ಉಪಯುಕ್ತ ಮಾಹಿತಿ

ನಮ್ಮ ತಲೆಕೂದಲಿಗೆ ಹೆಚ್ಚು ಉಪಯೋಗಿಸುವ “ಪ್ಯಾರಾಚ್ಯೂಟ್” ಕೊಬ್ಬರಿ ಎಣ್ಣೆ ಬಗ್ಗೆ ನಿಮಗೆ ಗೊತ್ತಾ.? ತಿಳಿಯಲು ಈ ಲೇಖನ ಓದಿ..

By admin

January 19, 2018

ಪ್ಯಾರಾಚ್ಯೂಟ್ ಕೋಕೊನಟ್ ಆಯಿಲ್ ಗೊತ್ತಲ್ಲವೇ. ನಾವು ಚಿಕ್ಕಂದಿನಿಂದ ಅದನ್ನು ನಮ್ಮ ತಲೆಕೂದಲಿಗೆ ಹಚ್ಚಿಕೊಳ್ಳುತ್ತಿದ್ದೇವೆ. ಚಳಿಗಾಲದಲ್ಲಾದರೆ ಅದರಲ್ಲಿರುವ ಎಣ್ಣೆ ಗಡ್ಡೆಕಟ್ಟಿಕೊಳ್ಳುತ್ತದೆ. ಇದರಿಂದ ಅದನ್ನು ಬಿಸಿ ಮಾಡಿ ಹಚ್ಚಿಕೊಳ್ಳುತ್ತಿದ್ದೆವು.. ನೆನಪಿದೆಯೇ.

ಮಾರುಕಟ್ಟೆಗೆ ಅದೆಷ್ಟೇ ಹೊಸ ಹೇರ್ ಆಯಿಲ್ ಬಂದರೂ ಪ್ಯಾರಾಚ್ಯೂಟ್ ಆಯಿಲನ್ನು ಮಾತ್ರ ಇಂದಿಗೂ ಬಹಳಷ್ಟು ಮಂದಿ ಬಳಸುತ್ತಿದ್ದಾರೆ. ಆದರೆ ಈ ಆಯಿಲ್ ಬಗ್ಗೆ ನಿಮಗೊಂದು ಸಂಗತಿ ಗೊತ್ತಾ.? ನಿಜವಾಗಿ ನಾವು ಈ ಎಣ್ಣೆಯನ್ನು ಹೇರ್ ಆಯಿಲ್ ಆಗಿ ಬಳಸುತ್ತಿದ್ದೇವಾದರೂ, ಪ್ಯಾರಾಚ್ಯೂಟ್ ಕೋಕೊನಟ್ ಹೇರ್ ಆಯಿಲ್ ಅಲ್ಲವಂತೆ. ಹೌದು ನೀವು ಕೇಳಿದ್ದು ನಿಜ. ಅದು ಕುಕಿಂಗ್ ಆಯಿಲ್ ಅಂತೆ. ಹೌದು ಸಾಕ್ಷಾತ್ ಅದನ್ನು ತಯಾರಿಸುವ ಕಂಪೆನಿಯೇ ಆ ಮಾತು ಹೇಳುತ್ತಿದೆ.

ಪ್ಯಾರಾಚ್ಯೂಟ್ ಕೋಕನಟ್ ಹೇರ್ ಆಯಿಲ್ ಅಲ್ಲ. ಅದು ಕುಕಿಂಗ್ ಆಯಿಲ್. ಬೇಕಿದ್ದರೆ ಅದರ ಪ್ಯಾಕಿಂಗ್ ಮೇಲೆ ನೋಡಿದರೆ ಕೋಕೊನಟ್ ಆಯಿಲ್ ಎಂದಿರುತ್ತದಾದರೂ..ಹೇರ್ ಆಯಿಲ್ ಎಂದು ಇರಲ್ಲ ಅಲ್ಲವೇ. ಅಷ್ಟೇ ಅಲ್ಲ, ಆ ಆಯಿಲ್ ಕುಕಿಂಗ್ ಆಯಿಲ್ ಎಂದು ಹೇಳಿ ಅದನ್ನು ತಯಾರಿಸುವ ಕಂಪೆನಿ ವಾದಿಸುತ್ತಾ ಸರಕಾರಕ್ಕೆ ತೆರಿಗೆ ವಂಚಿಸುತ್ತಿದೆ. ಯಾಕೆಂದರೆ…ಕುಕಿಂಗ್ ಆಯಿಲ್ಸ್ ಮೇಲೆ ಅಬಕಾರಿ ಸುಂಕ ಇರಲ್ಲ. ಕಾಸ್ಮೆಟಿಕ್ಸ್‌ನ ಒಂದು ಭಾಗವಾದ ಹೇರ್ ಆಯಿಲ್ ಮೇಲೆ ಈ ಸುಂಕ ಇರುತ್ತದೆ. ಆದಕಾರಣ ಮರಿಕೋ ಎಂಬ ಕಂಪೆನಿ ಏನು ಮಾಡುತ್ತಿದೆ ಎಂದರೆ… ತನ್ನ ಪ್ಯಾರಾಚ್ಯೂಟ್ ಕೋಕೋನಟ್ ಆಯಿಲನ್ನು ಕುಕಿಂಗ್ ಆಯಿಲ್ ಎಂದು ಹೇಳುತ್ತಿದೆ.

ಈ ಸಂಬಂಧ ಸರಕಾರ ಕೋರ್ಟ್ ಮೆಟ್ಟಿಲೇರಿತು. ಮರಿಕೋ ಕಂಪೆನಿ ತಯಾರಿಸುತ್ತಿರುವ ಪ್ಯಾರಾಚ್ಯೂಟ್ ಕೋಕೊನಟ್ ಆಯಿಲ್ ಕುಕಿಂಗ್ ಆಯಿಲ್ ಅಲ್ಲ, ಹೇರ್ ಆಯಿಲ್ ಎಂದು, ಆದಕಾರಣ ಅದರ ಮೇಲೆ ತೆರಿಗೆ ವಿಧಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಕೋರ್ಟನ್ನು ಸರಕಾರ ಕೋರಿದೆ. ಆದರೆ ಕೋರ್ಟ್ ಇದಕ್ಕೆ ವಿವರಣೆ ಕೇಳಿದರೆ ಸದರಿ ಮರಿಕೋ ಕಂಪೆನಿ ತನ್ನ ವಾದವನ್ನು ಮಂಡಿಸಿತು. ತಾವು ತಯಾರಿಸುತ್ತಿರುವ ಪ್ಯಾರಾಚ್ಯೂಟ್ ಆಯಿಲ್ ಕುಕಿಂಗ್ ಆಯಿಲ್ ಎಂದು, ಹೇರ್ ಆಯಿಲ್ ಅಲ್ಲವೆಂದು, ಅದರ ಮೇಲೆ ಎಲ್ಲೂ ಹೇರ್ ಆಯಿಲ್ ಎಂದು ಬರೆದಿಲ್ಲವೆಂದು, ಬೇಕಿದ್ದರೆ ಪರಿಶೀಲಿಸಬಹುದೆಂದು ವಾದಿಸಿತು.

ಆದರೆ 200 ಎಂಎಲ್‍ಗಿಂತಲೂ ಕಡಿಮೆ ಪ್ರಮಾಣದಲ್ಲಿ ಪ್ಯಾಕ್‌ ಶಾಚೆಗಳನ್ನು ಯಾಕೆ ಕೊಡುತ್ತಿದ್ದೀರಿ ಎಂದು ಕೇಂದ್ರ ಕೇಳಿದ್ದಕ್ಕೆ, ಅದಕ್ಕೆ ಮರಿಕೋ ಪ್ರತಿಕ್ರಿಯಿಸುತ್ತಾ, ಆ ರೀತಿಯ ಶಾಚೆಗಳು ಬಡ, ಮಧ್ಯಮ ವರ್ಗದ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಯಾರಿಸಿದೇವೆಂದು, ಅವರು ಆಯಿಲನ್ನು ಅಡುಗೆಗೆ ಕಡಿಮೆ ಪ್ರಮಾಣದಲ್ಲಿ ಬಳಸುತ್ತಾರೆಂದು, ಹಾಗಾಗಿ ದೊಡ್ಡ ಪ್ಯಾಕೆಟ್ ಅಗತ್ಯವಿಲ್ಲವೆಂದು, ಚಿಕ್ಕ ಪ್ಯಾಕೆಟ್ ಸಾಕೆಂದು ಹಾಗಾಗಿ ಅವನ್ನು ಬಳಸುತ್ತಿದ್ದೇವೆಂದು ಮರಿಕೋ ವಾದಿಸಿತು.