ಶಾಲಾ ಹಾಸ್ಟೆಲ್‌ವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ. ಪುಟ್ಟ ಮಕ್ಕಳಿರುವ ಶಾಲೆ,
ಹಾಸ್ಟೆಲ್‌ಗಳಲ್ಲಿ ಎಷ್ಟು ಮುಂಜಾಗ್ರತೆ ವಹಿಸಿದರೂ ಸಾಲದು. ಹಾಗಿರುವಾಗ ಬೆಂಕಿ, ಶಿಥಿಲ ಕಟ್ಟಡಗಳ ಬಗ್ಗೆ ನಿಗಾ ಇಡಬೇಕಾಗಿರುವುದು ಆಡಳಿತ ಮಂಡಳಿಯ ಕರ್ತವ್ಯವಾಗಿದೆ.
ಶಾಲಾ ಹಾಸ್ಟೆಲ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ 10 ವರ್ಷದ ವಿದ್ಯಾರ್ಥಿ ಬೆಂಕಿಯಲ್ಲೇ ಬೆಂದು ಮೃತಪಟ್ಟಿದ್ದಾನೆ. ತೆಲಂಗಾಣಾದ ಖಮ್ಮಮ್‌ನಲ್ಲಿ ಈ ಘಟನೆ ನಡೆದಿದೆ. ಬಾಲಕನಿಗೆ ಹಾಸ್ಟೆಲ್‌ನಿಂದ ಹೊರಬರಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ.
ಅಷ್ಟೇ ಅಲ್ಲದೆ ಹಾಸ್ಟೆಲ್ ರೂಮ್ ಕೂಡ ಚಿಕ್ಕದಾಗಿದ್ದು ಹೊಗೆ ಆವರಿಸಿಕೊಂಡಾಗ ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನೂ ರಕ್ಷಣಾಕಾರ್ಯ ಮುಂದುವರೆದಿದೆ.