ಜ್ಯೋತಿಷ್ಯ

ದಿನ ಭವಿಷ್ಯ ಸೋಮವಾರ..ನಿಮ್ಮ ನಕ್ಷತ್ರ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ…

By admin

March 26, 2018

ಸೋಮವಾರ, 26/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ಹೆಚ್ಚಿನ ಆದಾಯ ಬರಲಿದೆ. ಶುಭಮಂಗಲ ಕಾರ್ಯಗಳು ನಡೆದಾವು. ವಾಹನ ಮಾರಾಟದಿಂದ ಲಾಭ. ದೇಹಾರೋಗ್ಯದಲ್ಲಿ ಸಮಸ್ಯೆ ಇದ್ದು ಆರೋಗ್ಯದ ಭಾಗ್ಯ ಕಾಳಜಿ ಇರಲಿ. ಇವತ್ತಿನ ಕೆಲಸ ಕಾರ್ಯಗಳಲ್ಲಿ ಗೆಲುವು ನಿಮ್ಮದೆ.

ವೃಷಭ :-

ಆರ್ಥಿಕ ಸ್ಥಿತಿಯಲ್ಲಿ ಸಮತೋಲನ.ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸಕಾಲ. ವೃತ್ತಿರಂಗದಲ್ಲಿ ಉತ್ತಮ ಅಭಿವೃದ್ಧಿ. ಬಂಧುಗಳ ಸಹಕಾರ ದೊರೆಯಲಿದೆ. ಪರಿಶ್ರಮದ ಬಲದಿಂದಲೇ ಉದ್ಯೋಗ ಲಾಭ. ಹಣಕಾಸಿನ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ದೇಹಾರೋಗ್ಯ ಸುಧಾರಿಸಲಿದ್ದು ಕಾಳಜಿ ಇರಲಿ.

ಮಿಥುನ:

ಕಲಾವಿದರುಗಳಿಗೆ ಹೆಚ್ಚಿನ ಅವಕಾಶ. ಆರ್ಥಿಕವಾಗಿ ಉತ್ತಮ ಫ‌ಲ. ಮದುವೆ ಕೆಲಸಗಳಿಗೆ ಓಡಾಟ. ಸಾಂಸಾರಿಕ ಜೀವನ ಉತ್ತಮ. ವ್ಯಾಪಾರ ವರ್ಗದವರಿಗೆ ಅಧಿಕ ಲಾಭ.

ಕಟಕ :-

ಸ್ವಂತ ಉದ್ಯಮದವರಿಗೆ ಉತ್ತಮ ಲಾಭ. ಹಣಕಾಸಿನ ಪರಿಸ್ಥಿತಿ ಸಾಧಾರಣ. ಮೇಲಾಧಿಕಾರಿಗಳಿಂದ ಕಿರಿಕಿರಿ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ವಿಶ್ವಾಸ ಬೇಡ.

 

 ಸಿಂಹ:

ಪ್ರಭಾವಿ ವ್ಯಕ್ತಿಗಳೊಂದಿಗಿನ ಒಡನಾಟ. ಕೋಪ ತಾಪಗಳಿಂದ ದೇಹಾರೋಗ್ಯದ ಮೇಲೆ ಪರಿಣಾಮ. ಅನ್ಯಾಯವನ್ನು ಕಂಡು ಸಹಿಸಲಾರದ ನೀವು ನಿಮ್ಮ ಎದುರಾಳಿಯನ್ನು ಎದುರಿಸಲು ಹೆಚ್ಚಿನ ಆತ್ಮಸ್ಥೈರ್ಯದಿಂದ ಹೋರಾಟ ಮಾಡುವಿರಿ. ಸರ್ಕಾರದ ಉನ್ನತ ಹುದ್ದೆಗಳಲ್ಲಿ ಕೆಲಸಗಳನ್ನು ನಿರ್ವಹಿಸುವ ಅವಕಾಶ.

ಕನ್ಯಾ :-

ಗೃಹ ನಿರ್ಮಾಣ ಕೆಲಸಗಳು ಶೀಘ್ರಗತಿಯಲ್ಲಿ ಸಾಗುವವು. ಸರಕಾರಿ ಕೆಲಸಕಾರ್ಯಗಳು ಮುನ್ನಡೆ ಇರಲಿವೆ. ಸಮಾಧಾನಕರವಾಗಿ ಕೆಲಸಗಳನ್ನು ನಿರ್ವಹಿಸಿ. ವೃತ್ತಿರಂಗದಲ್ಲಿ ಜಾಗ್ರತೆ ಇರಲಿ. ಹಣಕಾಸು ಕೂಡಾ ನಿಮಗೆ ಒದಗಿ ಬರುವುದು. ಸಾಂಸಾರಿಕವಾಗಿ ಹೊಂದಾಣಿಕೆ ಅವಶ್ಯಕ. ದಾಯಾದಿಗಳಿಂದ ಮಾತುಗಳ ಬಗ್ಗೆ ತಲೆ ಕೆಡಿಸಕೊಲ್ಲಬೇಡಿ.

ತುಲಾ:

ಮಿತ್ರರ ಸಮಾಗಮನ ಕಾರ್ಯಸಿದ್ಧಿ.ನಿವೇಶನ ಖರೀದಿ, ಗೃಹ ನಿರ್ಮಾಣ ಕಾರ್ಯಗಳಲ್ಲಿ ಚುರುಕು. ಮಾನಸಿಕ ಒತ್ತಡ ಹೆಚ್ಚಾಗಲಿದೆ. ಧಾರ್ಮಿಕ ಕಾರ್ಯಗಳಿಗೆ ವಿಳಂಬ.

ವೃಶ್ಚಿಕ :-

ಕೈಗೊಂಡ ಕೆಲಸ ಕಾರ್ಯಗಳು ನೆರವೇರಲಿವೆ. ನವ ದಂಪತಿಗಳಿಗೆ ಸಂತಾನ ಭಾಗ್ಯ. ಶತ್ರುಗಳ ಕಾಟಗಳಿಂದ ಬರಬೇಕಾದ ಸಹಕಾರ ತಪ್ಪಿ ಹೋಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರ. ಒಳ್ಳೆಯ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡಿ. ಆಪ್ತರಿಗೆ ನೆರವು ನೀಡುವ ಸಾಧ್ಯತೆ.

 

ಧನಸ್ಸು:

ಉದ್ಯಮವನ್ನು ವಿಸ್ತರಿಸುವುದಕ್ಕೆ ಸಕಾಲ. ಕೋರ್ಟು ಕಚೇರಿ ಕಾರ್ಯಗಳಲ್ಲಿ ಮುನ್ನಡೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಕ್ಕಳ ವಿಶೇಷ ಸಾಧನೆ ಸಾಧ್ಯತೆ. ಹಳೆಯ ಗೆಳೆಯರ ಭೇಟಿ. ಅಗತ್ಯಕ್ಕೆ ತಕ್ಕಷ್ಟು ಹಣ ಖರ್ಚು ಮಾಡಿ.ಆರೋಗ್ಯದ ಬಗ್ಗೆ ವಾಹನ ಸಂಚಾರದ ಬಗ್ಗೆ ಜಾಗ್ರತೆ ಇರಲಿ.

ಮಕರ :-

ತೈಲ ಉತ್ಪನ್ನಗಳ ಮಾರಾಟಗಾರರಿಗೆ ಉತ್ತಮ ಲಾಭ. ಪ್ರವಾಸದಿಂದ ಆರೋಗ್ಯ ಕೆಡಲಿದೆ. ಹೊಸ ವ್ಯಕ್ತಿಗಳ ಆಗಮನದಿಂದಾಗಿ ಮನೆಯಲ್ಲಿ ಸಂತೋಷ. ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತೆ ನೀವು ಶ್ರಮಪಟ್ಟು ಮಾಡಿದ ಕೆಲಸದ ಲಾಭಾಂಶವು ಪರರ ಪಾಲಾಗುವುದು. ಕೆಲಸಕಾರ್ಯಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿ.

ಕುಂಭ:-

ಸಂಸಾರದಲ್ಲಿ ನೆಮ್ಮದಿ ಇದ್ದರೂ ನಿರೀಕ್ಷಿತ ಸಮಾಧಾನ ಸಿಗದು.ಮಂಗಲ ಕಾರ್ಯಗಳಲ್ಲಿ ಭಾಗಿ. ಪತ್ರಿಕೋದ್ಯಮಿಗಳಿಗೆ, ಪ್ರಾಧ್ಯಾಪಕರುಗಳಿಗೆ ಮನ್ನಣೆ. ದೇವರ ಅನುಗ್ರಹ ನಿಮ್ಮ ಕಡೆ ಇರುವುದರಿಂದ ಹೆಚ್ಚಿಗೆ ಚಿಂತಿಸುವ ಅಗತ್ಯವಿಲ್ಲ.  ಮನೆಯ ಸಾಮಗ್ರಿಗಳಿಗಾಗಿ ಧನವ್ಯಯ.

ಮೀನ :-

ಕೆಲಸಕಾರ್ಯಗಳಿಗಾಗಿ ಓಡಾಟ ಹಾಗೂ ಧನವ್ಯಯ.ಯಂತ್ರೋಪಕರಣಗಳ ವ್ಯವಹಾರದಿಂದಾಗಿ ಉತ್ತಮ ಲಾಭ. ಯೋಗ್ಯ ವಯಸ್ಕರಿಗೆ ಕಂಕಣಬಲ. ಹಲವು ತಾಪತ್ರಯಗಳ ನಡುವೆಯೂ ಹಿಡಿದ ಕೆಲಸವನ್ನು ಮುಗಿಸುವ ಆತುರತೆ ತೋರುವಿರಿ.