*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*
ಮಂಗಳವಾರ, 17 ಏಪ್ರಿಲ್ 2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672
ಸೂರ್ಯೋದಯ06:06:03 ಸೂರ್ಯಾಸ್ತ18:47:16 ಹಗಲಿನ ಅವಧಿ12:41:12 ರಾತ್ರಿಯ ಅವಧಿ11:17:56 ಚಂದ್ರೋದಯ07:04:48 ಚಂದ್ರಾಸ್ತ20:10:53
ಋತು:ವಸಂತ ಆಯನ:ಉತ್ತರಾಯಣ ಸಂವತ್ಸರ:ವಿಲಂಬಿ ಸಂವತ್ಸರ (ಉತ್ತರ):ವಿರೋಧಿಕೃತ್ ತಿಂಗಳು (ಅಮಾವಾಸ್ಯಾಂತ್ಯ):ಚೈತ್ರ ತಿಂಗಳು (ಹುಣ್ಣಿಮಾಂತ್ಯ):ವೈಶಾಖ ಪಕ್ಷ : ಶುಕ್ಲ ಪಕ್ಷ ತಿಥಿ : ದ್ವಿತೀಯ ನಕ್ಷತ್ರ : ಭರಣಿ ಯೋಗ : ಪ್ರೀತಿ ಪ್ರಥಮ ಕರಣ : ಬಾಳವ ಕೌಳವ ಸೂರ್ಯ ರಾಶಿ : ಮೇಷ ಚಂದ್ರ ರಾಶಿ : ಮೇಷ
ಮುಹೂರ್ತ
ರಾಹು ಕಾಲ15:37 – 17:12ಅಶುಭ ಯಮಘಂಡ ಕಾಲ09:16 – 10:52ಅಶುಭ ಗುಳಿಕ ಕಾಲ12:27 – 14:02 ಅಭಿಜಿತ್12:01 -12:52ಶುಭ ದುರ್ಮುಹೂರ್ತ08:38 – 09:29ಅಶುಭ ದುರ್ಮುಹೂರ್ತ23:19 – 24:10*ಅಶುಭ
ಮೇಷ:-
ನಿಮ್ಮ ಮಾತಿನ ಬಗ್ಗೆ ಸದಾ ಜಾಗೃತಿಯನ್ನು ಹೊಂದಬೇಕಾಗುವುದು. ನೀವು ಆಡಿದ ತಮಾಷೆ ಮಾತು ಪತಿಪತ್ನಿಯರಲ್ಲಿ ವಿರಸವುಂಟು ಮಾಡುವ ಸಾಧ್ಯತೆ ಹೆಚ್ಚು. ಹಾಗಾಗಿ ಎರಡು ಬಾರಿ ಚಿಂತಿಸಿ ಮಾತನ್ನು ಆಡಿ. ಒಳಿತಾಗುವುದು.
ವೃಷಭ :-
ಉತ್ತಮ ವಾಕ್ ಚತುರ್ಯರಾದ ನೀವು ಸಂದರ್ಭಕ್ಕೆ ತಕ್ಕಂತೆ ಮಾತನಾಡುವಿರಿ. ಹಾಗಾಗಿ ಪ್ರಭಾವಿ ವ್ಯಕ್ತಿಗಳು ನಿಮ್ಮ ಸಂಪರ್ಕಕ್ಕೆ ಸಿಗುವರು ಮತ್ತು ಸಭೆ-ಸಮಾರಂಭಗಳಿಗೆ ನಿಮ್ಮನ್ನೆ ನಿರೂಪಕರನ್ನಾಗಿ ನೇಮಿಸುವ ಸಾಧ್ಯತೆ ಇರುತ್ತದೆ.
ಮಿಥುನ:–
ವಿವಿಧ ರೀತಿಯ ಜನರನ್ನು ಇಂದು ಭೇಟಿಯಾಗಲಿದ್ದೀರಿ. ಮನಸ್ಸಿನ ಗೊಂದಲವನ್ನು ನಿರ್ಮಿಸುವವರ ಬಗ್ಗೆ ವಿಶೇಷವಾದ ಎಚ್ಚರಿಕೆಯಿರಲಿ. ಕೆಲ ಗ್ರಹಗಳ ಸಂಚಾರವು ಮಕ್ಕಳ ವಿದ್ಯೆಯಲ್ಲಿ ಹಿನ್ನಡೆ ಉಂಟು ಮಾಡುವುದು.
ಕಟಕ :-
ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳ್ಳೆಯದು. ಈ ಹಿಂದೆ ನಡೆದು ಹೋದ ಘಟನೆಗಳಿಗೆ ನೀವೆಷ್ಟು ಕಾರಣೀಭೂತರು ಎಂಬುದನ್ನು ಚಿಂತಿಸ. ಆದ ಘಟನೆಯನ್ನು ಪುನಃ ಮರುಕಳಿಸದಂತೆ ನೋಡಿಕೊಳ್ಳಿ.
ಸಿಂಹ:–
ಮನಸ್ಸನ್ನು ನಿರ್ಧರಿಸುವಂತಹ ತುರ್ತು ಶಕ್ತಿಯನ್ನು ಸಂಪಾದಿಸಿಕೊಳ್ಳಿ. ಆಂಜನೇಯ ಮಂತ್ರವನ್ನು ಇಲ್ಲವೆ ಹನುಮಾನ್ ಚಾಲೀಸನ್ನು ತಪ್ಪದೆ ಪಠಿಸಿ. ನಿರ್ಧಾರಗಳನ್ನು ತಳೆಯುವಾಗ ಹಿರಿಯರ ಸಲಹೆಯನ್ನು ಸ್ವೀಕರಿಸಿ.
ಕನ್ಯಾ :-
ನಿಮ್ಮ ಮನಸ್ಸನ್ನು ಘಾಸಿಗೊಳಿಸಿ ದುರ್ಬಲರನ್ನಾಗಿ ಮಾಡುವ ಸ್ನೇಹಿತರನ್ನು ಅಲಕ್ಷಿಸಿಬಿಡಿ. ನಿಮಗೆ ಧೈರ್ಯವನ್ನು ತುಂಬುವ ಮತ್ತು ಸಕಾರಾತ್ಮಕವಾಗಿ ಚಿಂತಿಸುವ ಜನರ ಸಂಪರ್ಕವನ್ನು ಹೊಂದಿ. ನಿಮ್ಮ ಮುಖದಲ್ಲಿ ಮಂದಹಾಸ ಮೂಡುವುದು.
ತುಲಾ: –
ಗೂಳಿಯಂತೆ ಮುನ್ನುಗ್ಗುವ ಸ್ವಭಾವ ತಪ್ಪೇನಲ್ಲ. ಆದರೆ ಪ್ರತಿಯೊಂದಕ್ಕು ಒಂದು ಇತಿಮಿತಿ ಇರುತ್ತದೆ. ಆತುರಗಾರನಿಗೆ ಬುದ್ಧಿಮಟ್ಟ ಕಡಿಮೆ ಎನ್ನುವಂತೆ ಎರಡೆರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗಿ.
ವೃಶ್ಚಿಕ :-
ನೀವು ಹೊಸದಾದ ಕಾಯಕಲ್ಪವೊಂದನ್ನು ನಿಮ್ಮ ವ್ಯಾಪಾರದಲ್ಲಿ ಒದಗಿಸಿಕೊಡಲು ಕಾಲ ಪಕ್ವವಾಗಿದೆ. ಇಂತಹ ಒಳ್ಳೆಯ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
ಧನಸ್ಸು: –
ನೀವು ಉತ್ತಮ ಕವಿಯಾಗಿದ್ದರೆ ಅಥವಾ ಉತ್ತಮ ನಳಪಾಕ ತಜ್ಞರಾಗಿದ್ದರೆ ನಿಮ್ಮ ಕೌಶಲ್ಯಕ್ಕೆ ಗೌರವ ತರುವಂತಹ ಕೆಲಸ ನಿಮ್ಮಿಂದಾಗುವುದು. ಎಲ್ಲರ ಬಾಯಲ್ಲಿಯೂ ನಿಮ್ಮ ಗುಣಗಾನ ನಡೆಯುವುದು.
ಮಕರ :-
ಸಂಶೋಧಕರಿಗೆ ತಾಂತ್ರಿಕ ಪರಿಣಿತರಿಗೆ ಒಳ್ಳೆಯ ದಿನ. ನಿಮ್ಮ ಸಂಶೋಧನಾ ಬರಹಗಳಿಗೆ ಮಾನ್ಯತೆ ದೊರೆತು ವೃತ್ತಪತ್ರಿಕೆಯಲ್ಲಿ ಆ ಲೇಖನವು ಪ್ರಕಟಗೊಳ್ಳುವ ಸಾಧ್ಯತೆ ಇರುತ್ತದೆ. ಗುರುವಿನ ಸ್ತೋತ್ರ ಪಠಿಸಿ.
ಕುಂಭ:-
ಮನೆಯ ನಾಲ್ಕು ಗೋಡೆಗಳ ಮಧ್ಯೆಯೇ ಕಾಲ ತಳ್ಳುವಂತಹ ಪರಿಸ್ಥಿತಿ ಎದುರಾಗಬಹುದು. ಹೊತ್ತು ಕಳೆಯುವುದು ಕಷ್ಟವಾಗುವುದು. ಪುರಾಣ ಪುರುಷರ ಅಥವಾ ಧಾರ್ಮಿಕ ಪುಸ್ತಕಗಳನ್ನು ಓದುವತ್ತ ಗಮನ ಕೊಡಿ. ಮನಸ್ಸು ಪ್ರಶಾಂತವಾಗುವುದು.
ಮೀನ :-
ಕುಟುಂಬದಲ್ಲಿನ ಅಸಮತೋಲನವನ್ನು ತಪ್ಪಿಸಲು ಮನೆಯ ಪ್ರತಿಯೊಬ್ಬ ಸದಸ್ಯರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ. ನಂತರ ನೀವು ತೀರ್ಮಾನ ಕೈಕೊಂಡಲ್ಲಿ ಎಲ್ಲರೂ ನಿಮ್ಮ ತೀರ್ಮಾನವನ್ನು ಒಪ್ಪುವ ಸಾಧ್ಯತೆ ಇರುತ್ತದೆ. ಆದರೆ ಒಬ್ಬರ ವಿಚಾರ ಮತ್ತೊಬ್ಬರ ಬಳಿ ಹೇಳದಿರಿ.