ಬಡತನ ಅನ್ನೋದು ಮನಸ್ಸಿನಲ್ಲಿ ಇದೆಯಾ ಅಥವಾ ಆಸ್ತಿಯಲ್ಲಿ ? ದುಡ್ಡಿನ ಓಟದಲ್ಲಿ ನಾವು ಯಾರು ಎಂಬುದನ್ನು ನಾವೇ ಮರೆತಿದ್ದೇವೆ. ಬಡವರು ಯಾರು? ಶ್ರೀಮಂತರು ಯಾರು? ಈ ಲೇಖನ ಓದಿ ನೀವೆ ನಿರ್ಧರಿಸಿ ಹೇಳಿ.
ಒಬ್ಬ ಶ್ರೀಮಂತ ಮಹಿಳೆ ಸೀರೆ ಅಂಗಡಿಗೆ ಬಂದು ಅಂಗಡಿಯವನನ್ನು ಕೇಳಿದಳು, Excuse me ಒಂದು ಕಡಿಮೆ ಬೆಲೆಯ (100 ರುಪಾಯಿ) ಸೀರೆ ತೋರಿಸಿ ನನ್ನ ಮಗಳ ಮದುವೆ ಇದೆ ಕೆಲಸದವಳಿಗೆ ಕೋಡಲು ಎಂದು ಹೇಳಿ ಕಡಿಮೆ ಬೆಲೆಯ ಸೀರೆ ಖರೀದಿಸಿದಳು.
ಸ್ವಲ್ಪ ಸಮಯದ ನಂತರ ಅದೇ ಅಂಗಡಿಗೆ ಆ ಮನೆ ಕೆಲಸದವಳು ಬಂದು ಅಂಗಡಿಯವನನ್ನು ಕೇಳಿದಳು, ಅಣ್ಣಾ ಒಂದು ದುಬಾರಿ ಸೀರೆ ತೋರಿಸು (1000 ರುಪಾಯಿ) ನಮ್ಮ ಮಾಲೀಕರ ಮಗಳ ಮದುವೆಗೆ ಉಡುಗೊರೆ ಕೊಡಬೇಕು ಎಂದು ಸೀರೆ ಖರೀದಿಸಿ ಹೋದಳು.
ಈಗ ಹೇಳಿ ಇವರಲ್ಲಿ ಶ್ರೀಮಂತರು ಯಾರು ?
ನಿಜವಾದ ಶ್ರೀಮಂತರು ಮನೆ ಯಜಮಾನಿಯಾ ಅಥವಾ ಕೆಳಸದವಳಾ ?
ಒಂದು ದಿನ ಒಬ್ಬ ಮಹಿಳೆ ತನ್ನ ಕುಟುಂಬ ಸಮೇತ 5 ಸ್ಟಾರ್ ಹೋಟೆಲ್ ಗೆ ಊಟಕ್ಕೆ ಹೋಗಿದ್ದರು. ಅವಳು ಆರು ತಿಂಗಳ ಮಗುವಿನ ತಾಯಿ,ಮಗು ಹಸಿವಿನಿಂದ ಅಳತೊಡಗಿತು, ಅವಳು ಹೋಟೆಲ್ ಮ್ಯಾನೇಜರ್ ಗೆ ಒಂದು ಲೋಟ ಹಾಲು ಸಿಗುತ್ತಾ..? ಎಂದು ಕೇಳಿದಳು. ಮ್ಯಾನೇಜರ್ ಎಸ್ ಮೇಡಮ್ ಆದರೆ ಅದಕ್ಕೆ ಮತ್ತೆ ದುಡ್ಡಾಗುತ್ತೆ. ಮಹಿಳೆ ಹೇಳಿದಳು ನೋ ಪ್ರಾಬ್ಲಮ್ ಎಂದು ಹಣ ನೀಡಿ ಒಂದು ಲೋಟ ಹಾಲು ಪಡೆದು ಮಗುವಿಗೆ ನೀಡಿದಳು.
ಹೋಟೆಲ್ ನಿಂದ ವಾಪಸ್ ಬರುವಾಗ ಮಗು ಹಸಿವಿನಿಂದ ಮತ್ತೆ ಅಳತೊಡಗಿತು, ರಸ್ತೆ ಪಕ್ಕ ಗಾಡಿ ನಿಲ್ಲಿಸಿ ಚಹಾ ಮಾರುವ ಮುದುಕನ ಹತ್ತೀರ ಒಂದು ಒಂದು ಲೋಟ ಹಾಲು ಸಿಗುತ್ತಾ..? ದುಡ್ಡು ಎಷ್ಟು ? ಎಂದು ಕೇಳಿದಳು. ಆ ಮುದುಕ ನಗುತ್ತಾ ಹೇಳಿದ ಮೇಡಮ್ ಮಕ್ಕಳ ಹಾಲಿಗೆ ನಾವು ದುಡ್ಡು ತೆಗೆದುಕೊಳ್ಳಲ್ಲ, ನೀವು ಇನ್ನೂ ಬಹಳಷ್ಟು ಪ್ರಯಾಣ ಮಾಡುವದಿದ್ದರೆ ಇನ್ನೊಂದು ಲೋಟ ಹಾಲು ತಗೊಳ್ಳಿ ಎಂದು ಎರಡು ಲೋಟ ಹಾಲು ನೀಡಿದ. ಆ ಮಹಿಳೆ ಎರಡು ಲೋಟ ಹಾಲು ತೆಗೆದುಕೊಂಡು ಹೊರಟಳು.
ಈಗ ಹೇಳಿ ಇವರಲ್ಲಿ ಶ್ರೀಮಂತರು ಯಾರು ?
ನಿಜವಾದ ಶ್ರೀಮಂತರು ಹೋಟೆಲ್ ಮ್ಯಾನೇಜರ್ ಅಥವಾ ಚಹಾ ಮಾರುವವ ?
“ ಬನ್ನಿ ಸಹಾಯದ ಅವಶ್ಯಕತೆಯಿರುವವರಿಗೆ ಪ್ರತಿಫಲ ನಿರಿಕ್ಷಿಸದೆ ಸಹಾಯ ಮಾಡೋಣ ಅದು ನಮ್ಮ ಮನಸಿಗೆ ಸುಖ ನೀಡುತ್ತದೆ ಆ ಸುಖ ದುಡ್ಡಿನಿಂದ ಸಿಗುವದಿಲ್ಲ ”
“ ಜಗತ್ತು ಒಳ್ಳೆಯವರಿಂದ ತುಂಬಿದೆ ನಾವು ಹುಡುಕಬೇಕಷ್ಟೆ ಒಂದಾಗೋಣ ಜಗತ್ತನ್ನೆ ಬದಲಾಯಿಸೋಣ ”