ಜ್ಯೋತಿಷ್ಯ

ದಿನ ಭವಿಷ್ಯ ಶುಕ್ರವಾರ,ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ….ಶೇರ್ ಮಾಡಿ…

By admin

August 30, 2019

ಮೇಷ ಹಳೆಯ ಷೇರುಗಳ ಮಾರಾಟ ಅಥವಾ ಖರೀದಿಗೂ ಮುನ್ನ ಎಲ್ಲಾ ರೀತಿಯ ಸಾಧಕ ಬಾಧಕಗಳನ್ನು ಲೆಕ್ಕಾಚಾರ ಹಾಕಿ. ಪೂರ್ವ ಯೋಜನೆಯಿಲ್ಲದೆ ಹಣ ಹೂಡಿದಲ್ಲಿ ಅಧಿಕ ಹಾನಿಯನ್ನು ಅನುಭವಿಸುವಿರಿ.

ವೃಷಭ ಕೆಲಸದ ಸ್ಥಳದಲ್ಲಿ ಉತ್ಸಾಹದಾಯಕ ಹಾಗೂ ಚೈತನ್ಯದಾಯಕ ಪ್ರಚೋದಕ ಬೆಳವಣಿಗೆಗಳು ಉಂಟಾಗುವವು. ನಿಮಗೆ ಸಹಾಯ ಸಹಕಾರ ನೀಡಿದ ಗುರುಹಿರಿಯರನ್ನುಗೌರವಿಸಿ ಮುಂದೆ ಉತ್ತಮ ದಿನಗಳಿವೆ.

ಮಿಥುನ ಆರೋಗ್ಯದ ವಿಷಯದಲ್ಲಿ ಉದಾಸೀನ ಬೇಡ. ಸಣ್ಣಪುಟ್ಟ ಜ್ವರಾದಿಗಳು ಬಂದರೂ ನಿಮ್ಮ ಮನೆ ವೈದ್ಯರ ಸಲಹೆ ಪಡೆಯಿರಿ. ದೈವಬಲ ಇರುವುದರಿಂದ ಅತಿ ಚಿಂತೆ ಬೇಡ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಕರ್ಕಾಟಕ ಕನಸು ಕಾಣುತ್ತಿರುವ ಪ್ರೇಮಿಗಳು ಪ್ರಯೋಗ ಶೀಲತೆಯಿಂದ ನಡೆದರೆ ಯಶಸ್ಸು ಕಾಣುವಿರಿ. ಉಭಯ ಮನೆತನದ ಹಿರಿಯರ ಒಪ್ಪಿಗೆ ಪಡೆಯುವುದರಿಂದ ಜೀವನ ಉತ್ತಮವಾಗಿರುವುದು.

ಸಿಂಹ ಕಾರಣವಿರದ ಚಿಂತೆ ಹಾಗೂ ಖಿನ್ನತೆಗಳನ್ನು ಬಿಟ್ಟು ಗೆಳೆಯರೊಂದಿಗೆ ಚರ್ಚಿಸಿ. ಒಳಿತಿನ ದಾರಿ ನಿಮಗೆ ಗೋಚರವಾಗುವುದು. ಆಂಜನೇಯ ದೇವಸ್ಥಾನಕ್ಕೆ ತಪ್ಪದೇ ಹೋಗಿ ಬನ್ನಿ. ಭಗವಂತ ನಿಮಗೆ ಅಭಯ ನೀಡುವನು.

ಕನ್ಯಾ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಇರಲಿ. ಉದರ ಶೂಲೆ ಸಂಬಂಧ ನಿರ್ಜಲೀಕರಣದಿಂದಾಗಿ ಸುಸ್ತಾಗುವಿರಿ. ಅದಕ್ಕೆ ಸೂಕ್ತ ಔಷಧೋಪಚಾರ ನಡೆಸಿ. ಹಣಕಾಸಿನ ಸ್ಥಿತಿ ಸಾಧಾರಣ ಮಟ್ಟದ್ದಾಗಿರುತ್ತದೆ.

ತುಲಾ ತಾಂತ್ರಿಕ ವರ್ಗ ಮತ್ತು ವೈದ್ಯಕೀಯ ರಂಗದಲ್ಲಿರುವವರಿಗೆ ವಿಶೇಷ ಅನುಕೂಲತೆಗಳು ಉಂಟಾಗುವವು. ನಿಮ್ಮ ಸಾಮಾಜಿಕ ಕಾಳಜಿ ಮತ್ತು ಸೇವೆಯನ್ನುಜನರು ಕೊಂಡಾಡುವರು.

ವೃಶ್ಚಿಕ ಸರ್ಕಾರಿ ಕೆಲಸ ಕಾರ್ಯಗಳಲ್ಲಿನ ಕಾರ್ಯವಿಳಂಬತೆಯನ್ನು ತಪ್ಪಿಸಿಕೊಳ್ಳಲು ಕುಲದೇವತಾ ಪ್ರಾರ್ಥನೆ ಮಾಡಿ. ಭಿಕ್ಷುಕರಿಗೆ ಮತ್ತು ಬಡವರಿಗೆ ಚಿತ್ರಾನ್ನ ನೀಡಿ. ಒಳಿತಾಗುವುದು.

ಧನು ವರಮಾನ ತೆರಿಗೆ ಇಲಾಖೆ ಬಗೆಗಿನ ಕೆಲಸ ಕಾರ್ಯಗಳನ್ನೆಲ್ಲ ಶಿಸ್ತಿನಿಂದ ಪೂರೈಸಿ. ವರ್ಷದ ಆಯವ್ಯಯ ಪಟ್ಟಿಯನ್ನು ತಯಾರಿಸಿ. ಅದರ ಬಗ್ಗೆ ಪೂರ್ವ ತಯಾರಿ ಮಾಡಿಟ್ಟುಕೊಳ್ಳಿ.

ಮಕರ ಒಡವೆ, ಆಭರಣ, ಬೆಲೆ ಬಾಳುವ ವಸ್ತುಗಳ ಬಗ್ಗೆ ಎಚ್ಚರದಿಂದಿರಿ. ಒಡವೆಯನ್ನು ಒಂದೆಡೆ ಇಟ್ಟು ಮರೆಯುವ ಸ್ವಭಾವ ಇರುವ ನೀವು ಆಭರಣಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಕುಂಭ ನಿಮ್ಮ ಕೆಲಸ ಕಾರ್ಯಗಳನ್ನು ಸಾರ್ಥಕವಾಗಿಸಲು ನಿಮ್ಮ ಮಕ್ಕಳು ನಿಮಗೆ ಸಹಕಾರಿಯಾಗಿ ನಿಲ್ಲುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಬೆಳ್ಳಗೆ ಇರುವುದೆಲ್ಲಾ ಹಾಲು ಎಂದು ನಂಬಿ ಮೋಸ ಹೋಗದಿರಿ.

ಮೀನ ನೀವು ಎಷ್ಟೇ ಎಚ್ಚರಿಕೆ ವಹಿಸಿದರೂ ಕಚೇರಿಯ ಕೆಲಸ ಕಾರ್ಯಗಳಲ್ಲಿ ತಪ್ಪುಗಳು ನುಸುಳುತ್ತವೆ. ಅದನ್ನು ಪ್ರಾಂಜ್ವಲ ಮನಸ್ಸಿನಿಂದ ಒಪ್ಪಿಕೊಳ್ಳುವುದರಿಂದ ಮೇಲಾಧಿಕಾರಿಗಳ ಮೆಚ್ಚುಗೆ ಪಡೆಯುವಿರಿ.