ಜ್ಯೋತಿಷ್ಯ

ನಿಮ್ಮ ಉಗುರಿನ ಮೇಲೆ ಅರ್ಧ ಚಂದ್ರಾಕೃತಿ ಇದೆಯೇ?ಇದು ನಿಮ್ಮ ಜೀವನದಲ್ಲಿ ಏನನ್ನು ಸೂಚಿಸುತ್ತೆ ಗೊತ್ತಾ?

By admin

February 09, 2019

ಮನುಷ್ಯನ ದೇಹದ ರಚನೆ ಆತನ ಭವಿಷ್ಯವನ್ನು ಹೇಳುತ್ತದೆ. ನಮ್ಮ ಕೈ, ಕಾಲು ಸೇರಿದಂತೆ ದೇಹದ ಪ್ರತಿಯೊಂದು ಭಾಗವೂ ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಮ್ಮ ಕೈ, ಕಾಲು, ಮಚ್ಚೆಯನ್ನೇ ನೋಡಿ ಪಂಡಿತರು ನಮ್ಮ ಭವಿಷ್ಯ ಹೇಳ್ತಾರೆ.

ಸಾಮಾನ್ಯವಾಗಿ ಮನುಷ್ಯನ ಕೈ, ಕಾಲಿನ ಸೌಂದರ್ಯವನ್ನು ಉಗುರು ಹೆಚ್ಚಿಸುತ್ತದೆ. ಇದೇ ಕಾರಣಕ್ಕೆ ಮಹಿಳೆಯರು ಉಗುರಿನ ಸೌಂದರ್ಯಕ್ಕೆ ಹೆಚ್ಚಿನ ಗಮನ ನೀಡ್ತಾರೆ.

ಉಗುರಿಗೆ ಚೆಂದದ ಆಕಾರ ನೀಡಿ, ಬಣ್ಣ ಹಚ್ಚಿಕೊಳ್ತಾರೆ. ಆದ್ರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಗುರಿನ ಬಗ್ಗೆ ಬೇರೆಯದೇ ನಂಬಿಕೆಯಿದೆ. ನಿಮ್ಮ ಉಗುರಿನ ಬುಡಕ್ಕೆ ಅರ್ಧ ಚಂದ್ರನ ಆಕೃತಿಯಿದ್ದರೆ ಶಾಸ್ತ್ರದ ಪ್ರಕಾರ ನೀವು ಬುದ್ದಿವಂತರಂತೆ. ಬಹಳ ಪ್ರಬಲರು ಎಂದು ಶಾಸ್ತ್ರ ಹೇಳುತ್ತದೆ.

ಉಗುರಿನ ಮೇಲೆ ಅರ್ಧ ಚಂದ್ರನ ಆಕಾರವಿದ್ದರೆ ಜೀವನದಲ್ಲಿ ಎಂದೂ ಆರ್ಥಿಕ ಸಂಕಟ ಎದುರಾಗುವುದಿಲ್ಲವಂತೆ. ಹಣದ ಕೊರತೆ ಎಂದೂ ಕಾಡುವುದಿಲ್ಲವಂತೆ. ಜೀವನದಲ್ಲಿ ಸದಾ ನಗು, ಸಮೃದ್ಧಿ ನೆಲೆಸಿರುತ್ತದೆಯಂತೆ.