ಕರ್ನಾಟಕ

ನಮ್ಮ ಬೆಂಗಳೂರು ಮಹಾನಗರಕ್ಕೆ ಸಿಕ್ತು,ಹೊಸದೊಂದು ನೊರೆ ಬಾಗ್ಯ!ಏನಿದು ನೊರೆ ಬಾಗ್ಯ ಅಂತೀರಾ?ಮುಂದೆ ಓದಿ…

By admin

August 19, 2017

ಮಳೆ ಬಂದ್ರೆ ಸಾಕು ಬೆಂಗಳೂರಿಗರಿಗೆ ಭಯ.ಯಾಕೆಂದ್ರೆ ಎಲ್ಲಿ ಏನಾಗುತ್ತೆ ಗೊತ್ತಿಲ್ಲ. ಯಾವ ಮೋರಿಯಿಂದ ನೀರು ಹೊರಬಂದು ಮನೆಗಳಿಗೆ ನುಗ್ಗುತ್ತೋ ಎನ್ನುವ ಭಯ. ಎಲ್ಲಿ ಟ್ರಾಫಿಕ್ ಜಾಮ್ ಆಗುತ್ತೋ ಅನ್ನೋ ಭಯ.ಇವೆಲ್ಲದರ ನಡುವೆ ಇನ್ನೊಂದು ಭಾಗ್ಯ ಬೆಂಗಳೂರಿಗರಿಗೆ ಸೇರಲಿದೆ.

ಶಾಕ್ ಆಯ್ತಾ ಯಾವ ಭಾಗ್ಯ ಅಂತ.ಅದೇ ಬೆಳ್ಳಂದೂರು ಕೆರೆಯ ನೊರೆ ಭಾಗ್ಯ.ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಳ್ಳಂದೂರು, ವರ್ತೂರು ಕೆರೆ ಕೋಡಿಗಳಲ್ಲಿ ಭಾರಿ ಪ್ರಮಾಣದಲ್ಲಿ ನೊರೆ ಕಾಣಿಸಿಕೊಂಡು ಗಾಳಿಯಲ್ಲಿ ತೇಲಾಡುತ್ತಿರುವುದರಿಂದ ವಾಹನ ಬಳಕೆದಾರರು, ಸಾರ್ವಜನಿಕರು ತೀವ್ರ ಪರದಾಡುವಂತಾಗಿದೆ.

ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಬಿಡಿಎ ಒಂದಿಷ್ಟು ಕ್ರಮ ಕೈಗೊಂಡಿದ್ದರೂ ನೊರೆ ಸಮಸ್ಯೆ ತೀವ್ರವಾಗಿದ್ದು, ಸ್ಥಳೀಯರು ಅನಾರೋಗ್ಯಕರ ವಾತಾವರಣದಲ್ಲೇ ದಿನ ಕಳೆಯುವಂತಾಗಿದೆ.

ಕೆಲವು ದಿನಗಳಿಂದ ಬಿದ್ದ ಬಾರೀ ಮಳೆಯಿಂದಾಗಿ ಬೆಳ್ಳಂದೂರು ಕೆರೆ, ವರ್ತೂರು ಕೆರೆ ಕೋಡಿಯಲ್ಲಿ ಭಾರಿ ಪ್ರಮಾಣದಲ್ಲಿ ನೊರೆ ಸಂಗ್ರಹವಾಗಿತ್ತು. ಮಳೆ ಜಾಸ್ತಿ ಬಿದ್ದಂತೆ ಕೆರೆಯಲ್ಲಿ ನೀರು ಹೆಚ್ಚಾಗಿ ನೊರೆ ಹೆಚ್ಚಾಗಿದೆ.

ಕೋಡಿ ಭಾಗದಲ್ಲಿ ಐದಾರು ಅಡಿ ಎತ್ತರದಷ್ಟು ದಟ್ಟ ನೊರೆ ಕಾಣಿಸಿಕೊಂಡು, ಗಾಳಿ ಬೀಸಿದ್ದರಿಂದ ರಸ್ತೆಯಲ್ಲಿ ಬಿದ್ದ ಅಗಾಧ ನೊರೆಯಿಂದ ವಾಹನಗಳಿಗೆ ತೊಂದರೆಯಾಗಿ ಸಾರ್ವಜನಿಕರಿಗೂ ತೊಂದರೆಯಾಗಿದೆ.

ರಸ್ತೆಯಲ್ಲಿ ಸಂಚರಿಸಲು ಸಹ ಜನರಿಗೆ ಭಯವಾಗುತ್ತಿದೆ…

ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು, ಆಟೋರಿಕ್ಷಾ, ತ್ರಿಚಕ್ರ ವಾಹನ ಚಾಲಕರು, ಪ್ರಯಾಣಿಕರು ನೊರೆಯಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡುಬಂತು.

ಏಕೆಂದರೆ ವಿಷಯುಕ್ತ ರಾಸಾಯನಿಕ ಸೇರ್ಪಡೆಯಿಂದಾಗಿ ನೊರೆ ಚರ್ಮಕ್ಕೆ ಸೋಕಿದ ಭಾಗದಲ್ಲಿ ಕೆಂಪು ಕಲೆಗಳಾಗಿ ತುರಿಕೆ ಕಾಣಿಸಿಕೊಳ್ಳುತ್ತಿರುವುದರಿಂದ ಸ್ಥಳೀಯರು ಈ ಭಾಗದಲ್ಲಿ ಓಡಾಡಲು ಆತಂಕಪಡುವಂತಾಗಿದೆ.

ಬಿಡಿಎ ಅಲ್ಪಾವಧಿ ಕ್ರಮವೆಂಬಂತೆ ಕೆರೆಯಲ್ಲಿ ಸಂಗ್ರಹವಾಗಿರುವ ಜೊಂಡು, ಕಳೆ ಸಸಿ ತೆರವು ಕಾರ್ಯ ಮುಂದುವರಿಸಿದೆ.

ದೀರ್ಘಾವಧಿ ಕ್ರಮವಾಗಿ ಯಾವ ವಿಧಾನದಡಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂಬ ಬಗ್ಗೆ ಬಿಡಿಎ ಆಯುಕ್ತರ ಅಧ್ಯಕ್ಷತೆಯ ತಜ್ಞರ ಸಮಿತಿಯು ಚರ್ಚೆ ನಡೆಸುತ್ತಿದ್ದು, ಸರ್ಕಾರ ಕೈಗೊಳ್ಳುವ ನಿರ್ಧಾರದಂತೆ ಮುಂದುವರಿಯಲು ನಿರ್ಧರಿಸಿದೆ.