ಉಪಯುಕ್ತ ಮಾಹಿತಿ

ನಿಮಗೆ ಗೊತ್ತಿರುವ ಮೆಕ್ಕೆಜೋಳದ ರೇಷ್ಮೆಯ ಉಪಯೋಗಗಳು..!ತಿಳಿಯಲು ಈ ಲೇಖನ ಓದಿ…

By admin

February 20, 2018

ನಾವು ಮೆಕ್ಕೆಜೋಳದ ರೇಷ್ಮೆಯನ್ನು ಹಾಗೇ ತಿನ್ನಬಹುದು ಅಥವಾ ನೀರಿನೊಂದಿಗೆ ಬೆರೆಸಿ ದ್ರಾವಣ ರೂಪದಲ್ಲಿ ಕುಡಿಯಬಹುದು ಅಥವಾ ನಿಂಬೇ ಪಾನೀಯವಾಗಿ ಸೇವಿಸಬಹುದು ನೀವು ಮೆಕ್ಕೆಜೋಳದ ರೇಷ್ಮೆಯನ್ನು ಒಂದು ದಿನ ನೀರಿನಲ್ಲಿ ನೆನೆಸಿ ಸೂರ್ಯನ ಬಿಸಿಲಿನಲ್ಲಿ ಇಟ್ಟು ಅಂದೇ ರಾತ್ರಿ ಜೇನುತುಪ್ಪದೊಂದಿಗೆ ಸೇರಿಸಿ ಬೇಕಾದಾಗ ಕುಡಿಯಬಹುದು.

ಕಿಡ್ನಿಯಲ್ಲಿನ ಕಲ್ಲನ್ನು ಕರಗಿಸುತ್ತದೆ:-

ಮೆಕ್ಕೆಜೋಳದ ರೇಷ್ಮೆಯು ಕಿಡ್ನಿಯ ಕಲ್ಲನ್ನು ಕರಗಿಸುವುದರಲ್ಲಿ ಸಹಾಯಕವಾಗುತ್ತದೆ.ನಿಯಮಿತ ಮೆಕ್ಕೆಜೋಳ ರೇಷ್ಮೆ ಸೇವನೆಯು ಕಿಡ್ನಿಯಲ್ಲಿನ ಕಲ್ಲು ಹಾಗೂ ಮುಂದೆ ಉತ್ಪಾದನೆಯಾಗುವುದನ್ನು ತಡೆಯುತ್ತದೆ.

ರಕ್ತ ಹೆಪ್ಪುಗಟ್ಟುವುದನ್ನು ತಡೆಯುವಿಕೆ:-

ಮೆಕ್ಕೆಜೋಳದ ರೇಷ್ಮೆಯು ಅತಿಯಾಗಿ ವಿಟಮಿನ್ K ನ್ನು ಹೊಂದಿದ್ದು ರಕ್ತಹೆಪ್ಪುಗಟ್ಟುವುದನ್ನು ತಡೆಯುವುದರಲ್ಲಿ ಪರಿಣಾಮಕಾರಿಯಾಗಿದ್ದು ಹಾಗೂ ರಕ್ತಕ್ಷಯವನ್ನು ತಡೆಯುವುದರಲ್ಲಿಯೂ ಸಹಕಾರಿಯಾಗಿದೆ.

ಮಧುಮೇಹ ಹತೋಟಿ:-

ಮೆಕ್ಕೆಜೋಳದ ರೇಷ್ಮೆಯು ದೇಹದಲ್ಲಿರುವ ಇನ್ಸುಲಿನ್ ಹಾಗೂ ಅನಾರೋಗ್ಯಕರ ಜೀವಕೋಶಗಳನ್ನು ಸರಿಮಾಡುವುದರಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಈ ಮೂಲಕ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡುವಂತೆ ಮಾಡುತ್ತದೆ.

ನೈಸರ್ಗಿಕ ಮೂತ್ರವರ್ಧಕ:-

ಮೆಕ್ಕೆಜೋಳದ ರೇಷ್ಮೆಯನ್ನು ನಿಯಮಿತವಾಗಿ ಬಳಸಿದರೆ ದೇಹದಿಂದ ಬೇಡವಾದ ತ್ಯಾಜ್ಯ ಹಾಗೂ ಲವಣಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.ಜೊತೆಗೆ ಮೂತ್ರ ತೊಂದರೆಯನ್ನು ತಡೆಯುತ್ತದೆ.