ಸಿನಿಮಾ

ದಂಡುಪಾಳ್ಯ-2 ಟ್ರೈಲರ್ ನೋಡಿದ್ರೆ, ಶಾಕ್ ಆಗ್ತೀರಾ !!!

By admin

May 28, 2017

ದಂಡುಪಾಳ್ಯ ತಂಡ ಮತ್ತೊಮ್ಮೆ ಬೆಳ್ಳಿತೆರೆಗೆ ಅಪ್ಪಳಿಸಲಿಕ್ಕೆ ಸಿದ್ಧವಾಗಿದೆ. ಈಗಾಗಲೇ ತನ್ನ ವಿಭಿನ್ನ ಪೋಸ್ಟರ್‍ಗಳಿಂಗ ಸಿನಿರಸಿಕರನ್ನು ಸೆಳೆದಿರುವ ಸಿನಿಮಾ ಶೀಘ್ರದಲ್ಲೇ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿರಿಸಲಿದೆ.

ಪ್ರಥಮ ಭಾಗ ದಂಡುಪಾಳ್ಯ ಚಿತ್ರರಸಿಕರು ಹಾಗು ವಿಮರ್ಶಕರನ್ನು ಮೆಚ್ಚಿಸಿತ್ತು. ಅದರ ಮುಂದುವರೆದ ಭಾಗವೇ ದಂಡುಪಾಳ್ಯ ಭಾಗ-2. ಈಗ ಮತ್ತೆ ಆ ಕರಾಳ ಪಾತಕಿಗಳ ಮತ್ತಷ್ಟು ವಿಕೃತ ಕೃತ್ಯಗಳನ್ನ ಬೆಳ್ಳಿತೆರೆ ಮೇಲೆ ಅಷ್ಟೇ ರೋಚಕವಾಗಿ ಬಿಚ್ಚಿಡಲು ಚಿತ್ರತಂಡ ಹೊರಟಿದೆ.

ಇಂದು ಖಾಸಗಿ ಹೋಟೆಲ್‍ನಲ್ಲಿ ಶ್ರೀನಿವಾಸ್ ರಾಜು ಸಾರಥ್ಯದ ದಂಡುಪಾಳ್ಯ 2 ಚಿತ್ರದ ಟ್ರೈಲರ್ ಲಾಂಚ್ ಮಾಡಲಾಯ್ತು. ವೆಂಕಟೇಶ್ ನಿರ್ಮಾಣದಲ್ಲಿ ಮೂಡಿಬಂದಿರೋ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಇಲ್ಲಿ ಓದಿ:-“ಉಪ್ಪಿ-ರುಪ್ಪಿ” ಏನಿದು ಉಪ್ಪಿಯ ಹೊಸ ಅವತಾರ !!!

ಚಿತ್ರದಲ್ಲಿ ಮಕರಂದ್ ದೇಶ್‍ಪಾಂಡೆ, ಪೂಜಾಗಾಂಧಿ, ಸಂಜನಾ, ರವಿಶಂಕರ್, ರವಿಕಾಳೆ, ಶೃತಿ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ. ಟ್ರೈಲರ್ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿದೆ.