ಸುದ್ದಿ

ನಿಮ್ಮ ಅಂಗೈನಲ್ಲಿ M ರೀತಿಯ ಚಿಹ್ನೆ ಇದ್ದರೆ ನೀಮ್ಮ ವ್ಯಕ್ತಿತ್ವ ಎಂತಹದ್ದು ಗೊತ್ತಾ? ಹೇಗಿರುತ್ತೆ ಜೀವನ ನೋಡಿ…!

By admin

November 25, 2019

ಹಸ್ತವನ್ನು ಅಧ್ಯಯನ ಮಾಡುವ ಮೂಲಕ ವ್ಯಕ್ತಿಯ ಗುಣ ಲಕ್ಷಣಗಳನ್ನು ಗುರುತಿಸುವ, ಭವಿಷ್ಯ ನುಡಿಯುವ ಕಲೆ, ಇದನ್ನು ಹಸ್ತದ ಓದು ಅಥವಾ ಕೈರೋಲಜಿ ಎಂದು ಕೂಡಾ ಕರೆಯಲಾಗುತ್ತದೆ. ಅನೇಕ ಸಾಂಸ್ಕೃತಿಕ ಭಿನ್ನತೆಗಳೊಂದಿಗೆ ಈ ಪದ್ಧತಿ ಜಗತ್ತಿನಾದ್ಯಂತ ಕಾಣಸಿಗುತ್ತದೆ, ಭಾರತದಲ್ಲಿ ಕೂಡ ಇದೆ ತರಹದ ಹಲವಾರು ಪದ್ದತಿಗಳು ವಿವಿಧ ಪ್ರದೇಶಗಳಲ್ಲಿ ಲಭ್ಯವಿದೆ. ಇಷ್ಟಕ್ಕೂ ಈ ಹಸ್ತದ ರೇಖೆಗಳನ್ನು ಗುರುತಿಸಿ ಹೇಳುವ ಪದ್ದತಿಯನ್ನು ಹಲವರು ನಂಬುತ್ತಾರೆ, ಇನ್ನು ಕೆಲವರು ಬೊಗಳೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ, ಆದರೆ ಇದು ಅವರವರ ಅನುಭವ ಹಾಗು ನಂಬಿಕೆಗೆ ಬಿಟ್ಟ ವಿಚಾರ.

ಇದೇ ರೀತಿಯಲ್ಲಿ ಅಂಗೈಯಲ್ಲಿ M ಆಕಾರದ ಆಕೃತಿ ಇದ್ದರೆ ಅಂತಹ ಯುಕ್ತಿಗಳು ಜೀವನದಲ್ಲಿ ಹೇಗಿರುತ್ತಾರೆ ಎಂದು ಕೆಲವು ಸಮೀಕ್ಷೆಗಳು ತಿಳಿಸಿವೆ, ಹಾಗಿದ್ದರೆ ಈ ವ್ಯಕಿಗಳ ಸ್ವಭಾವ ಹಾಗು ಗುಣಗಳ ಬಗ್ಗೆ ತಿಳಿದುಕೊಳ್ಳೋಣ. ಅಂಗೈ ರೇಖೆಯನ್ನು ಜೋಡಿಸಿದಾಗ M ಆಕೃತಿ ಹೊಂದಿರುವವರು ಸಾಮಾನ್ಯವಾಗಿ ಇವರ ಕೋಪ ಶೀಘ್ರವಾಗಿ ಶಮನವಾಗುವುದಿಲ್ಲ, ಇವರದ್ದು ಎದುರಾಳಿಗಳ ಮೇಲೆ ಬಿದ್ದು ಕಾದಾಡುವ ಸ್ವಭಾವ ಮತ್ತು ಸಾಧಾರಣ ಐಹಿಕ ಸುಖಾಭಿಲಾಷೆ, ಸ್ವತಂತ್ರ ಮನೋಭಾವ, ಹೆಚ್ಚಿನ ತಾಳ್ಮೆ ಯೂ ಇವರಗೆ ಸಿದ್ಧಿಸಿರುತ್ತದೆ ಹೀಗಾಗಿ ಇನ್ನೊಬ್ಬರೊಂದಿಗೆ ಸಿಕ್ಕಿಕೊಳ್ಳುವುದೇ ಇಲ್ಲ. ಇವರು ಯಾವುದೇ ಕೆಲಸ ಕೈಗೊಂಡರೂ, ಬಹಳ ತಾಳ್ಮೆಯಿಂದ ಸಾಧನೆ ಮಾಡುತ್ತಾರೆ ಮತ್ತು ಇವರ ಕೆಲಸಗಳು ಫಲಪ್ರದವಾಗುತ್ತವೆ.

ಹಣ, ಆಸ್ತಿ ಪಾಸ್ತಿ ಸಂಪಾದನೆಯ ಬಗ್ಗೆ ಬಹಳ ಮುತುವರ್ಜಿ ವಹಿಸುತ್ತಾರೆ, ಜೀವನದಲ್ಲಿ ಸುಖ ಅನುಭವಿಸಲು ಪ್ರಯತ್ನಿಸುವ ಇವರು, ಅದನ್ನು ಕೈಗೂಡಿಸಿಕೊಳ್ಳುತ್ತಾರೆ, ಆರೋಗ್ಯದ ವಿಷಯದಲ್ಲಿ ಜಾಗ್ರತೆಯಿಂದಿರುತ್ತಾರೆ, ನೇರನುಡಿಯಾದರೂ, ಇವರು ದುಡುಕುವುದಿಲ್ಲ. ಯಾವುದೇ ವಿಷಯದಲ್ಲಿ ಯಾರ ಬಗ್ಗೆಯೇ ಆಗಲಿ ನಿಷ್ಪಕ್ಷಪಾತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಇವರಲ್ಲಿ ನಿಪುಣತೆ ಹಾಗೂ ಅಧ್ಯಯನಶೀಲತೆ ತುಂಬಿರುತ್ತದೆ. ವ್ಯವಹಾರದ ಹಾಗೂ ವ್ಯಾಪಾರದ ಬಗ್ಗೆ ಗಾಢವಾಗಿ ತಿಳಿದುಕೊಳ್ಳುವ ಆಸಕ್ತಿ ಹೊಂದಿದವರಾಗುತ್ತಾರೆ ಮತ್ತು ಸ್ಥಿರ ಉದ್ಯೋಗ ಇವರಿಗಲ್ಲ.

ಮುಖದಲ್ಲಿ ಕಳೆ, ತೇಜಸ್ಸು ಹೊಂದಿರುವ ಇವರು, ಜೀವನದಲ್ಲಿ ಹಂತ ಹಂತವಾಗಿ ಅಭಿವೃದ್ಧಿಯನ್ನು ಅನುಭವಿಸುತ್ತಾರೆ, ಧೈರ್ಯವಂತರಾಗಿದ್ದರೂ ಯಾವಾಗಲೂ ನ್ಯಾಯ ಸಮ್ಮತರಾಗಿರುತ್ತಾರೆ.ಮಾತಿಗಿಂತ ಕೃತಿಯೇ ಮುಖ್ಯ ಮಾತನಾಡುವುದು ಕಡಿಮೆ. ಇನ್ನೊಬ್ಬರ ಕಷ್ಟವನ್ನು ಅರಿತು, ಅವರಿಗೆ ಸಹಾಯ ಮಾಡುತ್ತಾರೆ, ಎಲ್ಲವನ್ನೂ ಪರಿಶೀಲಿಸಿ ಒಳ್ಳೆಯ ತೀರ್ಪು ನೀಡುತ್ತಾರೆ.

ಸಾರ್ವಜನಿಕ ಕೆಲಸದಲ್ಲಿ ಬಹಳ ಆಸಕ್ತಿ ವಹಿಸುತ್ತಾರೆ ಮತ್ತು ಮಾನವೀಯತೆಯಲ್ಲಿ ಅಪಾರ ನಂಬಿಕೆಯನ್ನು ಇಟ್ಟುಕೊಂಡು ಅದರಂತೆ ನಡೆಯುತ್ತಾರೆ. ಕೆಟ್ಟ ಅಲೋಚನೆಯನ್ನು ಮಾಡುವುದೇ ಇಲ್ಲ, ಇನ್ನೊಬ್ಬರ ಕಷ್ಟವನ್ನು ತಿಳಿದು ನಡೆಯುತ್ತಾರೆ ಮತ್ತು ಎಲ್ಲರ ಮಾತಿಗೆ ಬೆಲೆ ಕೊಡುತ್ತಾರೆ ಹಾಗೆ ಹಿಡಿದ ಕೆಲಸವನ್ನು ಕೈಗೂಡುವವರೆಗೆ ಕೈಬಿಡದೆ ಪ್ರಯತ್ನ ಮುಂದುವರಿಸುತ್ತಾರೆ.