ಈರುಳ್ಳಿ ಆರೋಗ್ಯಕ್ಕೆ ಮಾತ್ರ ವಲ್ಲದೆ ಕೂದಲಿಗೂ ತುಂಬಾ ಉಪಯೋಗಕಾರಿ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಕೂದಲಿನ ಆರೈಕೆಯಲ್ಲಿ ಈರುಳ್ಳಿ ಬಳಸು ಕೂದಲು ಸೊಂಪಾಗಿ ಬೆಳೆಯಬೇಕೇ? ಈರುಳ್ಳಿ ರಸ ಹಚ್ಚಿವುದು ಹೇಗೆ ಎಂದು ಹೆಚ್ಚಿನವರಿಗೆ ಅಚ್ಚರಿಯಾಗಬಹುದು. ತುಂಬಾ ದುಬಾರಿಯಾಗಿರುವ ಕೆಲವು ಚಿಕಿತ್ಸೆ ಮಾಡಿಕೊಳ್ಳುವ ಬದಲು ಮನೆಯಲ್ಲಿಯೇ ಕೂದಲಿಗೆ ಚಿಕಿತ್ಸೆ ನೀಡಿದರೆ ತುಂಬಾ ಒಳ್ಳೆಯದು.ಕೂದಲು ಉದುರುವ ಸಮಸ್ಯೆಗೆ ಈರುಳ್ಳಿ ಬಳಸಿಕೊಳ್ಳುವುದು ಹೇಗೆ ಎಂದು ನೀವು ತಿಳಿಯಿರಿ.
ಈರುಳ್ಳಿ ರಸ ಮತ್ತು ಬಿಸಿ ನೀರು:
ಕೇಶದ ಸಮಸ್ಯೆಗೆ ಈರುಳ್ಳಿ ರಸವನ್ನು ಬಿಸಿ ನೀರಿನೊಂದಿಗೂ ಸಹ ಬಳಸಬಹುದು. ಅಗತ್ಯವಾದಷ್ಟು ಬಿಸಿ ನೀರಿನೊಂದಿಗೆ ಈರುಳ್ಳಿ ರಸವನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ಶ್ಯಾಂಪೂ ಬಳಸಿದ ಮೇಲೆ ಸ್ನಾನದ ಕೊನೆಯ ಹಂತದಲ್ಲಿ ಬಳಸಿ. ಒಂದೇ ತಿಂಗಳಲ್ಲಿ ಅದರ ವ್ಯತ್ಯಾಸ ನಿಮಗೇ ತಿಳಿಯುತ್ತದೆ.
ಈರುಳ್ಳಿ ಮತ್ತು ಜೇನುತುಪ್ಪ:
ಈರುಳ್ಳಿ ರಸವನ್ನು ಸುಮಾರು 15 ನಿಮಿಷಗಳ ಕಾಲ ತಲೆಯಲ್ಲಿ ಹಾಗೆ ಬಿಡುವುದು ಅತೀ ಅಗತ್ಯ. ಇದರ ಬಳಿಕ ಶಾಂಪೂ ಹಾಕಿಕೊಂಡು ತೊಳೆಯಿರಿ. ಇದು ಸ್ವಲ್ಪ ಮಟ್ಟಿಗೆ ನಿಮಗೆ ತ್ರಾಸ ನೀಡುತ್ತಿದ್ದರೆ ಬೇರೆ ವಿಧಾನ ಬಳಸಿಕೊಳ್ಳಬಹುದು. ಸ್ವಲ್ಪ ಈರುಳ್ಳಿ ರಸಕ್ಕೆ ಜೇನುತುಪ್ಪ ಹಾಕಿಕೊಂಡು ಸರಿಯಾದ ಜೆಲ್ ಮಾಡಿಕೊಳ್ಳಿ. ಇದರಿಂದ ವಾಸನೆ ಕೂಡ ಕಡಿಮೆಯಾಗುವುದು ಮಾತ್ರವಲ್ಲದೆ ಇದು ಕೂದಲಿಗೆ ತುಂಬಾ ಒಳ್ಳೆಯದು.
ಈರುಳ್ಳಿ ರಸ ತಯಾರಿಸುವುದು ತುಂಬಾ ಸುಲಭ:
ಈರುಳ್ಳಿ ರಸ ಪಡೆಯುವುದು ತುಂಬಾ ಕಷ್ಟಕರ ಕೆಲಸವೆಂದು ನಿಮಗೆ ಅನಿಸುತ್ತಿರಬಹುದು. ಆದರೆ ಈರುಳ್ಳಿ ರಸ ತೆಗೆಯುವುದು ತುಂಬಾ ಸುಲಭ. ಈರುಳ್ಳಿಯನ್ನು ಮಿಕ್ಸಿಗೆ ಹಾಕಿ ಸರಿಯಾಗಿ ರುಬ್ಬಿಕೊಳ್ಳಬೇಕು. ಈರುಳ್ಳಿಯನ್ನು ಸರಿಯಾಗಿ ಕತ್ತರಿಸಿಕೊಂಡರೆ ಅದರಿಂದ ಹೆಚ್ಚಿನ ರಸ ಸಿಗುವುದು. ತಲೆಬುರುಡೆಯ ರಂಧ್ರಗಳನ್ನು ತೆರೆಯಲು ಬಿಸಿಎಣ್ಣೆ ಬಳಸುವುದು ಸಾಮಾನ್ಯ. ಆದರೆ ಈರುಳ್ಳಿ ರಸವನ್ನು ಬಿಸಿ ಮಾಡುವ ಅಗತ್ಯವಿಲ್ಲ. ಈರುಳ್ಳಿ ರಸ ಹಚ್ಚಿಕೊಳ್ಳುವ ಅರ್ಧ ಗಂಟೆಗೆ ಮೊದಲು ಬಿಸಿ ಟವೆಲ್‌ನ್ನು ತಲೆಗೆ ಕಟ್ಟಿಕೊಂಡರೆ ರಸವು ಚೆನ್ನಾಗಿ ಹೀರಲ್ಪಡುವುದು.
ಈರುಳ್ಳಿ ಮತ್ತು ಬಿಯರ್ ಹೇರ್ ಪ್ಯಾಕ್:
ಕೂದಲು ಉದುರುವ ಸಮಸ್ಯೆಯೊಂದಿಗೆ ಕೂದಲಿನ ಕಾಂತಿ ಹೆಚ್ಚಿಸುವಂತಹ ಹೇರ್ ಪ್ಯಾಕ್ ಇದ್ದರೆ ತುಂಬಾ ಒಳ್ಳೆಯದು. ದಪ್ಪ ಕೂದಲು ರೇಷ್ಮೆಯಂತೆ ಹೊಳೆಯುತ್ತಿದ್ದರೆ ಅದು ನೋಡಲು ಚಂದ. ಇಂತಹ ಕೂದಲು ಪಡೆಯಲು ನೀವು ಹೇರ್ ಪ್ಯಾಕ್‌ನ್ನು ಯಾವಾಗಲಾದರೂ ಬಳಸಿಕೊಳ್ಳಬೇಕು. ಈರುಳ್ಳಿ ರಸ ತೆಗೆದ ಬಳಿಕ ಅದರ ತಿರುಳು ಹಾಗೆ ಉಳಿದಿರುವುದು. ಇದನ್ನ ತೆಂಗಿನ ಎಣ್ಣೆ ಜತೆ ಸೇರಿಸಿ ಪೇಸ್ಟ್ ಮಾಡಿ. ಈಗ ಇದಕ್ಕೆ ಬಿಯರ್ ಹಾಕಿ. ಬಿಯರ್ ನೊಂದಿಗೆ ಈರುಳ್ಳಿಯು ಕೂದಲಿಗೆ ನೈಸರ್ಗಿಕ ಕಾಂತಿ ನೀಡುವುದು. ತೆಂಗಿನೆಣ್ಣೆಯು ಕೂದಲಿನ ಬುಡಕ್ಕೆ ಪೋಷಣೆ ನೀಡುವುದು.
ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆ:
ನಿಮಗೆ ತಿಳಿದಿರುವ ಹಾಗೆ ತೆಂಗಿನ ಎಣ್ಣೆಯು ಸಾಮಾನ್ಯವಾಗಿ ಕೇಶಕ್ಕೆ ಹಚ್ಚುವ ಎಣ್ಣೆಯಾಗಿದ್ದು, ಕೂದಲುದುರುವ ಸಮಸ್ಯೆಗೆ ನೆರವಾಗುತ್ತದೆ. ಈ ಎಣ್ಣೆಯನ್ನು ಈರುಳ್ಳಿ ರಸದ ಜೊತೆಗೆ ಬಳಸಿದರೆ ಈ ಸಮಸ್ಯೆಯನ್ನು ಇನ್ನೂ ಪರಿಣಾಮಕಾರಿಯಾಗಿ ನಿವಾರಣೆ ಮಾಡಬಹುದಾಗಿದ್ದು, ಕೂದಲ ಬೆಳವಣಿಗೆಯನ್ನು ಉತ್ತೇಜಿಸಲಿದೆ. 2 ಚಮಚ ತೆಂಗಿನ ಎಣ್ಣೆಯನ್ನು 1 ಚಮಚ ಈರುಳ್ಳಿಯ ರಸದೊಂದಿಗೆ ಬೆರೆಸಿ ಕೇಶಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ಸ್ವಚ್ಛಗೊಳಿಸಿ. ವ್ಯತ್ಯಾಸ ನಿಮಗೇ ತಿಳಿಯುತ್ತದೆ.