ದೇಶದ ಎರಡನೇ ಅತಿ ದೊಡ್ಡ ರೈಲ್ವೆ ಓವರ್ ಬ್ರಿಡ್ಜ್ ಈ ತಿಂಗಳ ಅಂತ್ಯಕ್ಕೆ ಉದ್ಘಾಟನೆಯಾಗುತ್ತಿದೆ.
ಪಶ್ಚಿಮ ಬಂಗಾಳದ ಬುರ್ದ್ವಾನ್ ಜಂಕ್ಷನ್ ನಲ್ಲಿ ನಾಲ್ಕು ಪಥದ ಕೇಬಲ್ ಸ್ಟೇಯಡ್ ರೈಲ್ವೆ ಮೇಲು ಸೇತುವೆ ನಿರ್ಮಾಣವನ್ನು ಭಾರತೀಯ ರೈಲ್ವೆ ಪೂರ್ಣಗೊಳಿಸಿದೆ. ಇದನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಸೆಪ್ಟೆಂಬರ್ 30 ರಂದು ಉದ್ಘಾಟಿಸಲಿದ್ದಾರೆ.
ಸಂಚಾರಕ್ಕೆ ಒಂದು ದಿನವೂ ವ್ಯತ್ಯಯವಾಗದಂತೆ 188.43 ಮೀಟರ್ ಕೇಬಲ್ ಸ್ಟೇಯ್ಡ್ ಓವರ್ ಬಿಡ್ಜ್ ಕಾಮಗಾರಿಯನ್ನು 197 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
300 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಶೇ. ಐವತ್ತು -ಐವತ್ತು ಅನುಪಾತದಲ್ಲಿ ರಾಜ್ಯ ಸರ್ಕಾರ ಮತ್ತು ರೈಲ್ವೆ ಸಚಿವಾಲಯ ಭರಿಸಿದೆ.