ನೀವು ಎಲ್ಲೇ ಇರಿ, ಹೇಗೆ ಇರಿ, ನೀವು ಕುಳಿತ ಜಾಗದಿಂದಲೇ ನಿಮ್ಮ ಮೊಬೈಲ್ನಿ’ನಲ್ಲಿ ಜಾತಿ ಮತ್ತು ಆಧಾಯ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಬಹುದು… ನಿಮ್ಮಲ್ಲಿ ಸ್ಮಾರ್ಟ್ ಮೊಬೈಲ್ ಮತ್ತು ಅಂತರ್ಜಾಲ(Internet) ಇದ್ದಾರೆ ಸಾಕು…
“ಹಳ್ಳಿ ಹುಡುಗರು”(Halli Hudugaru) ಹೇಳಿರುವ ಈ ಸರಳ ಕ್ರಮಗಳನ್ನು ಪಾಲಿಸಿ ನಿಮ್ಮ ಅರ್ಜಿಯನ್ನು ಸಲ್ಲಿಸಿ…ಹಾಗೂ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ತಿಳಿಸಿ ಮತ್ತು ಮತ್ತಷ್ಟು ಉಪಯುಕ್ತ ಮಾಹಿತಿಗಳಿಗೆ ನಮ್ಮ “ಹಳ್ಳಿ ಹುಡುಗರು” ಪೇಜ್’ನ್ನು ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ ಲೈಕ್ ಮಾಡಲು ತಿಳಿಸಿ…
- ನಿಮ್ಮ ಮೊಬೈಲ್’ನಲ್ಲಿ ಕೆಳಗಡೆ ಕೊಟ್ಟಿರುವ ವೆಬ್ಸೈಟ್ ಲಿಂಕ್’ನ್ನು ತೆರೆಯಿರಿ…
- ಚಿತ್ರದಲ್ಲಿರುವಂತೆ “ಆನ್ ಲೈನ್ ಅರ್ಜಿ” ಮೇಲೆ ಕ್ಲಿಕ್ ಮಾಡಿ…
- ಚಿತ್ರದಲ್ಲಿರುವಂತೆ ನಿಮ್ಮ ಮೊಬೈಲ್ ನಂಬರ್ ಎಂಟರ್ ಮಾಡಿ ಲಾಗಿನ್ ಮಾಡಿ…
- ಚಿತ್ರದಲ್ಲಿ ತೋರಿಸಿರುವ ಆಪ್ಷನ್ ನೋಡಿ…
- ಚಿತ್ರದಲ್ಲಿ ತೋರಿಸಿರುವಂತೆ ನಿಮ್ಮ ಆಯ್ಕೆ ಮಾಡಿ…
- ನಿಮ್ಮ ವಿವರಗಳನ್ನು ತುಂಬಿ…
- ನಿಮ್ಮ “address proof” ಪ್ರತಿಯನ್ನು “upload” ಮಾಡಿ…
- save button ಒತ್ತಿದ ನಂತರ ನಿಮಗೆ “application number” genarete ಆಗುತ್ತದೆ. ಈ ನಂಬರ್’ನ್ನು ಬರೆದಿಟ್ಟುಕೊಳ್ಳಿ.
- “Online Payment” ಬಟನ್ ಒತ್ತಿ ಆಪ್ಲಿಕೆಶನ್ ಫೀಸ್’ನ್ನುನಿಮ್ಮ ಡೆಬಿಟ್ ಕಾರ್ಡ್ ಮುಖಾಂತರ ಪೇಮೆಂಟ್ ಮಾಡಿ…
- ಚಿತ್ರದಲ್ಲಿ ತೋರಿಸಿರುವಂತೆ ನೀವು ಆನ್ ಲೈನ್ ಪೇಮೆಂಟ್ ಮಾಡಬಹುದು…
- ನಿಮ್ಮ ಮೊಬೈಲ್’ಗೆ OTP ನಂಬರ್’ನ್ನು ತುಂಬಿ…
ವೆಬ್ಸೈಟ್ ಲಿಂಕ್:- http://www.nadakacheri.karnataka.gov.in/
ಸೂಚನೆ:- ನೀವು ಪೇಮೆಂಟ್ ಮಾಡಿದ ನಂತರವೇ ನಿಮ್ಮ ಅರ್ಜಿ ACCEPT ಆಗುತ್ತದೆ. ನಂತರ ನಿಮಗೆ ಆಪ್ಲಿಕೆಶನ್ ನಂಬರ್ ಬರುತ್ತದೆ. ನಂತರದ ಮಾಹಿತಿಗೆ ನೀವು ನಿಮ್ಮ ನಾಡಕಚೇರಿ ಆಪಿಸ್’ಗೆ ಹೋಗಿ, ನಿಮ್ಮ ಜಾತಿ ಅಥವಾ ಆದಾಯ ಪ್ರಮಾಣ ಪತ್ರವನ್ನು ಪಡೆಯಿರಿ…