ಈ ತಲೆಮಾರಿನ ಮಕ್ಕಳಿಗೆ ಒಂದರ್ಥದಲ್ಲಿ ಅಪರೂಪದ ವಸ್ತುವೇ ಆಗಿರುವ ಒಂದು ರೂಪಾಯಿಯ ನೋಟು ಚಲಾವಣೆಗೆ ಬಂದು ಇಂದಿಗೆ(ನ.30, 1917) ಸರಿಯಾಗಿ ನೂರು ವರ್ಷ ಸಂದಿದೆ. ಕಿಂಗ್ ಐದನೇ ಜಾರ್ಜ್ ಚಿತ್ರದೊಂದಿಗೆ ಹೊರಬಂದ ಈ ನೋಟಿನ ವಿಶೇಷತೆ ಎಂದರೆ ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ಮುದ್ರಿಸುವುದಿಲ್ಲ. ಬದಲಾಗಿ ಭಾರತೀಯ ಸರ್ಕಾರ ಮುದ್ರಿಸುತ್ತದೆ.
ನಿಮಗೆ ಶಾಕ್ ಆಗ್ಬಹುದು,ಈಗಲೂ ಚಾಲನೆಯಲ್ಲಿರುವ ಕೇವಲ ಒಂದು ರುಪಾಯಿ ಕಾಯಿನ್’ನಿಂದ ಭಾರತದಲ್ಲಿ ನಾವು ಏನೆಲ್ಲಾ ದಿನನಿತ್ಯ ಬಳಸುವ ವಸ್ತುಗಳನ್ನು ಖರೀದಿಸಬಹುದು ಎಂದು..!
- ಸ್ಟವ್, ಹೊಲೆ ಹಚ್ಚಲು ಸಿಗುತ್ತೆ 1 ರೂಪಾಯಿಯಲ್ಲಿ ಸಿಗುತ್ತೆ ಬೆಂಕಿ ಪೊಟ್ಟಣ…
- ಚಾಕ್ಲೆಟ್ ಮತ್ತು ಮೌತ್ ಪ್ರೆಶ್ ಗಳು ಸಿಗುತ್ತವೆ.
- ಎನ್ವಲಪ್ ಕವರ್ ಮತ್ತು ಎರೆಸರ್’ಗಳು ಕೇವಲ 1 ರೂಪಾಯಿಯಲ್ಲಿ..
- ಪೋಸ್ಟ್ ಕಾರ್ಡ್’ಗಳು…
- ದಿನನಿತ್ಯ ಬಳಸುವ ಶಾಂಪು ಮತ್ತು ವಾಷಿಂಗ್ ಪೌಡರ್…
- ಹೆಣ್ಣು ಮಕ್ಕಳಿಗೆ ಬೇಕಾಗಿರುವ ಹೇರ್ ಪಿನ್ ಮತ್ತು ಸೇಪ್ಟಿ ಪಿನ್ಗಳು ಒಂದು ರೂಪಾಯಿಯಲ್ಲಿ ಲಭ್ಯವಿದೆ…
- ಮನೆ ಬೆಳಗುವ ಮೇಣದ ಬತ್ತಿಗಳು…
- ಕೆಲವು ಕಡೆ ನೀವೂ ಒಂದು ರುಪಾಯಿ ಕೊಟ್ಟು ಶೌಚಾಲಯ ಬಳಸಬಹುದು…
- ಸ್ಟ್ಯಾಂಪ್’ಗಳು
- ಕೆಲವೊಂದು ಮಾತ್ರೆಗಳು ಒಂದು ರೂಪಾಯಿಯಲ್ಲಿ ಲಭ್ಯವಿದೆ…
- ನಮ್ಮ ತೂಕವನ್ನು 1 ರುಪಾಯಿಯಿಂದ ಚೆಕ್ ಮಾಡಿಕೊಳ್ಳಬಹುದು…
ಸ್ನೇಹಿತರೆ 1 ರುಪಾಯಿಯನ್ನು ಬಳಸಿ ಕೊಳ್ಳುವ ಬೇರೆ ಏನಾದ್ರೂ ವಸ್ತುಗಳಿದ್ರೆ ಕಾಮೆಂಟ್ ಮಾಡಿ ತಿಳಿಸಿ…