*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*
ದ್ರೌಪದಿ ಬಗ್ಗೆ ಎಲ್ಲರೂ ಕೇಳೆ ಇರುತ್ತೀರಾ.ಅದರಲ್ಲೂ ಮಹಾಭಾರತದಲ್ಲಿ ದ್ರೌಪದಿಯು ಪಂಚ ಪಾಂಡವವರನ್ನು ಮದುವೆಯಾದ ಬಗ್ಗೆ ನಾವು ಪುರಾಣಗಳಲ್ಲಿ ಓದಿರುತ್ತೇವೆ ಮತ್ತು ಹಲುವು ಚಿತ್ರಗಳ ಮುಖಾಂತರ ನೋಡಿರುತ್ತೇವೆ.
ಅಂತಹ ಘಟನೆ ಈ ಕಲಿಯುಗದಲ್ಲಿ ನಡೆಯುವುದು ಅಸಾಧ್ಯ ಆಲ್ವಾ!
ಆದರೆ ಅಂತಹ ಘಟನೆ ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಐದು ಮಂದಿಯನ್ನು ಮದುವೆಯಾಗುವುದು ಅಸಾಧ್ಯವೆನಿಸಿದರೂ ನಡೆದಿದೆ. ಆದರೆ ಇಲ್ಲೊಬ್ಬಳು ಮಹಿಳೆ ಈ ಅಸಂಭವವನ್ನು ಸಂಭವವಾಗಿಸಿದ್ದಾಳೆ.
ರಾಜೋ ಎಂಬ ಮಹಿಳೆ ಐದು ಮಂದಿ ಸಹೋದರರನ್ನು ಮದುವೆಯಾಗಿದ್ದಾಳೆ. ಎಲ್ಲಾ ಪತಿಯರು ತನ್ನನ್ನು ತುಂಬಾ ಪ್ರೀತಿಸುತ್ತಿರುವ ಕಾರಣ ನಾನು ತುಂಬಾ ಅದೃಷ್ಟವಂತೆ ಎಂದು ಆಕೆ ಹೇಳಿದ್ದಾಳೆ. ನಿಮಗೆ ಇದು ಆಚ್ಚರಿ ಅನಿಸಿದರೂ ನಿಜ.
ಆಕೆ ಮತ್ತು ಅವರ ಕುಟುಂಬದ ಬಗ್ಗೆ ತಿಳಿದುಕೊಳ್ಳೋಣ :-
ಆಕೆ ಡೆಹ್ರಾಡೂನ್‌ನವಳು, ಆಕೆಯ ಹೆಸರು ರಾಜೋ. ಡೆಹ್ರಾಡೂನ್‌ಗೆ ಸಮೀಪದ ಹಳ್ಳಿಯೊಂದರಲ್ಲಿ ತನ್ನ ಐದು ಮಂದಿ ಪತಿಯರೊಂದಿಗೆ ವಾಸಿಸುತ್ತಾಳೆ. ಆಕೆ ಎಲ್ಲಾ ಪತಿಯರೊಂದಿಗೂ ತುಂಬಾ ಸಂತೋಷದಿಂದ ಇದ್ದಾಳೆಂದು ಹೇಳುತ್ತಾಳೆ.
ಆಕೆ ಹೇಳುವ ಪ್ರಕಾರ ಇದು ನಮ್ಮ ಕುಟುಂಬದ ಸಂಪ್ರದಾಯ ಹಲವಾರು ಶತಮಾನಗಳಿಂದಲೂ ಈ ಸಂಪ್ರದಾಯವನ್ನು ಕುಟುಂಬವು ಪಾಲಿಸಿಕೊಂಡು ಬರುತ್ತಾ ಇದೆ ಮತ್ತು ಕುಟುಂಬದ ಸದಸ್ಯರು ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಆಕೆ ಹೇಳುತ್ತಾರೆ.
ಈ ಸಂಪ್ರದಾಯಕ್ಕೆ ಪ್ರೇರಣೆ ಏನು ಗೊತ್ತೇ ?
ಈ ಸಂಪ್ರದಾಯಕ್ಕೆ ಪಂಚಪಾಂಡವರು ಪ್ರೇರಣೆಯಂತೆ! ಹೌದು, ಮಹಾಭಾರತದಲ್ಲಿ ಐದು ಮಂದಿ ಪಾಂಡವರು ದ್ರೌಪದಿಯನ್ನು ಮದುವೆಯಾಗಿದ್ದರು.
ಈ ಸಂಪ್ರದಾಯಕ್ಕೆ ಮುಖ್ಯ ಕಾರಣ…
ಈ ಸಂಪ್ರದಾಯಕ್ಕೆ ಮತ್ತೊಂದು ಕಾರಣ ಗಂಡು ಹಾಗೂ ಹೆಣ್ಣಿನ ನಡುವಿನ ಸಂಖ್ಯಾನುಪಾತವು ಈ ಸಂಪ್ರದಾಯಕ್ಕೆ ಮತ್ತೊಂದು ಕಾರಣವಾಗಿದೆ. ಈ ಪ್ರದೇಶದಲ್ಲಿ ಹೆಣ್ಣಿನ ಸಂಖ್ಯೆ ಕಡಿಮೆ ಇರುವ ಕಾರಣದಿಂದಾಗಿ ಐದು ಮಂದಿ ಒಬ್ಬಳನ್ನೇ ಮದುವೆಯಾಗಿದ್ದಾರೆ.ರಾಜೋಗೆ ಈಗ 18 ತಿಂಗಳ ಮಗುವಿದೆ. ಆದರೆ ಈ ಮಗುವಿಗೆ ತಂದೆ ಯಾರು ಎನ್ನುವ ಬಗ್ಗೆ ಇದುವರೆಗೆ ತಿಳಿದಿಲ್ಲ.
ಆಕೆಯ ಪತಿಯರ ವಯಸ್ಸು 18ರಿಂದ 34 ರಾಜೋ ಮದುವೆಯಾಗಿರುವ ಸಹೋದರರ ವಯಸ್ಸು 18ರಿಂದ 34ರ ನಡುವೆ ಇದೆ. ಯಾರಿಗೂ ಇದರ ಬಗ್ಗೆ ಹೊಟ್ಟೆಕಿಚ್ಚು ಇಲ್ಲ. ರಾಜೋ ಎಲ್ಲಾ ಪತಿಯರೊಂದಿಗೂ ಸಮಾನವಾಗಿ ಸಮಯ ಕಳೆಯುತ್ತಾಳೆ.
ಇನ್ನೂಇಂತಹ ಸಂಪ್ರದಾಯಗಳಿಗೆ ಕೊನೆ ಹಾಡಲು ಆಗಿಲ್ಲ ಎನ್ನುವುದೇ ಸೋಜಿಗ….