ಆರೋಗ್ಯ

ನಿಮ್ಮ ಒಂದು ಯೂನಿಟ್ ರಕ್ತವು ಎಷ್ಟು ಜನರ ಪ್ರಾಣ ಉಳಿಸುತ್ತೆ ಗೊತ್ತಾ!ರಕ್ತದಾನ ಮಾಡಿದ್ರೆ ಏನೆಲ್ಲ್ಲಾ ಪ್ರಯೋಜನ ಇದೆ ಗೊತ್ತಾ?

By admin

July 19, 2017

ಭಾರತದಲ್ಲಿ ಬಹುಮಟ್ಟಿನ ಜನರು ರಕ್ತದಾನ ಮಾಡಲು ಹೆದರುತ್ತಾರೆ. ಈ ಕುರಿತು ಜಾಗೃತಿ ಮೂಡಿಸಲು ಸರ್ಕಾರ ಕಾಲದಿಂದ ಕಾಲಕ್ಕೆ ಅನೇಕ ಅಭಿಯಾನಗಳನ್ನು ನಡೆಸಿದೆ. ಜನ ಸಾಮಾನ್ಯರಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸುವುದು ಮತ್ತು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವವರಿಗೆ ಮನಸ್ಥೈರ್ಯ ಮೂಡಿಸುವುದು, ಪ್ರೇರೆಪಿಸುವುದು ಅಗತ್ಯವಾಗಿ ಆಗಬೇಕಿದೆ.  ಮನುಷ್ಯನ ಜೀವಕ್ಕಿರುವಷ್ಟೇ ಮಹತ್ವ ರಕ್ತದಾನಕ್ಕೂ ಇದೆ.

ತುರ್ತು ಸಂದರ್ಭಗಳಲ್ಲಿ ಜೀವನ್ಮರಣದಲ್ಲಿ ಹೋರಾಟ ನಡೆಸುವ ಮನುಷ್ಯನಿಗೆ ಅಗತ್ಯ ಮಾದರಿಯ ರಕ್ತ ಸೂಕ್ತ ಸಮಯದಲ್ಲಿ ದೊರೆತರೆ ಪ್ರಾಣ ಉಳಿಸಲು ನೆರವಾಗುತ್ತದೆ ಸರ್ಕಾರವೂ ಶೇ.100ರಷ್ಟು ಸುರಕ್ಷಿತ ರಕ್ತವನ್ನು ಅವಶ್ಯಕತೆ ಇರುವವರಿಗೆ ಒದಗಿಸುತ್ತದೆ. ಆದರೆ ಇಲ್ಲಿವರೆಗೆ ಜೀವವುಳಿಸುವ ರಕ್ತದಾನಕ್ಕೆ ಜನಸಮೂಹ ಮುಕ್ತವಾಗಿ ಬಂದಿಲ್ಲ.

ಅದೇ ರೀತಿ 18 ರಿಂದ 60 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ, ಕನಿಷ್ಟ 45 ಕೆ.ಜಿ ದೇಹದ ತೂಕ ವಿರುವ ಮತ್ತು ಹಿಮೊಗ್ಲೋಬಿನ್‍ನ ಪ್ರಮಾಣ ಕನಿಷ್ಟ ಶೇ.12.5ರಷ್ಟು ಇರುವ ವ್ಯಕ್ತಿ ಕಡೆಯ ಪಕ್ಷ ವರ್ಷಕ್ಕೆ 2 ಬಾರಿಯಾದರೂ ರಕ್ತದಾನ ಮಾಡುವ ಅಭಿಲಾಷೆಯನ್ನು ಹೊಂದಿದಲ್ಲಿ ವಿಶ್ವದಲ್ಲಿ ರಕ್ತದ ಅವಶ್ಯಕತೆ ಇರುವ ಎಲ್ಲರಿಗೂ ಶೇ.100ರಷ್ಟು ರಕ್ತ ಒದಗಿಸುವಲ್ಲಿ ಯಶಸ್ವಿಯಾಗಬಹುದು.

ಸರ್ಕಾರಿ ರಕ್ತ ನಿಧಿ ಕೇಂದ್ರಗಳಲ್ಲಿ ರಕ್ತದಾನಿಯಿಂದ ಪಡೆದುಕೊಂಡ ರಕ್ತವನ್ನು ಅಗತ್ಯವಿರುವವರಿಗೆ ನೀಡುವ ಮುನ್ನ ಗುಣಮಟ್ಟವನ್ನು ಪರೀಕ್ಷಿಸುವ ದೃಷ್ಟಿಯಿಂದ ನ್ಯಾಟ್ ಪರೀಕ್ಷೆಯನ್ನು ಮಾಡಲಾಗುತ್ತದೆ. ಈ ಪರೀಕ್ಷೆಯ ಸಹಾಯದಿಂದ ಕೇವಲ 6 ದಿನಗಳ ಒಳಗೆ ಹೆಚ್‍ಐವಿ ಹಾಗೂ ಇನ್ನಿತರ ಸೋಂಕುಗಳ ಇರುವಿಕೆಯನ್ನು ಪತ್ತೆಹಚ್ಚಿ ಸೋಂಕಿತ ರಕ್ತವನ್ನು ನಾಶಪಡಿಸಿ ಸೋಂಕುರಹಿತ ರಕ್ತವನ್ನು ಅಗತ್ಯವಿರುವವರಿಗೆ ನೀಡಲಾಗುತ್ತಿದೆ.

ಒಂದು ಯುನಿಟ್ ರಕ್ತವು 3 ಜೀವಗಳನ್ನು ಉಳಿಸುವಲ್ಲಿ ಉಪಯೋಗವಾಗುವುದು ಎಂಬುದನ್ನು ಮನವರಿಕೆ ಮಾಡಿಕೊಡುವುದು ಹಾಗೂ ಪ್ರತಿಯೊಬ್ಬ ಯುವಕ-ಯುವತಿಯರು ತಮ್ಮ ಹುಟ್ಟುಹಬ್ಬದಂದು ಪ್ರತೀ ವರ್ಷ ಒಂದು ಯುನಿಟ್ ರಕ್ತವನ್ನು ದಾನ ಮಾಡುವುದರೊಂದಿಗೆ  ಹುಟ್ಟುಹಬ್ಬ ಆಚರಿಸಿಕೊಳ್ಳುವ ನಿರ್ಣಯ ಕೈಗೊಳ್ಳಬೇಕಿದೆ. ಇಲ್ಲಿ ಓದಿ:-ಖಾಲಿ ಹೊಟ್ಟೆಯಲ್ಲಿ ಟೀ ಕುಡಿದ್ರೆ ಏನಾಗುತ್ತೆ ಗೊತ್ತಾ ???

ರಕ್ತದಾನದಿಂದ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳು:-

 

 

ರಕ್ತದಾನದಿಂದ ನಿಮಗೆ ಸಿಗುವ ಪ್ರಯೋಜನಗಳು:-

ರಕ್ತದಾನ ಮಾಡಲು ಭಯ ಪಡಬೇಡಿ. ನಿಮಗೆ ರಕ್ತದಾನ ಮಾಡಿದ್ರೆ ಏನಾಗುತ್ತದೆಂಬ ಭಯವೆನಾದರು ಇದ್ದರೆ, ನಿಮ್ಮ ಹತ್ತಿರದ  ಆಸ್ಪತ್ರೆ ಡಾಕ್ಟರನ್ನು ಸಂಪರ್ಕಿಸಿ ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳಿ.

ನೆನಪಿಡಿ:-  ದಾನಗಳಲ್ಲೇ ಮಹದಾನ ರಕ್ತದಾನ. ನಿಮ್ಮ ಒಂದು ಯುನಿಟ್ ರಕ್ತವು 3 ಜೀವಗಳನ್ನು ಉಳಿಸಬಲ್ಲದು.

ಹಾಗಾದ್ರೆ ನೀವು ರಕ್ತದಾನ ಮಾಡ್ತೀರಾ ಆಲ್ವಾ….