ಆರೋಗ್ಯ

ತುಂಬಾ ಜನಕ್ಕೆ ಮಧ್ಯಾಹ್ನದ ಲಂಚ್ ಮಾಡಿದ ತಕ್ಷಣ ನಿದ್ರೆ ಬರುತ್ತದೆ ಏಕೆ ಗೊತ್ತಾ..? ತಿಳಿಯಲು ಈ ಲೇಖನ ಓದಿ ..

By admin

November 24, 2017

ಮನುಷ್ಯನಿಗೆ ಉಸಿರಾಡುವುದು, ನೀರು ಕುಡಿಯುವುದು, ಆಹಾರ ತಿನ್ನುವುದು ಎಷ್ಟು ಮುಖ್ಯವೋ ನಿದ್ರೆ ಮಾಡುವುದು ಸಹ ಅಷ್ಟೇ ಮುಖ್ಯ…ಆದರೆ ತುಂಬಾ ಜನರಿಗೆ ಆ ನಿದ್ರೆಯೇ ದೊಡ್ಡ ಸಮಸ್ಯೆಯಾಗಿದೆ, ರಾತ್ರಿಯೆಲ್ಲಾ ನಿದ್ರೆ ಬರುವುದಿಲ್ಲ ಹಗಲೆಲ್ಲಾ ಕಣ್ಣು ಮುಚ್ಚುತ್ತಲೇ ಇರುತ್ತಾರೆ, ಎಷ್ಟು ಪ್ರಯತ್ನಿಸಿದರು ರಾತ್ರಿ ಸಮಯ ಬಾರದ ನಿದ್ರೆ ಮಧ್ಯಾಹ್ನದ ಲಂಚ್ ಮಾಡಿದ ತಕ್ಷಣ ಅದು ಬಂದು ಬಿಡುತ್ತದೆ.ಹಾಗೆ ಮಧ್ಯಾಹ್ನ ನಿದ್ರೆ ಮಾಡುವುದರಿಂದ ರಾತ್ರಿ ನಿದ್ರೆ ಬರುವುದಿಲ್ಲ… ಆದರೆ ಹೀಗೆ ಯಾಕಾಗುತ್ತದೆಂದು ಗೊತ್ತಾ..?

ಹೌದು ಹಾಗೆ ತಿನ್ನುವುದರಿಂದ ಅವರ ಶರೀರದಲ್ಲಿರುವ ಕ್ಲೋಮೋಗ್ರಂಥಿ ಇನ್ಸುಲಿನ್ ಅನ್ನು ಹೆಚ್ಚಾಗಿ ಬಿಡುಗಡೆ ಮಾಡುತ್ತದೆ, ಹಾಗೆ ಮಾಡುವುದರಿಂದ ಅವರ ಬ್ಲಡ್ ಷುಗರ್ ಕಂಟ್ರೋಲ್ ನಲ್ಲಿರುತ್ತದೆ, ಹಾಗೆ ಮಾಡುವ ಕ್ರಮದಲ್ಲಿ ಫಲಿತವಾಗಿ ಸೆರಟೋನಿನ್, ಮೆಲಟೌನಿನ್ ಎಂಬ ಎರಡು ಹಾರ್ಮೋನ್ಗಳನ್ನು ಮೆದುಳು ಉತ್ಪತ್ತಿ ಮಾಡುತ್ತದೆ. ನಿಜಕ್ಕೆ ಮೆಲಟೌನಿನ್ ಎನ್ನುವುದು ನಿದ್ರೆ ಹಾರ್ಮೋನ್. ಅದು ನಿದ್ರೆಯನ್ನು ಹೆಚ್ಚಿಸುತ್ತದೆ. ಅದಕ್ಕೆ ಮಧ್ಯಾಹ್ನದ ಲಂಚ್ ಹೆಚ್ಚಾಗಿ ತಿಂದರೆ ತುಂಬಾ ಜನರಿಗೆ ನಿದ್ರೆ ಬರುತ್ತದೆ. ಅದಕ್ಕೆ ಮಧ್ಯಾಹ್ನದ ಊಟ ಮಿತಿಯಾಗಿ ತಿನ್ನುವುದು ಅಭ್ಯಾಸ ಮಾಡಿಕೊಳ್ಳಬೇಕು.

ಕೇವಲ ಹಾರ್ಮೋನ್ ನಿಂದಲೇ ಅಲ್ಲ ನಾವು ಮಧ್ಯಾಹ್ನದ ವೇಳೆ ಹೆಚ್ಚಾಗಿ ತಿನ್ನುವುದರಿಂದ ಅವರ ಶರೀರ ಆ ಅಹಾರವನ್ನು ಅರಗಿಸಿಕೊಳ್ಳಲು 60 – 70 ಶೇಕಡ ಶಕ್ತಿಯನ್ನು ವಿನಿಯೋಗವಾಗುತ್ತದೆ, ಈ ಕ್ರಮದಲ್ಲಿ ನಮಗೆ ಬೇರೆ ಯಾವ ಕೆಲಸ ಮಾಡಲಾಗುವುದಿಲ್ಲ, ಮತ್ತು ಸುಸ್ತಾಗಿ ನಿದ್ರೆ ಬರುತ್ತದೆ, ಕೇವಲ ಮಧ್ಯಾಹ್ನದ ಊಟ ಮಾತ್ರವಲ್ಲ ರಾತ್ರಿ ಊಟ ಸಹ ಹೀಗೆ ಹೆಚ್ಚಾಗಿ ತಿಂದರೆ ನಮ್ಮ ಶರೀರಕ್ಕೆ ತಕ್ಕ ವ್ಯಾಯಾಮ ಇಲ್ಲದೆ ಶರೀರದಲ್ಲಿ ಕೊಬ್ಬಿನಾಂಶ ಹೆಚ್ಚಾಗಿ ಆಕ್ಟಿವ್ನೆಸ್ ಕಳೆದುಕೊಳ್ಳುತ್ತದೆ, ಆನಂತರ ಯಾವಾಗಲೂ ನಾವು ನಿದ್ರೆ ವಿಮುಕ್ತಿ ಆಗುವುದು ಖಚಿತ.

ಅದಕ್ಕೆ ಬ್ರೇಕ್ ಫಾಸ್ಟ್ ಹೆಚ್ಚಾಗಿ ತಿನ್ನುವುದು ಆ ನಂತರ ಲಂಚ್ ಡಿನ್ನರ್ ಕಡಿಮೆಯಾಗಿ ತಿನ್ನುವುದಾದರೆ ನಮ್ಮ ಶರೀರ ಆರೋಗ್ಯ ಕೆಡುವುದಿಲ್ಲ, ಆಕ್ಟಿವ್ ಆಗಿರುತ್ತದೆ. ಹಾಗೆಯೇ ನಮಗೆ ಅತೀ ನಿದ್ದೆ ಸಮಸ್ಯೆ ಸಹ ಇರುವುದಿಲ್ಲ. ಆದರೆ ತುಂಬಾ ಕಡಿಮೆ ತಿಂದರೆ ಮಧ್ಯದಲ್ಲಿ ಹಸಿವಾಗುತ್ತದೆ ಅಲ್ವಾ ಎಂದುಕೊಳ್ಳಬಹುದು, ಹಾಗೆ ಹಸಿವಾದಾಗ ಯಾವುದಾದರು ಹಣ್ಣುಗಳು, ಇಲ್ಲದಿದ್ದರೆ ನಟ್ಸ್ ಆದರು ಮಿತಿಯಾಗಿ ತಿಂದರೆ ಶರೀರಕ್ಕೆ ಬೇಕಾದ ಪೋಷಕಾಂಶಗಳು ಸಿಗುವುದಲ್ಲದೆ ಇಂತಹ ನಿದ್ರೆ ಸಮಸ್ಯೆಗಳು ಬರುವುದಿಲ್ಲ.