿ ವಿ – 1 ಐ ಪಿ ವಿ – 1 ಪೆಂಟಾವೇಲೆಂಟ್ – 1

 

 

ಮಗುವಿಗೆ 10 ವಾರಗಳು ಆದಮೇಲೆ…

ಮಗು 10 ವಾರವಿದ್ದಾಗ 2 ಲಸಿಕೆಗಳನ್ನು ಹಾಕಿಸಬೇಕಾಗುತ್ತದೆ… ಓ ಪಿ ವಿ -2 ಪೆಂಟಾವೇಲೆಂಟ್ – 2

ಮಗುವಿಗೆ 14 ವಾರಗಳಾದ ನಂತರ…

ಮಗು 14 ನೇ ವಾರಕ್ಕೆ ಕಾಲಿಡುತಿದ್ದಂತೇ 3 ಲಸಿಕೆ ಗಳನ್ನು ಹಾಕಿಸಬೇಕಾಗುತ್ತದೆ… ಓ ಪಿ ವಿ – 3 ಐ ಪಿ ವಿ – 2 ಪೆಂಟಾವೇಲೆಂಟ್ – 3

ಮಗುವಿಗೆ 9 ತಿಂಗಳು ತುಂಬಿದ ನಂತರ…

9 ತಿಂಗಳ ಮಗುವಿಗೆ 2 ಲಸಿಕೆಯನ್ನು ಹಾಕಿಸಬೇಕಾಗುತ್ತದೆ… ದಡಾರ-ರುಬೆಲ್ಲಾ- 1 ಜೆಇ-1*

16-24 ತಿಂಗಳ ಮಗುವಿಗೆ…

ಮಗು 16-24 ತಿಂಗಳು ಇರುವಾಗ ಒಟ್ಟು 4 ಲಸಿಕೆಯನ್ನು ಹಾಕಿಸಬೇಕಾಗುತ್ತದೆ… ಓ ಪಿ ವಿ ವರ್ಧಕ – 1 ಡಿ ಪಿ ಟಿ ವರ್ಧಕ -1 ದಡಾರ- ರುಬೆಲ್ಲಾ- 2 ಜೆಇ ವರ್ಧಕ*

ಮಗುವಿಗೆ 5-6 ವರ್ಷ ಆದ ನಂತರ…

ಮಗು 5-6 ವರ್ಷವಿದ್ದಾಗ ಮಗುವಿಗೆ ಒಂದು ಲಸಿಕೆಗಯನ್ನು ಹಾಕಿಸಬೇಕಾಗುತ್ತದೆ… ಡಿ ಪಿ ಟಿ ವರ್ಧಕ – 2

10 ವರ್ಷದ ಮಕ್ಕಳಿಗೆ

ಮಕ್ಕಳು 10 ವರ್ಷ ಪೂರ್ತಿಯಾದ ನಂತರ…

ಟಿ ಟಿ

16 ವರ್ಷದ ಮಕ್ಕಳಿಗೆ…

ಮಕ್ಕಳು 16 ವರ್ಷವಾಗುತ್ತಿದಂತೆ ಹಾಕಿಸಬೇಕಾದ ಲಸಿಕೆ… ಟಿ ಟಿ

*ನೆನಪಿಡಿ*

ಇವೆಲ್ಲಾ ಲಸಿಕೆಗಳು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸಿಗುತ್ತದೆ.. ಯಾವುದೇ ದುಡ್ಡನ್ನು ಕೊಡಬೇಕಿಲ್ಲ.. ಸರಿಯಾದ ಸಮಯದಲ್ಲಿ ತಪ್ಪದೆ ಈ ಎಲ್ಲಾ  ಲಸಿಕೆ ಹಾಕಿಸಿ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಿ…