ಸುಂದರವಾದ ಹಾಗೂ ಸದೃಢವಾದ ಕೂದಲನ್ನು ಪ್ರತಿಯೊಬ್ಬ ಹುಡುಗಿಯೂ ಬಯಸುತ್ತಾಳೆ. ಆದರೆ ಇತ್ತೀಚಿಗಿನ ದಿನಗಳಲ್ಲಿ ಕೂದಲು ಉದುರುವುದು ಪ್ರತಿಯೊಬ್ಬ ಮಹಿಳೆಯರ ಸಮಸ್ಯೆಯಾಗಿ ಬದಲಾಗಿದೆ. ನೀವು ಕೂದಲಿಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ತಿಳಿದುಕೊಂಡರೆ ಈ ಸಮಸ್ಯೆಯಿಂದ ಸುಲಭವಾಗಿ ಹೊರಬರಬಹುದು.
ನೀವು ಕೆಲವು ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಉತ್ತಮವಾದ ಆಹಾರ ಕ್ರಮದ ಮೇಲೆ ನಿಮ್ಮ ಧ್ಯಾನವನ್ನು ಕೇಂದ್ರೀಕರಿಸಿ, ಅದರ ಜೊತೆಗೆ ಸರಿಯಾದ ಜೀವನ ಶೈಲಿ ನಿಮ್ಮದಾಗಿಸಿದರೆ ಸುಂದರ ಹಾಗೂ ಸದೃಢವಾದ ಕೂದಲು ನಿಮ್ಮದಾಗುತ್ತದೆ.
ತುಂಬಾ ಎಣ್ಣೆ ಹಾಕುವುದು :- ಕೂದಲಿಗೆ ಎಣ್ಣೆ ಹಚ್ಚುವುದು ಉತ್ತಮ ಅಭ್ಯಾಸ. ಆದರೆ ಹೆಚ್ಚು ಎಣ್ಣೆ ಹಚ್ಚಿದರೆ ರಂಧ್ರಗಳು ಮುಚ್ಚಿಹೋಗುತ್ತದೆ. ತಲೆಯ ತ್ವಚೆಯಿಂದ ಸಹ ಎಣ್ಣೆ ಹೊರಬರುತ್ತದೆ.
ಆದುದರಿಂದ ತಲೆಯ ಮೇಲೆ ಎಣ್ಣೆ ಹಚ್ಚುವುದಕ್ಕಿಂತ ಕೂದಲಿಗೆ ಎಣ್ಣೆ ಹಚ್ಚಿದರೆ ಉತ್ತಮ. ಕೂದಲನ್ನು ಕೆಟ್ಟದಾಗಿ ಇಟ್ಟುಕೊಳ್ಳುವುದು :- ತ್ವಚೆಯ ವಿಶೇಷಜ್ಞರ ಪ್ರಕಾರ ಕೂದಲಿನಲ್ಲಿ ಎಣ್ಣೆಯ ಅಂಶ ಕಂಡು ಬಂದರೆ ಅದನ್ನು ಅವಶ್ಯಕವಾಗಿ ತೊಳೆಯಬೇಕು. ತಲೆಯ ತ್ವಚೆಯನ್ನು ಚೆನ್ನಾಗಿ ಇಟ್ಟುಕೊಂಡರೆ ಕೂದಲು ಚೆನ್ನಾಗಿ ಬೆಳೆಯುತ್ತದೆ.
ಕೂದಲನ್ನು ವಾರದಲ್ಲಿ ಎರಡು ಬಾರಿ ಶ್ಯಾಂಪೂ ಹಾಕಿ ತೊಳೆಯಿರಿ.
ಕೆಮಿಕಲ್‌ಗಳ ಪ್ರಯೋಗ :- ಅಧಿಕ ಪ್ರಮಾಣದಲ್ಲಿ ಕೆಮಿಕಲ್‌ಗಳ ಉಪಯೋಗ ಮಾಡುವುದರಿಂದ ಕೂದಲಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೇರ್ ಸ್ಟೈಲ್ ಮಾಡುವ ಸಲುವಾಗಿ ಕೆಮಿಕಲ್‌ಯುಕ್ತ ಸ್ಪ್ರೇ, ಶ್ಯಾಂಪೂ ಮುಂತಾದವುಗಳ ಬಳಕೆ ಮಾಡುವುದು ಒಳ್ಳೆಯದಲ್ಲ.
ಇದರಿಂದ ಕೂದಲು ತುಂಡಾಗುತ್ತದೆ ಹಾಗೂ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಹೇರ್ ಡ್ರೈಯರ್ ಬಳಕೆ ಮಾಡುವುದು :-
ಯಾವಾಗಲಾದರೂ ಹೇರ್ ಡ್ರೈಯರ್ ಉಪಯೋಗ ಮಾಡುವುದು ಉತ್ತಮ. ಆದರೆ ಪ್ರತಿ ದಿನ ಹೇರ್ ಡ್ರೈಯರ್ ಉಪಯೋಗ ಮಾಡುತ್ತಾ ಬಂದರೆ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ನಿಮ್ಮ ಕೂದಲನ್ನು ಒಣಗಿಸಲು ಹೇರ್ ಡ್ರೈಯರ್ ಉಪಯೋಗ ಮಾಡಲೇಬೇಡಿ.
ಕಲರಿಂಗ್ ಮತ್ತು ಬ್ಲೀಚಿಂಗ್ :- ಕೂದಲಿಗೆ ಕಲರಿಂಗ್ ಅಥವಾ ಬ್ಲೀಚಿಂಗ್ ಯಾವತ್ತೂ ಮಾಡಲೇಬೇಡಿ. ಇದರಲ್ಲಿರುವ ರಾಸಾಯನಿಕ ವಸ್ತುಗಳು ಕೂದಲಿನ ಮೇಲೆ ಪರಿಣಾಮ ಬೀರುತ್ತದೆ, ಅದು ಕೂದಲಿನ ಸದೃಢತೆಯನ್ನು ಕಡಿಮೆ ಮಾಡುತ್ತದೆ.
ಕೂದಲಿಗೆ ಕಲರಿಂಗ್ ಮಾಡಬೇಕೆಂದಿದ್ದರೆ ಮದರಂಗಿ ಉಪಯೋಗಿಸಿ.