ತುಂಬಾ ಜನ ಸಿಳ್ಳೆ (ವಿಸಿಲ್) ಹೊಡೆಯೋಕೆ ತುಂಬಾ ಇಷ್ಟ ಪಡುತ್ತಾರೆ. ಆದ್ರೆ ಕೆಲವರಿಗೆ ವಿಸಿಲ್ ಹೊಡೆಯೋದು ಹೇಗೆ ಅಂತ ಗೊತ್ತಾಗದೆ ತುಂಬಾ ಕಷ್ಟ ಪಡುತ್ತಾರೆ. ನೀವೇನಾದ್ರೂ ವಿಸಿಲ್ ಹೊಡೆಯೋದು ಹೇಗೆ ಅಂತ ಕಲಿಬೇಕು ಅನ್ಕೊಂಡ್ರೆ ಕೆಳಗೆ ಕೊಟ್ಟಿರುವ ಸರಳ ಕ್ರಮಗಳನ್ನು ಅನುಸರಿಸಿ…
- ನಿಮ ತೋರು ಬೆರಳು ಹಾಗು ಮದ್ಯದ ಬೆರಳಿನಿಂದ A ಬರುವ ಹಾಗೆ ಅಕ್ಷರವನ್ನು ಮಾಡಿ, ಮತ್ತೆ ಉಳಿದಿರುವ ಬೆರಳುಗಳನ ಸುತಿಕೊಳ್ಳಿ.
- ತುಟಿಯನ್ನು ಒಳಗೆ ಮಾಡಿ, ಅಂದ್ರೆ ಹಲ್ಲುಗಳ ಮದ್ಯ. ಇದು ಕೆಲವು ಪ್ರಯತ್ನಗಳ ನಂತರ ನಿಮಗೆ ಗೊತ್ತಾಗುತ್ತೆ, ಎಷ್ಟು ತುಟಿಯನ ಒಳಗೆ ತೆಗೆದುಕೊಳ್ಳಬೇಕು ಎಂದು.
- ಈಗ ನಿಮ್ಮ ನಾಲಿಗೆಯನ್ನು ಸರಿಯಾದ ರೀತಿಯಲ್ಲಿ ಮೂವ್ ಮಾಡಿ. ಈಗ ನಿಮ್ಮ ನಾಲಿಗೆಯನ್ನು ಬೆರಳಿನಿಂದ ಒಳಗೆ ದಬ್ಬಿಮತ್ತೆ ನಾಲಿಗೆಯ ತುದಿಯಾನು ಕೆಳಗೆ ಮಾಡಿ. ಹೇಗೆಂದರೆ ನಾಲಿಗೆ ಸುಟ್ಟುಕೊಂಡಿರುವ ಹಾಗೆ ಮಾಡ್ಕೊಬೇಕು. ನಿಮ ಬೆರಳು ಕಾಲುಭಾಗಕ್ಕಿಂತ ಜಾಸ್ತಿ ಬಾಯಿಯಲಿ ಇರಬಾರದು.
- ನಿಮ್ಮ ಬಾಯಿಯಲ್ಲಿ ಇರುವ ಗಾಳಿಯ ಮಾರ್ಗದಿಂದ ಉಸಿರಾಡಿ. ಗಾಳಿಯು ನಿಮ್ಮ ಕೆಳ ತುಟಿಗಿಂತ ಕೆಳಗಡೆ ಮಾತ್ರ ಹಾದುಹೋಗುತ್ತಿದೆ ಎಂದು ಭಾವಿಸಿದರೆ, ನೀವು ಅದನ್ನು ಸರಿಯಾಗಿ ಮಾಡಿದ್ದೀರಿ ಎಂದು. ನಿಮ್ಮ ಮೇಲ್ಭಾಗದ ತುದಿಯಿಂದ ಹಾದುಹೋಗುವಂತೆ ತೋರುತ್ತಿದ್ದರೆ, ನಿಮ್ಮ ಬೆರಳುಗಳನ್ನು ಬಳಸಿಕೊಂಡು ಗಾಳಿ ಮಾರ್ಗವನ್ನು ಹೋಗುವದನ್ನು ಕಡಿಮೆಗೊಳಿಸಿ.