ಅದೆಷ್ಟೋ ಲಕ್ಷ ಜೀವಿಗಳು ಕೋಟ್ಯಾನುಕೋಟಿ ವರ್ಷಗಳಿಂದ ಭೂಮಿ ಮೇಲೆ ನೆಲೆಯನ್ನು ಕಂಡುಕೊಂಡಿವೆ ಎಂಬುದೇನೋ ನಿಜ.
ನಮಗೆ ಸಕಲವನ್ನು ನೀಡಿರುವ, ನೀಡುತ್ತಿರುವ ಭೂಮಿಯ ಕುರಿತು 5 ಸಂಗತಿಗಳು ಇಲ್ಲಿವೆ:-
1. ಒಂದು ದಿನದಲ್ಲಿ 24 ಗಂಟೆಗಳಿಲ್ಲ!
ಜನರು ತಮಗೆ ದಿನದಲ್ಲಿರುವ 24 ಗಂಟೆಗಳ ಸಮಯ ಕಡಿಮೆಯೇ ಎಂದು ದುರುವುದನ್ನೂ ನೋಡಿರಬಹುದು. ಆದರೆ ನಮ್ಮ ಒಂದು ದಿನದಲ್ಲಿ ಇರುವುದು 24 ಗಂಟೆಗಳಲ್ಲ ಎಂಬ ಸಂಗತಿ ನಿಮಗೆ ಗೊತ್ತೇ? ನಿಖರವಾಗಿ, ಒಂದು ದಿನದಲ್ಲಿರುವುದು 23 ಗಂಟೆ 56 ನಿಮಿಷ.
2. ಭೂಮಿಯ ಚಲನೆ ನಿಧಾನವಾಗುತ್ತಿದೆ
ತನ್ನ ಅಕ್ಷದಲ್ಲಿಯೂ ಸುತ್ತುವ ಭೂಮಿಯ ವೇಗ ಮಿಲಿಸೆಕೆಂಡುಗಳಷ‌್ಟು ಅಂತರದಲ್ಲಿ ನಿಧಾನವಾಗುತ್ತಿದೆ. ಇದರ ನೇರ ಪರಿಣಾಮ ಆಗುವುದು ಬೆಳಗು ಮತ್ತು ರಾತ್ರಿಯ ಮೇಲೆ. ಆದರೆ ಇದಾಗಲು ನೂರು ಮಿಲಿಯನ್ ವರ್ಷಗಳು ಕಳೆಯಬೇಕು. ಆಗ ಭೂಮಿಯ ದಿನಮಾನ 24 ಗಂಟೆ ಆಗಿರೋದಿಲ್ಲ, 25 ಗಂಟೆಗಳಾಗಿರುತ್ತವೆ.
3.ನಾವೇ ಕೇಂದ್ರ
ಒಂದು ಕಾಲದಲ್ಲಿ ಭೂಮಿಯ ಸುತ್ತ ಇಡೀ ವಿಶ್ವವೇ ಸುತ್ತುತ್ತಿದೆ ಎಂದು ಜನರು ನಂಬಿದ್ದರು. ಜನರಷ್ಟೇ ಅಲ್ಲ ವಿಜ್ಞಾನಿಗಳು ಹಾಗೆ ನಂಬಿದ್ದರು.
4. ವಿದ್ಯುತ್ಕಾಂತೀಯ ಶಕ್ತಿ
ಭೂಮಿಯನ್ನು ಬಲವಾದ ವಿದ್ಯುತ್ಕಾಂತೀಯ ಶಕ್ತಿ ಆವರಿಸಿದೆ. ಇದು ಸೂರ್ಯನ ಅಪಾಯಕಾರಿ ಸೌರಗಾಳಿಯಿಂದ ನಮ್ಮನ್ನು ರಕ್ಷಿಸುತ್ತದೆ.
5. ಭೂಮಿಯ ನಾಮಕರಣ
ಸೌರಮಂಡಲದ ಲ್ಲಾ ಗ್ರಹಗಳು ಹೆಸರುಗಳ ದೇವರ ಹೆಸರಿನಿಂದ ಪ್ರಭಾವಿತಗೊಂಡಿದೆ. ಇದಕ್ಕೆ ಅಪವಾದದಂತಿರುವ ಎಕೈಕ ಗ್ರಹ ಭೂಮಿ.
ಮರ್ಕ್ಯುರಿ,ವೀನಸ್ , ಮರ್ಸ್,ಜುಪಿಟರ್ ಮತ್ತು ಶನಿ- ಈ ಗ್ರಹಗಳ ಹೆಸರು ರೋಮನ್ ಪುರಾಣವನ್ನು ಆದರಿಸಿದೆ. ಯುರೆನೆಸ್ ಮತ್ತು ನೆಪ್ಚೂನ್ ಗ್ರಹಗಳ ಹೆಸರು ಗ್ರೀಕ್ ಪುರಾಣದಿಂದ ಬಂದಿವೆ. ‘ಅರ್ತ್’ ಹೆಸರು ಬಂದಿದ್ದು ‘ಎರ್ಡಾ’ ಎನ್ನುವ ಅ್ಯಂಗ್ಲೊ ಸ್ಯಾಕ್ಸನ್ ಪದದಿಂದ.