ದೇಶ-ವಿದೇಶ

ನಮ್ಮವರು 200 ಜನ ಸಾಯುವುದೇ ನಿಜವಾದಲ್ಲಿ,ಇನ್ನು ಅರ್ಧ ಗಂಟೆಯಲ್ಲಿ ಇಡೀ ಆಫ್ರಿಕಾ ಸುಟ್ಟುಬಿಡುತ್ತೇನೆ!ಎಂದಿತ್ತು ಈ ಪುಟ್ಟ ದೇಶ ಇಸ್ರೇಲ್…

By admin

July 11, 2017

ನಮ್ಮ ಕರ್ನಾಟಕಕ್ಕಿಂತ ಚಿಕ್ಕದಾಗಿರುವ ಪುಟ್ಟ ದೇಶ ಇಸ್ರೇಲ್, ಎಷ್ಟೇ ತೊಂದರೆಗಳು ಬಂದ್ರೂ ಕೂಡ ಎದೆಗುಂದದೆ, ಬಂದ ತೊಂದರೆಗಳನ್ನು ಎದುರಿಸಿ ಹೇಗೆ ಬೆಳೆದಿದೆ ಎಂದರೆ….ಆ ಇಸ್ರೇಲಿನ ಅದೆಷ್ಟೋ ಪಟ್ಟು ದೊಡ್ಡದಾಗಿರೋ ನಮ್ಮ ಭಾರತಕ್ಕೇನು ಆ ರೀತಿ ಬೆಳೆಯೋ ಅವಕಾಶಗಳೇ ಸಿಕ್ಕಿರಲಿಲ್ಲವಾ ? ಅನ್ನೋದು ನಮಗೆ ನಾವೇ ಕೇಳಿಕೊಳ್ಳಬೇಕಾದ ಮೊದಲ ಪ್ರಶ್ನೆ !

ಇದುವರೆಗೂ ಇಸ್ರೇಲಿನ ಮೇಲೆ 171 ಸೂಸೈಡ್ ಬಾಂಬರ್ ಅಟ್ಯಾಕ್ ಆಗಿವೆ ! ಪ್ರತಿ ಅಟ್ಯಾಕಿಗೆ ಪ್ಲಾನ್ ಹಾಕಿದವನು ಒಬ್ಬನೇ ಆಗಿರಲಿ ಅಥವಾ ರಾಷ್ಟ್ರವೇ ಆಗಿರಲಿ ಇಸ್ರೇಲಿಗರು ಬಿಟ್ಟದ್ದೇ ಇಲ್ಲ ವರ್ಷಗಟ್ಟಲೆ ಹುಡುಕಿದ್ದಾರೆ ಒಬ್ಬೊಬ್ಬ ಅಯೋಗ್ಯ ಉಗ್ರರನ್ನಂತೂ ಸತತ ಹತ್ತು ಹದಿನೆಂಟು ವರ್ಷಗಳಾದರೂ ಬಿಟ್ಟಿಲ್ಲ ಅವನು ಪಾತಾಳದಲ್ಲಡಗಿದ್ದರೂ ಹುಡುಕಿ ಬೆರಸಾಡಿ ಕತ್ತರಿಸಿದ ನಂತರವೇ ಅವರು ಸುಮ್ಮನಾಗಿರುವುದು.

ಇಸ್ರೇಲಿಗೆ ತೊಂದರೆ ಕೊಟ್ಟರೆಂಬ ಕಾರಣಕ್ಕೆ ಕೇವಲ ಒಂದು ದೇಶವಲ್ಲ…….”ಈಜಿಪ್ಟ್.ಜೋರ್ಡಾನ್.ಟ್ರಾನ್ಸ್ .ಸಿರಿಯಾ.ಲೆಬನಾನ್.ಸೌದಿ ಅರೇಬಿಯಾ.ಹೋಲಿವರ್.ಅಲಾ.ಸೋವಿಯತ್ ಯೂನಿಯನ್.ಪಲ್ವೋ.ಅಲ್ಜೀರಿಯಾ.ಮೊರಕ್ಕೋ.ಕ್ಯೂಬಾ.ಜಮ್ಮೌಲ್.ಅಮಾಲ್.ಉನಲು.ಹಮಾಸ್.ಪ್ವಾ “ಇವಿಷ್ಟೂ ದೇಶಗಳ ಮೇಲೆ ಯುದ್ದವಿಮಾನಗಳೊಂದಿಗೆ ತಿರುಗಿ ಬಿದ್ದು ಕಿರಲಿಕೊಂಡು ಓಡುವಂತೆ ಮಾಡಿದ್ದಾರೆ. ಇಲ್ಲಿ ಓದಿ:- 2000 ವರ್ಷಗಳಿಂದ ಭಾರತದ ರಾಜನಿಗಾಗಿ ಕಾಯುತ್ತಿತ್ತು ಈ ದೇಶ!!!

ಅದೂ ಸಾಲದೆಂಬಂತೆ 70 ಒಬ್ಬಂಟಿ ಉಗ್ರರನ್ನ ಟಾರ್ಗೆಟ್ ಮಾಡಿ ಮೊಸ್ಸಾದ್ ಕಡೆಯಿಂದ ಕೊಲ್ಲಿಸಿದರು. ಯಾಕೆಂದರೆ ಮತ್ತೊಮ್ಮೆ ಯಾರೊಬ್ಬ ಉಗ್ರಗಾಮಿ ತಮ್ಮ ದೇಶದ ಕಡೆ ಕಣ್ಣು ಹಾಕಿದರೆ ನಾನೆಲ್ಲಿದ್ದರೂ ನನ್ನ ಸಾವು ಖಚಿತ ಎಂದು ಜ್ಞಾನೋದಯ ಮಾಡಿಸಲಿಕ್ಕಾಗಿ ಹಾಗೂ ಅದೇ ಹಾದಿಯಲ್ಲೇ ಆತನನ್ನು ಕಳುಹಿಸಿದ ದೇಶವನ್ನೂ ಅಟ್ಟಾಡಿಸಿಕೊಂಡು ಹೊಡೆದಿದೆ .ಅದು ಮಾಡಿರುವ ಲೀಗಲ್ ಇಲ್ಲೀಗಲ್ ಮೊಸ್ಸಾದ್ ಆಪರೇಸನ್ನುಗಳಿಗಂತೂ ಲೆಕ್ಕವೇ ಇಲ್ಲ .

ಅವರಿಗೆ ಗೊತ್ತಿರುವುದು ಅದೊಂದೇ ಇಸ್ರೇಲನ್ನು ಯಾರೂ ಕೆಣಕಬಾರದು.ಇಸ್ರೇಲ್ ಒಳಗಡೆ ಒಂದೇ ಒಂದು ಮಗುವಿನ ಕಿರುಬೆರಳಿಗೆ ಯಾವೊಬ್ಬ ಗಾಯ ಮಾಡಿದರೂ ಅವನನ್ನು ಬಿಡುವ ಮಾತೇ ಇಲ್ಲ ಅಷ್ಟೇ ! ಇದೆಲ್ಲಾ ಬದಿಗಿಡಿ ಒಂದು ಕಾಲದಲ್ಲಿ ಬಾರ್ಡರಿನಲ್ಲಿ ಕಾಯುತ್ತಿದ್ದ ಇಸ್ರೇಲ್ ಸೈನಿಕರತ್ತ ದಪ್ಪ ಕಣ್ಣು ಬಿಟ್ಟು ಗುರಾಯಿಸಿದ್ದಕ್ಕಾಗಿಯೇ ಜೊರ್ಡಾನಿನ 200 ತಲೆಗಳನ್ನು  ಉಡಾಯಿಸಿ ವಿಶ್ವಸಂಸ್ಥೆಯ ಮುಂದೆ ಅಪರಾಧಿಯಾಗಿಯೂ ನಿಂತಿತ್ತು ಇಸ್ರೇಲ್ ! ಈ ವಿಶ್ವಸಂಸ್ಥೆಯಿಂದ ಬೈಸಿಕೊಳ್ಳುವುದು ಇಸ್ರೇಲಿಗೇನೂ ಹೊಸದಲ್ಲ.

ಇಷ್ಟೆಲ್ಲಾ ಪುರಾಣ ಓದಿದಿರಲ್ಲಾ ಇಲ್ಲಿ ಎಲ್ಲಾದರೂ ಆ ಇಸ್ರೇಲಿನ ಪ್ರಧಾನಿ ಹೆಸರು ಬಂದಿದೆಯಾ ? ಯಾಕೆ ಪ್ರಧಾನಿ ಹೆಸರು ಬಂದಿಲ್ಲಾ ಎಂದರೆ ಅವರಿಗೆ ಮುಖ್ಯವಾಗಿರುವುದು 70ವರ್ಷ ಬದುಕಿ ಸಾಯುವ ಪ್ರಧಾನಿಯಲ್ಲ ! …..ನೆನಪಿರಲಿ ! ಅವರಿಗೆ ಮುಖ್ಯವಾಗಿರುವುದು ದೇಶ !!

ನಾವೀಗ ತಯಾರಿಸೋ ಒಂದು ಬಾಂಬು 50.000 ಸಾವಿರ ಇಸ್ರೇಲಿಗಳನ್ನ ಸಾಯಿಸತ್ತೆ ಅಂತ ಸುಮ್ಮನೆ ಡೈಲಾಗ್ ಹೊಡೆದದ್ದಕ್ಕೇ ಹೋಗಿ ಇರಾಕ್ ಸುಟ್ಟರಲ್ಲ ಆಗ ಸುಟ್ಟದ್ದೂ ಕೂಡ ಇಸ್ರೇಲ್ ಅಷ್ಟೇ! ನಮ್ ಪ್ರಧಾನಿ ಸುಟ್ಟಿದ್ದು ಅಂತ ಅವರೆಲ್ಲೂ ಬರೆದುಕೊಂಡಿಲ್ಲ.

ವಿಮಾನ ಹೈಜಾಕ್ ಮಾಡಿದಾಗ “ಸಂಧಾನದ ಮಾತೇ ಇಲ್ಲ ! ನಮ್ಮವರು 200 ಜನ ಹೈಜಾಕ್ ಆಗಿರುವವರು ಸಾಯುವುದೇ ನಿಜವಾದಲ್ಲಿ …ಇನ್ನು ಅರ್ಧ ಗಂಟೆಯಲ್ಲಿ ಇಡೀ ಆಫ್ರಿಕಾ ಸುಟ್ಟುಬಿಡುತ್ತೇನೆ !. ಎಂದು ಕಿರುಚಿಕೊಂಡನಲ್ಲಾ ಆ ಇಸ್ರೇಲ್ ಪ್ರಧಾನಿ ಇಝಾಕ್ ರಬಿನ್ ಆಗಲೂ ಕೂಡ ಎಂಟಬ್ಬೇ ಆಪರೇಶನ್ ಮಾಡಿದ್ದು ಇಸ್ರೇಲ್ ಎಂದು ಇತಿಹಾಸದ ಪುಟಗಳಲ್ಲಿ ಅವರು ಬರೆದುಕೊಂಡರೇ ಹೊರತು “ಇಝಾಕ್ ರಬಿನ್ “ಮಾಮ ಮಾಡಿದ್ದು ಇದು ಅಂತ ಬರೆದುಕೊಂಡಿಲ್ಲ ಅವರು.

ಇದುವರೆಗೂ ಭಾರತದಲ್ಲಿ ಹತ್ತುಸಾವಿರದಷ್ಟು ಉಗ್ರರ ದಾಳಿಗಳಾಗಿವೆ ಆದರೆ ನಮ್ಮ ದೇಶದ ಮಗುವಿಗೆ ಗಾಯ ಮಾಡಿದ ದೇಶವನ್ನು ಇನ್ನರ್ಧ ಗಂಟೆಯಲ್ಲಿ ಸಿಗಿದುಬಿಡುತ್ತೇನೆ ಎಂದ ಒಬ್ಬ ಪ್ರಧಾನಿ ಹೆಸರು ಹೇಳಿ ನೊಡೋಣ ! ಇಲ್ಲ ಅನ್ನೋದೇ ಸರಿಯಾದ ಉತ್ತರ.

ಹಾಗೂ ನೋಡುವುದಾದರೆ, ಲಾಲ್ ಬಹದ್ದೂರ್ ಶಾಸ್ತ್ರಿ ಇದೇ ಇಸ್ರೇಲ್ ವ್ಯಕ್ತಿತ್ವದವರು, ಒಂದು ಸಲ ಪಾಕಿಸ್ತಾನವನ್ನು ಮತ್ತೊಮ್ಮೆ ಚೀನಾವನ್ನು ತಲೆ ಬಾಗಿಸಿದ್ದರು .ಮತ್ತಾರೂ ಇಲ್ಲವೇ ಇಲ್ಲ .

“ಒಂದು ಉಗ್ರರ ದಾಳಿ ನಡೆದರೆ ನಮ್ಮತನವನ್ನು ಸಾಬೀತುಪಡಿಸಿಕೊಳ್ಳಲು ಇದು ಒಂದು ಅವಕಾಶ ” ಎಂದು ನಮ್ಮವರು ಇದುವರೆಗೂ ತಿಳಿದೇ ಇಲ್ಲ ಅಂತ ನಾವು ಅಂದುಕೊಂಡರೆ ನಾವೇ ದಡ್ಡರಾಗಿಬಿಡುತ್ತೇವೆ ಇವರಿಗೆ ಎಲ್ಲವೂ ಗೊತ್ತಿದೆ ಆದರೆ ಯುದ್ಧ ಮಾಡಿದರೆ ಅಥವಾ ಉಗ್ರರನ್ನು ಅಟ್ಟಾಡಿಸಿಕೊಂಡು ಹೊಡೆಯಿರಿ ಎಂದು ಆಣತಿ ಕೊಟ್ಟರೆ ತಮ್ಮ ಕುರ್ಚಿಗೆ ಸಂಚಕಾರ ಎಂದು ಚೆನ್ನಾಗಿ ತಿಳಿದಿದ್ದಾರೆ ಅಷ್ಟೇ !

ಕೃಪೆ:-ಕಂಟೆಂಟ್ ಫ್ರಮ್ ಅಂತರ್ಜಾಲ..