ಉಪಯುಕ್ತ ಮಾಹಿತಿ

ನಿಮ್ಮ ಉಡುದಾರದ ಬಗ್ಗೆ ನಿಮಗೇ ಗೊತ್ತೇ ಇಲ್ದೇ ಇರೋ ಮಾಹಿತಿ.!ತಿಳಿಯಲು ಮುಂದೆ ಓದಿ ಯಾರ್ ಕಟ್ಟಿಲ್ವೋ, ಅವ್ರಿಗೆ ಶೇರ್ ಮಾಡ್ರಪ್ಪೋ…

By admin

March 26, 2018

ಹಿಂದೂ ಸಂಪ್ರದಾಯದಲ್ಲಿ ಹಲವಾರು ಆಚರಣೆಗಳಿವೆ. ಹಲವು ಸಂಪ್ರದಾಯಗಳು ಇವೆ. ಇವುಗಳೆಲ್ಲವೂ ಹಲವಾರು ಕಾಲದಿಂದಲೂ ಬೆಳೆದುಕೊಂಡು ಬಂದಿವೆ. ಹಿಂದೂ ಧರ್ಮದವರು ಮಾಡುವ ಪ್ರತಿಯೊಂದು ಆಚರಣೆಗಳಿಗೂ ಸಹ ಅದರದ್ದೇ ಆದ ಒಂದು ಹಿನ್ನೆಲೆ ಇದೆ, ಹಾಗೆಯೆ ಇವುಗಳಲ್ಲಿ ಒಂದಾದ ಗಂಡಸರು ಕಟ್ಟುವ ಉಡುದಾರವು ಸಹ ಒಂದಾಗಿದೆ.

ಈ ಉಡುದಾರಕಟ್ಟುವುದರ ಹಿಂದೆ ಹಲವು ಕಾರಣಗಳಿವೆ ಬನ್ನಿ ಆ ಕಾರಣಗಳೇನು ಎಂದು ತಿಳಿಯೋಣ…

ಉಡದಾರ ಧರಿಸುವುದು ಹಿಂದೂ ಸಂಪ್ರದಾಯದಲ್ಲಿ ಒಂದು ಭಾಗ. ಯಾಕೆಂದರೆ ಹಿಂದೂಗಳಲ್ಲಿ ಪ್ರತಿ ಪುರುಷರನೂ ಇದನ್ನು ಧರಿಸಬೇಕು. ಚಿಕ್ಕಮಕ್ಕಳಿಗೆ ಉಡದಾರ ಕಟ್ಟಿದರೆ ಅವರ ಬೆಳವಣಿಗೆ ಸಮಯದಲ್ಲಿ ಮೂಳೆಗಳು, ಸ್ನಾಯುಗಳು ಸರಿಯಾದ ರೀತಿಯಲ್ಲಿ ಬೆಳವಣಿಗೆ ಹೊಂದುತ್ತವಂತೆ. ಮುಖ್ಯವಾಗಿ ಗಂಡು ಮಕ್ಕಳಲ್ಲಿ ಬೆಳವಣಿಗೆ ಸಮಯದಲ್ಲಿ ಪುರುಷಾಂಗ ಯಾವುದೇ ಅಸಮತೋಲನಕ್ಕೆ ಗುರಿಯಾಗದೆ ಸರಿಯಾಗಿ ಬೆಳವಣಿಗೆ ಹೊಂದಲು ಇದು ಸಹಕಾರಿಯಾಗುತ್ತದಂತೆ. ಅದಕ್ಕಾಗಿ ಉಡದಾರ ಕಟ್ಟುತ್ತಾರೆ.

ಉಡಿದಾರ ಕಟ್ಟಿಕೊಂಡರೆ ರಕ್ತ ಸಂಚಲನೆ ಸಹ ಉತ್ತಮಗೊಳ್ಳುತ್ತದೆ. ಪುರುಷರಲ್ಲಿ ಹರ್ನಿಯಾ ಬರದಂತೆ ಉಡಿದಾರ ಕಾಪಾಡುತ್ತದೆ. ಇದನ್ನು ಕೆಲವು ವಿಜ್ಞಾನಿಗಳೂ ನಿರೂಪಿಸಿದ್ದಾರೆ. ನಮ್ಮಲ್ಲಿ ಚಿಕ್ಕಮಕ್ಕಗಳಿಗೆ ಹೆಚ್ಚಾಗಿ ಬೆಳ್ಳಿಯಿಂದ ಮಾಡಿದ ಉಡಿದಾರ ಕಟ್ಟುವುದು ಅನಾದಿಕಾಲದಿಂದ ಬರುತ್ತಿರುವ ಸಂಪ್ರದಾಯ. ಯಾವುದೇ ರೀತಿಯ ಉಡಿದಾರ ಕಟ್ಟಿದರೂ ಉಪಯೋಗ ಇರುತ್ತದೆ..