ಜ್ಯೋತಿಷ್ಯ

ನಿಮ್ಮ ದಿನ ಭವಿಷ್ಯ ಶುಭವೋ ಅಶುಭವೋ ಹೇಗಿದೆ..?ನೋಡಿ ತಿಳಿಯಿರಿ…

By admin

April 06, 2018

ಶುಕ್ರವಾರ, 06/04/2018  ಇಂದಿನ ದಿನ ಭವಿಷ್ಯ, ಖ್ಯಾತ ಆಧ್ಯಾತ್ಮಿಕ ಚಿಂತಕರು, ದೈವಜ್ಞ ಜ್ಯೋತಿಷ್ಯರು ಪಂಡಿತ್ ಸುದರ್ಶನ್ ಭಟ್‘ರವರಿಂದ…ಇವರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672

ಸೂರ್ಯೋದಯ : 06:16 ಸೂರ್ಯಾಸ್ತ : 18:28 ಪಕ್ಷ : ಕೃಷ್ಣ ಪಕ್ಷ ತಿಥಿ : ಷಷ್ಠೀ ನಕ್ಷತ್ರ : ಜ್ಯೆಷ್ಟ್ಯ ಯೋಗ : ವರಿಯಾನ್ ಪ್ರಥಮ ಕರಣ : ಗರಜ ಸೂರ್ಯ ರಾಶಿ : ಮೀನ ಅಭಿಜಿತ್ ಮುಹುರ್ತ : 11:57 – 12:46 ದುರ್ಮುಹೂರ್ತ : 08:42 – 09:31 ದುರ್ಮುಹೂರ್ತ : 12:46 – 13:35 ರಾಹು ಕಾಲ: 10:50 – 12:22 ಗುಳಿಕ ಕಾಲ: 07:47 – 09:19 ಯಮಗಂಡ: 15:25– 16:56

ಮೇಷ:

ಪರಾಕ್ರಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಮಂಗಳ ಕಾರ್ಯದಲ್ಲಿ ಭಾಗವಹಿಸುವತ್ತಿರಿ. ನಿಮ್ಮ ಮಾತಿನ ವೈಖರಿಯಿಂದ ಎಲ್ಲರನ್ನು ಆಕರ್ಷಿಸುವಿರಿ. ಸಮಾಜದಲ್ಲಿ ಗೌರವ ಪ್ರತಿಷ್ಠೆಗಳು ಹೆಚ್ಚಾಗುವುದು.

ವೃಷಭ :-

ಹಣಕಾಸಿನ ವ್ಯವಸ್ಥೆ ಉತ್ತಮವಾಗಿರುವುದರಿಂದ ಅಧಿಕ ಬಂಡವಾಳದ ಉದ್ಯಮವನ್ನು ಆರಂಭಿಸಲು ತೊಡಗುವಿರಿ. ಇದಕ್ಕೆ ನಿಮ್ಮ ಸಂಗಾತಿಯ ಮತ್ತು ಸ್ನೇಹಿತರ ಬೆಂಬಲ ದೊರೆಯುವುದು.

ಮಿಥುನ:

ಶಿವನ ಕೃಪೆಯಿಂದ ಕೆಲಸ ಕಾರ್ಯಗಳು ಸುಲಲಿತವಾಗಿ ಸಾಗುವುದು. ಮನಸ್ಸಿನ ತುಮುಲಗಳನ್ನು ಭಗವಂತನ ಮುಂದೆ ಅಲ್ಲದೆ ಇತರರ ಮುಂದೆ ಹೇಳಿಕೊಳ್ಳದಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಕಟಕ :-

ದೂರ ಪ್ರಯಾಣವನ್ನು ಹಮ್ಮಿಕೊಳ್ಳಬೇಕಾಗುವುದು. ವಾಹನ ಸುಖ, ಆಸ್ತಿಯ ಖರೀದಿಯ ಬಗ್ಗೆ ಮಾತುಕತೆ ಉಂಟಾಗುವುದು. ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಹಿನ್ನಡೆಯುಂಟಾಗುವ ಸಾಧ್ಯತೆ ಇರುತ್ತದೆ.

 ಸಿಂಹ:

ಸಂಗಾತಿಯ ಸಕಾಲಿಕ ಎಚ್ಚರಿಕೆಯಿಂದ ನಿಮಗೆ ಒಳ್ಳೆಯಾದಗುವುದು. ಯಾವುದೇ ಕಾರಣಕ್ಕೂ ಸ್ವಯಂ ಮಾತ್ರೆಗಳನ್ನು ನುಂಗದೆ ವೈದ್ಯರ ಶಿಫಾರಸಿನಂತೆ ನಡೆದುಕೊಂಡಲ್ಲಿ ಹೆಚ್ಚಿನ ಹಾನಿ ಆಗುವುದಿಲ್ಲ. ದೂರದ ಪ್ರಯಾಣ ಅನಿವಾರ್ಯವಾಗಲಿವೆ.

ಕನ್ಯಾ :-

ಮಾತೇ ಮುತ್ತು ಮಾತೇ ಶತ್ರು ಎನ್ನುವಂತೆ ನೀವು ನಿಮ್ಮ ಮಾತಿನ ಮೂಲಕ ಎಲ್ಲರಲ್ಲು ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವಿರಿ. ಆ ಮೂಲಕ ಹಣಕಾಸಿನ ಹರಿವಿಗೆ ಕಾರಣವಾಗುವುದು. ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸಿ.

ತುಲಾ:

ಅನೇಕ ರೀತಿಯ ಒತ್ತಡಗಳ ನಡುವೆಯೂ ಯಶಸ್ಸಿನ ದಾರಿಯನ್ನು ಕಂಡುಕೊಳ್ಳಲು ಸುದಿನವಾಗಿದೆ. ಹಾಗೇಹೇ ನಿಮ್ಮನ್ನು ಟೀಕಿಸುವ ಜನರಿಂದ ಮಾನಸಿಕ ಯಾತನೆ ಉಂಟಾಗುವ ಸಂಭವವಿದ್ದು ಮೌನ ತಾಳಿ.

ವೃಶ್ಚಿಕ :-

ಹಿತಶತ್ರುಗಳು ನಿಮ್ಮ ನೆಮ್ಮದಿಯನ್ನು ಕೆಡಿಸುವ ಪ್ರಯತ್ನದಲ್ಲಿದ್ದಾರೆ ಮತ್ತು ನಿಮ್ಮ ತಪ್ಪುಗಳನ್ನು ಎತ್ತಿ ಆಡುವರು. ಇದರಿಂದ ಕೋಪಗೊಳ್ಳುವ ನೀವು ಮಾತಿನ ಭರದಲ್ಲಿ ಸತ್ಯವನ್ನು ನುಡಿದು ಪೇಚಿಗೆ ಸಿಲುಕೊಳ್ಳುವಿರಿ. ತಾಳ್ಮೆಯಿಂದ ಇರಿ.

ಧನಸ್ಸು:

ಆರೋಗ್ಯದ ವಿಚಾರದಲ್ಲಿ ಎಚ್ಚರದಿಂದ ಇರುವುದು ಬಹಳ ಕ್ಷೇಮ. ಪ್ರಯಾಣದಲ್ಲಿ ವಾಹನವನ್ನು ಚಲಿಸುವಾಗ ಎಡ ಮತ್ತು ಬಲಬದಿಯ ವಾಹನಗಳನ್ನು ಗಮನಿಸಿ. ಸ್ನೇಹಿತರ ಸಕಾಲಿಕ ಎಚ್ಚರಿಕೆಯಿಂದ ನಿಮಗೆ ಒಳಿತಾಗುವುದು.

ಮಕರ :-

ಕೆಲವು ಹಿತೈಷಿಗಳ ಪ್ರಯತ್ನದಿಂದ ನಿಮ್ಮ ಮನಸ್ಸಿಗೆ ಒಪ್ಪುವ ಹೊಸ ಕೆಲಸವು ನಿಮಗೆ ದೊರಕುವ ಸಾಧ್ಯತೆಗಳು. ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವ ನೀವು ಇತರರ ಅಸೂಯೆಗೆ ಒಳಗಾಗುವಿರಿ.

ಕುಂಭ:-

ಅನಾವಶ್ಯಕ ವಾದ, ವಿವಾದಗಳಲ್ಲಿ ಪಾಲ್ಗೊಳ್ಳದಿರುವುದು ಉತ್ತಮ. ಇಬ್ಬರ ಜಗಳ ತೀರಿಸಲು ಹೋಗಿ ನೀವೇ ಪೆಟ್ಟು ಮಾಡಿಕೊಳ್ಳುವ ಸಂಭವ ಹೆಚ್ಚು. ಆರೋಗ್ಯದ ತಪಾಸಣೆಗಳನ್ನು ಸಕಾಲದಲ್ಲಿ ಮಾಡಿಸಿ.

ಮೀನ :-

ಹಳೆಯ ಷೇರುಗಳ ಮಾರಾಟ ಅಥವಾ ಖರೀದಿಗೂ ಮುನ್ನ ಎಲ್ಲಾ ರೀತಿಯ ಸಾಧಕ ಬಾಧಕಗಳನ್ನು ಲೆಕ್ಕಾಚಾರ ಹಾಕಿ ನಿರ್ಧಾರ ಮಾಡಿ . ಪೂರ್ವ ಯೋಜನೆಯಿಲ್ಲದೆ ಹಣ ಹೂಡಿದಲ್ಲಿ ಅಧಿಕ ಹಾನಿಯನ್ನು ಅನುಭವಿಸುವಿರಿ.

ಪಂಡಿತ್ ಸುದರ್ಶನ್ ಭಟ್

ಆಧ್ಯಾತ್ಮಿಕ ಚಿಂತಕರು ದೈವಜ್ಞ ಜ್ಯೋತಿಷ್ಯರು  ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗೆ ಪರಿಹಾರ ಸೂಚಿಸುವರು : 9663542672