ಜ್ಯೋತಿಷ್ಯ

ದಿನ ಭವಿಷ್ಯ ಮಂಗಳವಾರ..ಈ ದಿನದ ನಿಮ್ಮ ರಾಶಿ ಭವಿಷ್ಯ ಶುಭವೋ ಅಶುಭವೋ ನೋಡಿ ತಿಳಿಯಿರಿ…ಶೇರ್ ಮಾಡಿ…

By admin

April 10, 2018

ಮಂಗಳವಾರ, 10/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್  ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672

ಸೂರ್ಯೋದಯ06:12:17 ಸೂರ್ಯಾಸ್ತ18:44:31 ಹಗಲಿನ ಅವಧಿ12:32:14 ರಾತ್ರಿಯ ಅವಧಿ11:26:50 ಋತು:ವಸಂತ ಆಯನ:ಉತ್ತರಾಯಣ ಸಂವತ್ಸರ:ವಿಲಂಬಿ ಸಂವತ್ಸರ (ಉತ್ತರ):ವಿರೋಧಿಕೃತ್ ಪಕ್ಷ : ಕೃಷ್ಣ ಪಕ್ಷ ತಿಥಿ : ದಶಮಿ ನಕ್ಷತ್ರ : ಶ್ರಾವಣ ಯೋಗ : ಸಾಧ್ಯ ಪ್ರಥಮ ಕರಣ : ವಾಣಿಜ್ಯ ಸೂರ್ಯ ರಾಶಿ : ಮೀನ ಚಂದ್ರ ರಾಶಿ : ಮಕರ

ಮುಹೂರ್ತ

ರಾಹು ಕಾಲ15:36 – 17:11ಅಶುಭ ಯಮಘಂಡ ಕಾಲ09:20 – 10:54ಅಶುಭ ಗುಳಿಕ ಕಾಲ12:28 – 14:02 ಅಭಿಜಿತ್12:03 -12:53ಶುಭ ದುರ್ಮುಹೂರ್ತ08:43 – 09:33ಅಶುಭ ದುರ್ಮುಹೂರ್ತ23:20 – 24:10*ಅಶುಭ

ಮೇಷ:

ಕೆಲವು ಕಾರಣಗಳಿಂದ ಬಹಳ ಕಾಲದಿಂದ ತಟಸ್ಥಗೊಂಡಿದ್ದ ನಿಮ್ಮ ವ್ಯಾಪಾರ, ಸ್ವಉದ್ಯೋಗ ಯೋಜನೆಗಳಿಗೆ ಚಾಲನೆ ದೊರೆಯುವು? ?  ?  ಥದು ಮತ್ತು ಅದರಿಂದ ಸಾಕಾರಸಿದ್ದಿಯು ಲಭಿಸುವುದು. ಆಂಜನೇಯ ಸ್ತೋತ್ರ ಪಠಿಸಿ.

ವೃಷಭ :-

ಬಯಸಿದ ಕಾರ್ಯವು ಈಡೇರಲು ಅಧಿಕ ಶ್ರಮ ಪಡುತ್ತಿದ್ದೀರಿ. ಆದರೆ ಯಶಸ್ಸು ಮರೀಚಿಕೆ ಆಗುತ್ತಿದೆ.ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ ಒಳಿತಾಗುವುದು.

ಮಿಥುನ:

ನೂತನ ಗೆಳೆಯರ ಸೇರ್ಪಡೆ ಆಗುವರು. ಅವರೊಂದಿಗಿನ ಮಾತುಕತೆಯು ಹೊಸ ಉದ್ಯಮಕ್ಕೆ ನಾಂದಿ ಹಾಡಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಕಿರಿಕಿರಿ ಸಂಭವ ಇದೆ. ಶಿವನ ಮಂತ್ರವನ್ನು ಪಠಿಸಿ.

ಕಟಕ :-

ಮನುಷ್ಯನು ಮಾಡುವ ಕೆಲಸ ಯಶಸ್ವಿಯಾಗುವುದಕ್ಕೆ ಕೇವಲ ಲೌಕಿಕ ಪ್ರಯತ್ನ ಸಾಲದು. ದೈವದ ಆಶೀರ್ವಾದವೂ ಬೇಕು. ದೈವ ಕೃಪೆ ಇದ್ದರೆ ಎಲ್ಲವು ಸಾರ್ಥಕ ಹಾಗಾಗಿ ಗ್ರಹಗಳ ಒಲುಮೆಗಾಗಿ ಕುಲದೇವತಾ ಪ್ರಾರ್ಥನೆ ಮಾಡಿರಿ.

 ಸಿಂಹ:

ಮನುಷ್ಯ ಮನುಷ್ಯನ ಸಂಬಂಧದ ನೆಲೆಯನ್ನು ನೀವು ಅರ್ಥೈಸಿಕೊಳ್ಳುವಿರಿ. ನೀವು ನಿಮ್ಮದೆ ಆದ ತರ್ಕ ಕುತರ್ಕಗಳಿಂದ ಬಾಹ್ಯ ಜಗತ್ತಿನ ಜನರ ಸಂಪರ್ಕವನ್ನು ಕಳೆದುಕೊಳ್ಳುವಿರಿ. ಮನುಷ್ಯ ಸಂಘಜೀವಿ ಎಲ್ಲರ ಸಹಕಾರವು ಮುಖ್ಯ ಎಂದು ತಿಳಿಯಿರಿ.

ಕನ್ಯಾ :-

ನಿನ್ನೆ ಬಿದ್ದ ಕೆಟ್ಟ ಕನಸುಗಳಿಂದಾಗಿ ನಿಮ್ಮಲ್ಲಿ ಲವಲವಿಕೆ ಕಂಡು ಬರುವುದಿಲ್ಲ. ನಿದ್ದೆಗೇಡು ಬುದ್ಧಿಗೇಡು ಎನ್ನುವಂತೆ ಸಣ್ಣಪುಟ್ಟ ಕ್ಷುಲ್ಲಕ ವಿಷಯಗಳ ಮೇಲೆ ಕೂಗಾಡುವಿರಿ. ಆದಷ್ಟು ತಾಳ್ಮೆ ಇರಲಿ.

ತುಲಾ:

class=”views-field views-field-field-tula”> class=”field-content”> class=”grid-12 mainnewsmargin-bottom”>

ಕೋರ್ಟು ಕಚೇರಿಯ ವಿಷಯಗಳು ಸರಾಗವಾಗಿ ನಡೆಯುವವು. ತೀರ್ಪು ಕೂಡಾ ನಿಮ್ಮ ಪರವಾಗಿ ಬರುವುದರಿಂದ ಮನಸ್ಸಿಗೆ ಸಂತಸವಾಗುವುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ.

ವೃಶ್ಚಿಕ :-

ಕಾಡಿನ ಸಿಂಹಕ್ಕೆ ಹಸಿವಿದ್ದರೂ ಅದು ಹುಲ್ಲು ತಿನ್ನುವುದಿಲ್ಲ. ಹಾಗೇಯೇ ಕೆಲವೊಮ್ಮೆ ನಿಮ್ಮಿಂದ ತಪ್ಪಾದರೂ ನೀವು ಕ್ಷಮೆಯಾಚಿಸುವುದಿಲ್ಲ. ಇದರಿಂದಾಗಿ ಜನರು ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುವರು. ನಡೆನುಡಿಯಲ್ಲಿ ಸೌಮ್ಯತೆ ಇರಲಿ.

ಧನಸ್ಸು:

ಇದುವರೆಗೂ ನಿಮ್ಮನ್ನು ವಿರೋಧಿಸುತ್ತಿದ್ದ ಜನರೇ ನಿಮ್ಮ ಸ್ನೇಹವನ್ನು ಬಯಸಿ ನಿಮ್ಮ ಬಳಿಬರುವರು. ಅವರು ನಿಜವಾದ ಕಾಳಜಿಯನ್ನು ತೋರಿದಲ್ಲಿ ಮಾತ್ರ ಸ್ನೇಹ ಸಂಬಂಧವನ್ನು ಮುಂದುವರೆಸಬಹುದು.

ಮಕರ :-

ನಿಮ್ಮ ಮತ್ತು ನಿಮ್ಮ ಗ್ರಾಹಕರ ನಡುವೆ ಇದ್ದ ಭಿನ್ನಾಭಿಪ್ರಾಯಗಳಿಗೆ ಮುಕ್ತಿ ದೊರೆಯುವುದು. ಈ ಹಿಂದೆ ತಿಳಿಯದೇ ಮಾಡಿದ ತಪ್ಪನ್ನೇ ಪುನಃ ಮಾಡುವುದು ಬುದ್ಧಿವಂತರ ಲಕ್ಷಣವಲ್ಲ. ಗುರು ಹಿರಿಯರ ಸಲಹೆ ಪಡೆಯಿರಿ.

ಕುಂಭ:-

ವ್ಯಾಪಾರ-ವ್ಯವಹಾರಗಳು ನಿಮ್ಮ ಅಪೇಕ್ಷೆ ಪಟ್ಟಂತೆ ಆಗುವುದು ಹಾಗೂ ನೀವು ಹಾಕಿದ ಬಂಡವಾಳಕ್ಕೂ ಮಿಗಿಲಾಗಿ ಲಾಭಾಂಶ ದೊರೆಯುವುದು. ಬಂದ ಲಾಭಾಂಶಗಳಲ್ಲಿ ಶೇಕಡ 10ರಷ್ಟು ದಾನ ಮಾಡಿ.

ಮೀನ :-

ಮನಸ್ಸಿನ ತಲ್ಲಣಗಳಿಂದ ಮುಕ್ತಿ ಹೊಂದಲು ಕುಲದೇವರ ಪ್ರಾರ್ಥನೆ ಮಾಡಿ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಕಂಡು ಬರುವುದು. ಶ್ರಮವಹಿಸಿ ಮಾಡುವ ಕೆಲಸಗಳಿಗೆ ತೊಂದರೆ ಬರುವ ಸಾಧ್ಯತೆ ಇದೆ. ಗಣಪತಿ ಪ್ರಾರ್ಥನೆ ಮಾಡಿ.