ಸ್ಯಾಂಡಲ್ ವುಡ್ ನ ಮಾಣಿಕ್ಯ ಅಭಿನಯ ಚಕ್ರವರ್ತಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ . ಅಲ್ಲಿ ಫ್ಯಾನ್ಸ್ ಜೊತೆ ನಿರಂತ ಟಚ್ ನಲ್ಲಿರುತ್ತಾರೆ . ಸುದೀಪ್ ತಮ್ಮ ಸಿನಿಮಾಗಳ ಮಾಹಿತಿಗಳ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡೋದೆ ಎಲ್ಲಾ ಅಲ್ಲೆ . ಇದೀಗ ಕಿಚ್ಚ ಪೋಸ್ಟ್ ಮಾಡಿರುವ ಎರಡು ಟ್ವೀಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ . ಯಾಕಂದ್ರೆ ಈ ಟ್ವೀಟ್ ನಲ್ಲಿ ಖಡಕ್ ಆಗಿ ಒಂದು ಸಾಲನ್ನು ಪೋಸ್ಟ್ ಮಾಡುವ ಮೂಲಕ ಯಾರಿಗೋ ಸರಿಯಾಗಿ ಟಾಂಗ್ ಕೊಟ್ಟಹಾಗೆ ಇದೆ . ಸಾಮಾನ್ಯವಾಗಿ ಸಿನಿಮಾಗಳ ವಿಚಾರವನ್ನು ಮಾತ್ರ ಟ್ವೀಟ್ ಮಾಡೋ ಕಿಚ್ಚನ ಈ ಟ್ವೀಟ್ ಭಾರೀ ಅಚ್ಚರಿ ಮೂಡಿಸಿದೆ .
ಅಷ್ಟಕ್ಕೂ ಕಿಚ್ಚ ಮಾಡಿದ ಟ್ವೀಟ್ ನಲ್ಲಿ ಏನಿದೆ ಗೊತ್ತಾ ..?
ಎಲ್ಲೋ ಓದಿದ ಸುಂದರ ಸಾಲುಗಳು ಅಂತ ಹೇಳುತ್ತ “ ನಿಜವಾದ ಗಂಡಸು ಎನಿಸಿಕೊಳ್ಳಲು ಮದ್ಯಪಾನ ಮಾಡಬೇಕಾಗಿಲ್ಲ ಮತ್ತು ಕತ್ತಲು ಆಗಲಿ ಎಂದು ಕಾಯಬೇಕಾಗಿಲ್ಲ ” ಎಂದು ಬರೆದುಕೊಂಡಿದ್ದಾರೆ . ಇದರ ಜೊತೆಗೆ ಫೊಟೋ ಒಂದನ್ನೂ ಶೇರ್ ಮಾಡಿದ್ದಾರೆ . ಅದರಲ್ಲಿ “ ಕೇವಲ ಏನನ್ನೋ ಸಾಬೀತು ಪಡಿಸಲು ನಾನು ಫೈಟ್ ಮಾಡುವುದಿಲ್ಲ . ನನ್ನ ಎದುರಾಳಿ ಫೈಟ್ ಮಾಡಲು ಯೋಗ್ಯನಾಗಿದ್ದಾಗ ಮಾತ್ರ ನಾನು ಫೈಟ್ ಮಾಡುತ್ತೇನೆ ” ಎಂದು ಹೇಳಿದ್ದಾರೆ .
ಸುದೀಪ್ ತುಂಬಾ ಪ್ರಬುದ್ಧ ನಟ .. ಸಾಧಾರಣವಾಗಿ ಸುದೀಪ್ ಇಷ್ಟು ಖಡಕ್ ಆದ ಸಾಲುಗಳನ್ನು ಟ್ವೀಟ್ ಮಾಡುವುದು ತುಂಬ ಕಡಿಮೆ . ಕಡಿಮೆ ಎನ್ನುವುದಕ್ಕಿಂತನು ಮಾಡುವುದೆ ಇಲ್ಲ . ಆದ್ರೆ ಸುದೀಪ್ ದಿಢೀರನೆ ಹೀಗೆ ಪೋಸ್ಟ್ ಮಾಡಿರುವುದು ಯಾರಿಗೆ ಎನ್ನುವ ಅನುಮಾನ ಮೂಡುತ್ತಿದೆ . ಹೀಗಾಗಿ ಕಿಚ್ಚನ ಟ್ವೀಟ್ ಎಲ್ಲರ ಗಮನ ಸೆಳೆಯುತ್ತಿದೆ .
ಸುದೀಪ್ ನಟನೆಯ ಪೈಲ್ವಾನ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ . ಅಸಲಿಗೆ ಆಗಸ್ಟ್ 8 ರಂದು ಈ ಸಿನಿಮಾ ಬಿಡುಗಡೆಯಾಗಬೇಕಿತ್ತು . ಆದರೆ ಈಗ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದ್ದು ಸೆಪ್ಟೆಂಬರ್ 12 ರಂದು ಬಿಡುಗಡೆಯಾಗಲಿದೆ . ಪೈಲ್ವಾನ್ ರಿಲೀಸ್ ನ ತಯಾರಿಯಲ್ಲಿರುವ ಸುದೀಪ್ ದಿಢೀರನೆ ಎಲ್ಲೋ ಓದಿದ ಸುಂದರ ಸಾಲುಗಳು ಅಂತ ಪೋಸ್ಟ್ ಮಾಡಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ